ಖುಷಿಗಾಗಿ ಹಾಡುವ ಶೋ ಎಂದೇ ಜನಪ್ರಿಯವಾಗಿರುವ ಫೇಮಸ್ ರಿಯಾಲಿಟಿ ಶೋ ಕನ್ನಡ ಕೋಗಿಲೆ. ಮೊದಲ ಸೀಜನ್ ಮುಗಿಸಿಕೊಂಡು ಎರಡನೇ ಸೀಜನ್ನಿಗೂ ಫುಲ್ ಸ್ಟಾಪ್ ಇಡಲು ರೆಡಿಯಾಗಿರುವ ಕನ್ನಡ ಕೋಗಿಲೆ ಈಗಾಗಲೇ ಫಿನಾಲೆ ಮುಗಿಸಿಕೊಂಡಿದೆ. ಆಗಸ್ಟ್ 3 ಮತ್ತು 4ಕ್ಕೆ ರಾತ್ರಿ 8ರಿಂದ ಕನ್ನಡ ಕೋಗಿಲೆ ಗ್ರಾಂಡ್ ಫಿನಾಲೆ ಪ್ರಸಾರವಾಗಲಿದೆ ಎಂದು ಈಗಾಗಲೇ ಕಲರ್ಸ್ ಸೂಪರ್ ಚಾನೆಲ್ ಪ್ರೋಮೋ ಕೂಡ ಕಟ್ ಮಾಡಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಕೋಗಿಲೆ ಗ್ರ್ಯಾಂಡ್ ಫಿನಾಲೆ ರಿಸಲ್ಟ್ ಲೀಕಾಗಿ ಹೋಗಿದೆ.
ಪ್ರಾರಂಭದಿಂದಲೂ ಸಾಕಷ್ಟು ಹಣಾಹಣಿಯಲ್ಲಿಯೇ ಸಾಗುತ್ತ ಬಂದ ಕನ್ನಡ ಕೋಗಿಲೆ ಗ್ಯಾಂಡ್ ಫಿನಾಲೆಗೆ ಮೈಸೂರಿನ ಆಲಾಪ್, ಕೊಪ್ಪಳದ ಮ್ಯೂಸಿಕ್ ಸೆನ್ಸೇಷನ್ ಸ್ಟಾರ್ ಏಳು ವರ್ಷದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಹ್ಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ತಲುಪಿದ್ದರು. ಇವರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟು ಅಂತಿಮವಾಗಿ ರಿಸಲ್ಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ ಕನ್ನಡದ ಕೋಗಿಲೆ ಗ್ರ್ಯಾಂಡ್ ಫಿನಾಲೆ ಕಿರೀಟವನ್ನು ಹಾವೇರಿಯ ಖಾಸಿಂ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಮೊದಲನೇ ರನ್ನರ್ ಅಪ್ ಗಳಾಗಿ ಬೆಂಗಳೂರಿನ ನೀತು ಹಾಗೂ ಶಿವಮೊಗ್ಗದ ಪಾರ್ಥ, ಇನ್ನು ಎರಡನೇ ರನ್ನರ್ ಅಪ್ ಆಗಿ ಕೊಪ್ಪಳದ ಅರ್ಜುನ್ ಇಟಗಿ ವಿಜಯದ ಮಾಲೆಯನ್ನು ಧರಿಸಿದ್ದಾರೆ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಯಾವುದಾದರೂ ರಿಯಾಲಿಟಿ ಶೋಗಳಲ್ಲಿ ಹಾಡಿದ ಸ್ಪರ್ಧಿಗಳನ್ನು ಸೀಸನ್ ನಂತರ ಸಿನಿಮಾಗಳಿಗೆ ಅವಕಾಶ ನೀಡುವುದು ವಾಡಿಕೆ. ಆದರೆ ಕನ್ನಡ ಕೋಗಿಲೆ ಸೀಸನ್ ಇನ್ನು ನಡೆಯುತ್ತಿರುವಾಗಲೇ ಸ್ಪರ್ಧಿಗಳು ಸಿನಿಮಾಗಳಲ್ಲಿ ಅವಕಾಶ ಪಡೆದಿರುವುದು ಕನ್ನಡ ಕೋಗಿಲೆಯ ಹೆಗ್ಗಳಿಕೆ. ಇನ್ನು ಕನ್ನಡ ಕೋಗಿಲೆಗೆ ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದು, ‘ಕನ್ನಡ ಕೋಗಿಲೆ’ಯನ್ನು ಸಿರಿ ನಡೆಸಿಕೊಡುತ್ತಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಸಂಗೀತ ಮಾಂತ್ರಿಕ ಗುರುಕಿರಣ್ ವಿಶೇಷ ತೀರ್ಪಗಾರರಾಗಿದ್ದರು.
No Comment! Be the first one.