ಸಿನಿಮಾಗಳಿಗಿಂತ ಬಹಳಷ್ಟು ವಿವಾದ, ಹುಸಿ ಮುನಿಸುಗಳ ಮೂಲಕವೇ ಸದ್ದು ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್. ಇತ್ತೀಚಿಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕಂಗನಾ ಪತ್ರಕರ್ತರ ಜೊತೆ ಜಗಳಕ್ಕೆ ನಿಂತ ಹಿನ್ನೆಲೆಯಲ್ಲಿ ಕಂಗನಾ ಅವರಿಗೆ ಸಂಬಂಧಪಟ್ಟ ಯಾವುದೇ ವಿಡಿಯೋ ಸುದ್ದಿಯನ್ನು ಕವರೇಜ್ ಮಾಡದಂತೆ ಎಂಟಟೈನ್ ಮೆಂಟ್ ಜರ್ನಲಿಸ್ಟ್ ಗಿಲ್ಟ್ ಆಫ್ ಇಂಡಿಯಾ ನಿಷೇಧ ಹೇರಲು ನಿರ್ಧರಿಸಿದೆ.

ಬಿಡುಗಡೆಗೆ ಸಿದ್ದಗೊಂಡಿರುವ ಕಂಗನಾ ಅಭಿನಯದ ಜಡ್ಜ್ ಮೆಂಟಲ್ ಹೈ ಕ್ಯಾ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಲ್ಲಿರುವ ಚಿತ್ರತಂಡ ಇತ್ತೀಚಿಗೆ ಆಡಿಯೋ ರಿಲೀಸ್ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯನ್ನು ಏರ್ಪಡಿಸಿತ್ತು. ಅಲ್ಲಿ ಕಂಗನಾ ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟು, ಪತ್ರಕರ್ತ ಜಸ್ಟಿನ್ ರಾವ್, ಕಂಗನಾ ಅವರಗೆ ಪ್ರಶ್ನೆ ಕೇಳಲು ಮುಂದಾದಾಗ ಕಂಗನಾ ಜಸ್ಟಿನ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಕಂಗನಾ ಅಭಿನಯದ ಮಣಿಕರ್ಣಿಕ ಸಿನಿಮಾದ ಸಂದರ್ಭದಲ್ಲಿ ಇದೇ ಪತ್ರಕರ್ತ ಕಂಗನಾ ವಿರುದ್ಧ ಸುದ್ದಿ ಪ್ರಕಟ ಮಾಡಿರುವ ಬಗ್ಗೆ ಕಂಗನಾ ಗರಂ ಆಗಿದ್ದು, ಜಡ್ಜ್ ಮೆಂಟಲ್ ಹೈ ಕ್ಯಾ ಚಿತ್ರದ ಸಂದರ್ಭದಲ್ಲಿ ಜಗಳ ತೆಗೆದಿದ್ದಾರೆ ಎನ್ನಲಾಗುತ್ತಿದೆ.

ಅಲ್ಲದೇ ಜಸ್ಟಿನ್ ರಾವ್ ಅವರನ್ನು ಕಂಗನಾ ಮಣಿಕರ್ಣಿಕಾ ಸಿನಿಮಾ ಅಷ್ಟು ಕೆಟ್ಟದಾಗಿದೆಯಾ, ರಾಷ್ಟ್ರೀಯತೆಯ ಬಗ್ಗೆ ಸಿನಿಮಾ ಮಾಡಿದ್ದೆ ತಪ್ಪಾ? ಎಂದು ಜಸ್ಟಿನ್ ಅವರನ್ನು ಪ್ರಶ್ನಿಸಿದ್ದಾರೆ. ಕಂಗನಾ ಮಾತಿಗೆ ಪ್ರತಿಕ್ರಿಯಿಸಿದ ಜಸ್ಟಿನ್ ಪತ್ರಕರ್ತರ ಬಾಯಿ ಮುಚ್ಚಿಸಲು ಹೋಗಬೇಡಿ. ನೆಗೆಟಿವ್ ಸುದ್ದಿ ಮಾಡಿದ ಕಾರಣಕ್ಕೆ ನನ್ನ ಬಗ್ಗೆ ಅಪಪ್ರಚಾರದ ಅಭಿಯಾನ ಮಾಡಿದ್ದೀರಾ ಕಂಗನಾ ಅವರನ್ನು ಆರೋಪಿಸಿದ್ದಾರೆ. ಇಬ್ಬರ ಜಗಳ ತಾರಕ್ಕೇರಿ ಕೊನೆಗೆ ಕಂಗನಾ ಕ್ಷಮೆಯಾಚಿಸಬೇಕೆಂದು ಪತ್ರಕರ್ತರು ಪಟ್ಟು ಹಿಡಿದಿದ್ದಾರೆ. ಆದ್ರೆ ಕಂಗನಾ ಕ್ಷಮೆಯಾಚಿಸಲು ಒಪ್ಪಿಕೊಂಡಿಲ್ಲ. ಒಂದು ವೇಳೆ ಕಂಗನಾ ಕ್ಷಮೆ ಕೇಳದಿದ್ದರೆ ಅವರಿಗೆ ಸಂಬಂದಿಸಿದ ಸುದ್ದಿಯನ್ನು ಕವರೇಜ್ ಮಾಡದಂತೆ ಪತ್ರಕರ್ತರೆಲ್ಲರೂ ಒಕ್ಕೊರಲಿನ ನಿರ್ಧಾರಕ್ಕೆ ಬಂದಿದ್ದಾರೆ.

CG ARUN

ಇನ್ ಸ್ಟಾಗ್ರಾಂ ಖಾತೆ ತೆರೆದ ರಾಮ್ ಚರಣ್ ತೇಜ್!

Previous article

ಸ್ವಿಮ್ ಸೂಟ್ ನಲ್ಲಿ ಪ್ರಿಯಾಂಕ ಚೋಪ್ರಾ!

Next article

You may also like

1 Comment

  1. Hello there, You have done an incredible job. I will definitely digg it
    and personally recommend to my friends. I am confident they will be benefited from this site. http://dominoqiu.link/ref.php?ref=HONEYWII88

Leave a reply

Your email address will not be published. Required fields are marked *