ಕಡಲತೀರದ ಕಾಲ್ಪನಿಕ ಊರು ಅಮರಾವತಿಯಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ “ಅಮರಾವತಿ ಪೊಲೀಸ್ ಸ್ಟೇಷನ್”. ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟೀಸರನ್ನು ದಿ.ಲೀಲಾವತಿ ಅವರ ಪುತ್ರ, ಹಿರಿಯನಟ ವಿನೋದ್ ರಾಜ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಅಮರಾವತಿ ಕರಾವಳಿಯ ಒಂದು ಭಾಗ, ಇಲ್ಲಿ ಮುತ್ತೂ ಸಿಗುತ್ತೆ, ಮೃತ್ಯುನೂ ಸಿಗುತ್ತೆ, ಇಲ್ಲಿನ ಸಮುದ್ರದ ಅಲೆ ಕಲೆನೂ ಹೇಳುತ್ತೆ, ಎಗ್ರಾಡುದ್ರೆ ತಲೆನೂ ಕೇಳುತ್ತೆ’ ಎನ್ನುವ ಕ್ಯಾಚಿ ಡೈಲಾಗ್ ಹೊಂದಿರುವ ಟೀಸರ್ ನ್ನು ನೋಡಿದ ಎಲ್ಲರಲ್ಲೂ ಸಿನಿಮಾ ಹೇಗಿರಬಹುದು, ಒಮ್ಮೆ ನೋಡಲೇಬೇಕೆಂಬ ಕುತೂಹಲ ಕೆರಳಿಸುತ್ತದೆ.
ಈ ಟೀಸರ್ ಕುರಿತಂತೆ ಮಾತನಾಡಿದ ವಿನೋದ್ ರಾಜ್, ‘ಅಮರಾವತಿ ಚಿತ್ರದ ಟೀಸರ್ ನಾನೂ ನೋಡಿದೆ. ವಿಶೇಷವಾದ ಮರ್ಡರ್ ಮಿಸ್ಟ್ರಿ, ಹೀರೋ ಆಗಲಿ, ಹೀರೋಯಿನ್ ಆಗಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನೋಡುವಾಗ ಏನಿರಬಹುದು ಅಂತ ಕುತೂಹಲ ಮೂಡಿಸುತ್ತದೆ. ಆ ತಂಡ ಪಟ್ಟಿರುವ ಶ್ರಮ ಎದ್ದು ಕಾಣಿಸುತ್ತಿದೆ. ಕನ್ನಡಿಗರು ಚಲನಚಿತ್ರ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಅದೇರೀತಿ ಈ ತಂಡಕ್ಕೂ ನಿಮ್ಮ ಬೆಂಬಲ ಇರಲಿ ಎಂದು ಕೇಳಿಕೊಂಡರು.
ಇದ್ದಕ್ಕಿದ್ದ ಹಾಗೆ ಕಾಣೆಯಾಗುವ ಊರಗೌಡ, ಆತನ ಪತ್ತೆಹಚ್ಚಲು ಬಂದ ಪೋಲೀಸ್ ಕೂಡ ಕಾಣೆಯಾದಾಗ ಇದೆಲ್ಲದರ ಹಿಂದೆ ಇರುವ ಮರ್ಮ ಏನೆಂಬುದೆ ಅಮರಾವತಿ ಪೊಲೀಸ್ ಸ್ಟೇಷನ್ ಕಾನ್ಸೆಪ್ಟ್.
ಪುನೀತ್ ಅರಸೀಕೆರೆ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಎಸ್.ಎ.ಆರ್. ಪ್ರೊಡಕ್ಷನ್ಸ್ ಲಾಛನದಲ್ಲಿ ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ, ಧರ್ಮ ಕೀರ್ತಿರಾಜ್ ಚಿತ್ರದ ನಾಯಕನಾಗಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ವೇದ್ವಿಕ ನಾಯಕಿ ಪಾತ್ರ ಮಾಡಿದ್ದಾರೆ. ಹಿರಿಯನಟಿ ಭವ್ಯ, ಧರ್ಮ, ಸಾಧುಕೋಕಿಲ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಉಳಿದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ೪ ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ, ವಿ.ರಮೇಶ್ ಬಾಬು ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ, ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಶಿವು ಕರಗುಂದ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
No Comment! Be the first one.