ಈ ಮಾತು ಕೇಳಿದರೆ ನಾಡು, ನುಡಿಯ ಬಗ್ಗೆ ಒಲವಿಟ್ಟುಕೊಂಡಿರುವ ಯಾರಿಗೇ ಆದರೂ ಮೈಯೆಲ್ಲಾ ಉರಿಯದೇ ಇರೋದಿಲ್ಲ. ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದ ಬಗ್ಗೆ ಸಿನಿಮಾ ಮಾಡುವುದಾಗಿ ಹೇಳಿ ಬೋಧನೆ ಕೊಟ್ಟವರೂ ಇದ್ದಾರೆ. ಆದರೆ, ಒಂದೊಳ್ಳೆ ಕಥೆ, ಮನರಂಜನೆ, ಒಂದಿಷ್ಟು ಭಯ ಹುಟ್ಟಿಸುವ ಮೂಲಕ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸಿದ ಸಿನಿಮಾ ಕನ್ನಡ್ ಗೊತ್ತಿಲ್ಲ.

ದಿನೇ ದಿನೇ ಈ ಚಿತ್ರದ ಕುರಿತಾಗಿ ಒಳ್ಳೇ ಮಾತುಗಳು ಕೇಳಿಬರುತ್ತಿವೆ. ಲಾಟು ಲಾಟು ಸಿನಿಮಾ ಬಿಡುಗಡೆಯಾಗುತ್ತಿದ್ದರೂ, ಜನ ಗೊಂದಲಗಳ ಮಧ್ಯೆಯೂ ‘ಕನ್ನಡ್ ಗೊತ್ತಿಲ್ಲವನ್ನು ನೋಡಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹರಿಪಿಯಾ ಮತ್ತು ಮಜಾ ಟಾಕೀಸ್  ಪವನ್ ನಟನೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹರಿಪ್ರಿಯಾ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ಆಕೆ ಆಯ್ಕೆ ಮಾಡಿಕೊಂಡ ಪಾತ್ರ ಮತ್ತು ಸಿನಿಮಾಗಳಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಕನ್ನಡ್ ಗೊತ್ತಿಲ್ಲದಲ್ಲಿ ಈಕೆ ಬೋಲ್ಡ್ ಆಗಿ ನಟಿಸಿದ್ದಾರೆ. ತೆರೆ ಮೇಲೆ ಹರಿಪ್ರಿಯಾ ಗತ್ತು ಗೈರತ್ತುಗಳನ್ನು ನೋಡೋದೇ ಒಂದು ಚೆಂದ. ಇನ್ನು ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡು ನಗಿಸಲಷ್ಟೇ ಸೀಮಿತವಾಗಿದ್ದ ಪವನ್ ಇಲ್ಲಿ ಯಾರೂ ಊಹಿಸಲೂ ಸಾಧ್ಯವಾಗದ ಪಾತ್ರ ನಿರ್ವಹಿಸಿದ್ದಾರೆ. ಅದೇನೆನ್ನೋದು ತೆರೆ ಮೇಲೆ ನೋಡಿದರೇನೆ ಚೆಂದ.

ಇಂಥ ಚಿತ್ರಗಳು ಗೆದ್ದರೆ, ಇನ್ನೂ ಒಂದಿಷ್ಟು ಹೊಸ ಪ್ರಯತ್ನಗಳಾಗುತ್ತವೆ. ಹೊಸ ನಿರ್ದೇಶಕರನ್ನೂ ಬೆಂಬಲಿಸಿದಂತಾಗುತ್ತದೆ. ಕೂಡಲೇ ಟಿಕೇಟು ಬುಕ್ ಮಾಡಿ, ಕನ್ನಡ್ ಗೊತ್ತಿಲ್ಲ ನೋಡಿಬನ್ನಿ…

CG ARUN

ಮದುವೆಯಾದವನಿಗೆ ಅದರದ್ದೇ ಸಮಸ್ಯೆ!

Previous article

ರಾಹುಲ್ ಐನಾಪುರ ಗತ್ತು ನೋಡಿ!

Next article

You may also like

Comments

Leave a reply

Your email address will not be published. Required fields are marked *