ಏಳೆಂಟು ಕೋಟಿ ಖರ್ಚು ಮಾಡಿ, ಬರೋಬ್ಬರಿ ನಾನ್ನೂರು ಕೋಟಿ ಲಾಭ ಮಾಡಿದ ಚಿತ್ರ ಕಾಂತಾರ. ಈ ಸಿನಿಮಾ ಇಂಥದ್ದೊಂದು ಮ್ಯಾಜಿಕ್ ಕ್ರಿಯೇಟ್ ಮಾಡತ್ತೆ ಅಂತಾ ಯಾರೆಂದರೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆ ಹೊತ್ತಿಗೆ ಹೊಂಬಾಳೆ ಫಿಲ್ಮ್ಸ್ ಎಂಭತ್ತು ಕೋಟಿ ಬಜೆಟ್ಟಿನ ಕೆ ಜಿ ಎಫ್ ಮಾಡಿ ಲಾಭ ಮಾಡಿತ್ತಲ್ಲಾ? ಶುರು ಮಾಡಿದಾಗ ಅವರ ಪಾಲಿಗದು ಸಣ್ಣದೊಂದು ಪ್ರಯತ್ನ ಎನ್ನುವಂತಿತ್ತು. ಬಿಡುಗಡೆಯ ನಂತರ ಆ ಚಿತ್ರ ಎಬ್ಬಿಸಿದ ಹವಾ ಹೊಂಬಾಳೆಯ ಕಾನ್ಫಿಡೆನ್ಸ್ ಅನ್ನು ಇಮ್ಮಡಿಗೊಳಿಸಿತು.
ಸದ್ಯ ಕಾಂತಾರ-2 ತಯಾರಿ ನಡೆಯುತ್ತಿದೆ. ಈ ಸಲ ಯಾವ ಕೊರತೆಯೂ ಇಲ್ಲದೆ ಅದ್ದೂರಿಯಾಗಿ ಪ್ರಿಪೇರ್ ಆಗುತ್ತಿದ್ದಾರೆ. ಕೋಟಿಗಟ್ಟಲೆ ಖರ್ಚು ಮಾಡಿ ಸೆಟ್ ರೂಪಿಸುತ್ತಿದ್ದಾರೆ, ಮತ್ತೊಂದು ಕಡೆ ಕಲಾವಿದರ ಮೇಕಪ್ಪು, ಕಾಸ್ಟೂಮ್ ಟೆಸ್ಟ್ ಗಳು ಕೂಡಾ ನಡೆಯುತ್ತಿವೆ.
ಪೂರ್ತಿ ಸಿನಿಮಾದ ಮೇಲ್ವಿಚಾರಣೆ, ಹಣಕಾಸು, ವ್ಯವಹಾರಗಳನ್ನು ನಿರ್ಮಾಪಕರ ಸುಪರ್ದಿಗೆ ಬಿಟ್ಟು, ಬರೀ ಕ್ರಿಯೇಟೀವ್ ಪಾರ್ಟು ಮಾತ್ರ ನೋಡಿಕೊಳ್ಳೋದು ಕೆಲವು ನಿರ್ದೇಶಕರ ರೀತಿ. ರಿಷಬ್ ಶೆಟ್ರು ಸರ್ಕಾರಿ ಶಾಲೆ ಸಿನಿಮಾ ಮಾಡಿದ ಸಂದರ್ಭದಿಂದಲೂ ತಮ್ಮ ಸಿನಿಮಾಗಳಿಗೆ ಪ್ಯಾಕೇಜ್ ಪಡೆದುಬಿಡುತ್ತಾರೆ. ನಿರ್ಮಾಪಕರಿಗೆ ವಹಿಸಿದರೆ, ತಮ್ಮ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡ್ತಾರೋ, ಇಲ್ವೋ ಅನ್ನೋ ಕಾರಣಕ್ಕಿರಬಹುದು. ಉಳಿತಾಯ ಮಾಡಲು ಹೋಗಿ ಕ್ವಾಲಿಟಿ ಹಾಳಾಗಿಬಿಟ್ರೆ ಎನ್ನುವ ಆತಂಕವೂ ಇರಬಹುದು. ಅಥವಾ ಬರೀ ಸಂಭಾವನೆ ಪಡೆದು ಯಾಕೆ ಗೇಮೆ ಮಾಡಬೇಕು? ಒಂದು ಹಿಡಿ ಹೆಚ್ಚೇ ಲಾಭ ಮಾಡಿಕೊಳ್ಳೋಣ ಎನ್ನುವ ವ್ಯಾವಹಾರಿಕ ಚಾತುರ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಇಷ್ಟು ಕೋಟಿ ಅಂತಾ ಈಸಿಕೊಂಡು ಅದಕ್ಕೆ ತಕ್ಕ ಲೆಕ್ಕ ಕೊಟ್ಟು ವ್ಯವಹಾರ ಕ್ಲೋಸ್ ಮಾಡುತ್ತಾರೆ. ಅದಕ್ಕೆ ತಕ್ಕಂತೆ ನಿರ್ಮಾಪಕರಿಗೆ ಲಾಭ, ಹೆಸರು ಎರಡನ್ನೂ ಮಾಡಿಕೊಡುತ್ತಾರೆ.
ಸದ್ಯ ಕಾಂತಾರ ಸಿನಿಮಾಗೆ ರಿಷಬ್ ಪಡೆದಿರೋ ಪ್ಯಾಕೇಜ್ ಮೊತ್ತ ಬರೋಬ್ಬರಿ ನೂರು ಕೋಟಿ. ಅದೂ ಒಂದು ಪಾರ್ಟಿಗೆ. ಈ ವರೆಗೂ ಹೊರಬೀಳದ, ಯಾರಿಗೂ ಗೊತ್ತಿರದ ವಿಚಾರವೊಂದನ್ನು ಹೇಳ್ತೀವಿ ಕೇಳಿ. ಈ ಸಲ ಕಾಂತಾರಾದ ಎರಡು ಭಾಗಗಳು ಏಕ ಕಾಲದಲ್ಲಿ ಚಿತ್ರೀಕರಣಗೊಳ್ಳಲಿವೆ. ಈ ಎರಡು ಭಾಗಕ್ಕೆ ಸೇರಿ ರಿಷಬ್ ಹೊಂಬಾಳೆಯಿಂದ ಇನ್ನೂರು ಕೋಟಿ ರೂಪಾಯಿಗಳ ಪ್ಯಾಕೇಜನ್ನು ಪಡೆದಿದ್ದಾರಂತೆ. ಗೆಲುವಿನ ಅಮಲಲ್ಲಿ ಮೈಮರೆತು ನಷ್ಟ ಅನುಭವಿಸೋದು ಸಿನಿಮಾ ಮಂದಿಯ ಸಹಜ ಗುಣ. ಆದರೆ ರಿಷಬ್ ಎಲ್ಲರಂತಲ್ಲ. ವ್ಯವಹಾರದ ವಿಚಾರದಲ್ಲಿ ಭಯಂಕರ ಕಿಲಾಡಿ. ಒಂದೊಂದು ರುಪಾಯಿಯ ವ್ಯವಹಾರವನ್ನೂ ಖುದ್ದು ತಾವೇ ನಿಂತು ಹ್ಯಾಂಡಲ್ ಮಾಡ್ತಿದ್ದಾರಂತೆ. ಇಷ್ಟು ಮಾತ್ರದ ಬುದ್ದಿವಂತಿಕೆ ಇಲ್ಲದಿದ್ದರೆ ಈ ಸಿನಿಮಾ ಇಂಡಸ್ಟ್ರಿಯಲ್ಲಿ ಹುರಿದು ಮುಕ್ಕಿಬಿಡುತ್ತಾರೆ. ಕಾಂತಾರದ ಬಗ್ಗೆ ಇನ್ನೂ ಇಂಟರೆಸ್ಟಿಂಗ್ ವಿಚಾರಗಳಿವೆ. ಹೇಳ್ತೀವಿ.. ವೇಯ್ಟ್ ಮಾಡಿ….
No Comment! Be the first one.