ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟಿಸಿರೋ ಕವಚ ಚಿತ್ರದ ಹಕ್ಕುಗಳಿಗಾಗಿ ಆರಂಭದಿಂದಲೂ ಪೈಪೋಟಿಯಿತ್ತು. ಇದೀಗ ಭಾರೀ ಮೊತ್ತಕ್ಕೆ ಕವಚ ಚಿತ್ರದ ಹಕ್ಕುಗಳು ಮಾರಾಟವಾಗಿದೆ. ಅಷ್ಟೇ ದೊಡ್ಡ ಮೊತ್ತ ಆಡಿಯೋ ಹಕ್ಕುಗಳಿಗೂ ಸಿಕ್ಕಿದೆ.
ಕವಚ ಚಿತ್ರದ ಹಕ್ಕುಗಳನ್ನು ಸ್ಟಾರ್ ಸುವರ್ಣ ವಾಹಿನಿ ಮೂರೂವರೆ ಕೋಟಿಗೆ ಖರೀದಿಸಿದೆ. ಇದರ ಆಡಿಯೋ ಹಕ್ಕುಗಳನ್ನು ಝೀ ಮ್ಯೂಸಿಕ್ ನಲವತ್ತೆರಡು ಲಕ್ಷಗಳಿಗೆ ಕೊಂಡುಕೊಂಡಿದೆ. ಕನ್ನಡ ಚಿತ್ರಗಳ ಮಟ್ಟಿಗೆ ಇದು ನಿಜಕ್ಕೂ ದೊಡ್ಡ ಮೊತ್ತ. ಈ ಮೂಲಕ ಕವಚ ನಿರ್ಮಾಪಕರಿಗೆ ಬಿಡುಗಡೆಗೂ ಮುನ್ನವೇ ಬಲವಾದೊಂದು ರಕ್ಷಣಾ ಕವಚ ಸಿಕ್ಕಂತಾಗಿದೆ.
ಕವಚ ಇಂಥಾ ದಾಖಲೆ ಸೃಷ್ಟಿಸಲು ಕಾರಣ ಇದರ ಚೆಂದದ ಕಥೆ. ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿ. ಇದು ಮಲೆಯಾಳ ಚಿತ್ರದ ರೀಮೇಕ್. ಆದರೆ ಜಿಆರ್ವಿ ವಾಸು ಇದೊಂದು ರೀಮೇಕ್ ಎಂಬುದನ್ನೇ ಮರೆಸುವಂತೆ ಒಟ್ಟಾರೆ ಚಿತ್ರವನ್ನು ರೂಪಿಸಿದ್ದಾರಂತೆ. ಇನ್ನುಳಿದಂತೆ ಶಿವಣ್ಣನ ಸಿನಿ ಕೆರಿಯರ್ನಲ್ಲಿ ಈ ಚಿತ್ರದ್ದು ವಿಶಿಷ್ಟ ಪಾತ್ರ. ಇಲ್ಲೀವರೆಗೆ ಯಾವ ನಟರೂ ಸರಿಗಟ್ಟಲಾರದಂತೆ ಅವರು ಥರ ಥರದ ಪಾತ್ರಗಳಲ್ಲಿ ನಟಿಸಿದ್ದಾರೆ. ಕವಚದಲ್ಲಿ ಅಂಧನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಿರೋ ಕ್ರೇಜ್ ನೋಡಿದರೆ ಕವಚ ಮುಂದಿನ ವರ್ಷವನ್ನು ದೊಡ್ಡ ಗೆಲುವೊಂದರ ಮೂಲಕವೇ ಆರಂಭಿಸೋ ಲಕ್ಷಣಗಳು ಕಾಣಿಸುತ್ತಿವೆ
#
No Comment! Be the first one.