ಇತ್ತೀಚಿಗಷ್ಟೇ ಫಿನಾಲೆ ಮುಗಿಸಿಕೊಂಡ ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಇದೇ ಆಗಸ್ಟ್ 31ರಿಂದ ಕನ್ನಡ ಕೋಗಿಲೆ ಸೂಪರ್ ಸೀಸನ್ ಎಂಬ ಕಾರ್ಯಕ್ರಮವನ್ನು ಆರಂಭಿಸಲಿದೆ. ಬೇರೆ ಸಂಗೀತ ಸ್ಪರ್ಧೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೂದಲೆಳೆಯ ಅಂತರದಲ್ಲಿ ಗೆಲುವಿನ ನಗೆ ಬೀರದವರು ಕನ್ನಡ ಕೋಗಿಲೆ ಸೂಪರ್ ಸೀಸನ್ ನ ಹಣಾಹಣಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.
‘ಕನ್ನಡ ಕೋಗಿಲೆ’ ಮೊದಲನೇ ಆವೃತ್ತಿಯ ಫೈನಲ್ ಸುತ್ತಿನ ಸ್ಪರ್ಧಿಗಳಾದ ಪುತ್ತೂರಿನ ಅಖಿಲಾ ಪಜಿಮಣ್ಣು, ರಾಯಚೂರಿನ ಕರಿಬಸವ ಹಾಗೂ ಎರಡನೇ ಆವೃತ್ತಿಯ ರನ್ನರ್ ಅಪ್ಗಳಾದ ಶಿವಮೊಗ್ಗದ ಪಾರ್ಥ ಚಿರಂತನ್ ಮತ್ತು ಬೆಂಗಳೂರಿನ ನೀತೂ ಸುಬ್ರಹ್ಮಣ್ಯಂ ಅವರು ಪ್ರಶಸ್ತಿಗಾಗಿ ಮತ್ತೊಮ್ಮೆ ಹೋರಾಡಲಿದ್ದಾರೆ. ಇವರಲ್ಲದೇ ಮನೋಜವಂ ಆತ್ರೇಯ, ಪುರುಷೋತ್ತಮ, ಸ್ಪರ್ಶ ಆರ್.ಕೆ., ನಿಹಾರಿಕಾ, ನಿತಿನ್ ರಾಜಾರಾಂ ಶಾಸ್ತ್ರಿ, ದರ್ಶಿನಿ ಶೆಟ್ಟಿ, ಅನಂತರಾಜ್ ಮಿಸ್ತ್ರಿ, ಅರುಂಧತಿ ವಸಿಷ್ಠ, ಅದಿತಿ ಮತ್ತು ತನುಷ್ ರಾಜ್ ಕೂಡಾ ಸ್ಪರ್ಧೆಯಲ್ಲಿ ಸೆಣೆಸಾಡಲಿದ್ಧಾರೆ. ಇನ್ನು ತೀರ್ಪುಗಾರರಾಗಿ ಸಾಧು ಕೋಕಿಲಾ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ಇರಲಿದ್ದು, ಸಿರಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.
No Comment! Be the first one.