ಕಂಠೀರವ ಸ್ಟುಡಿಯೋ ನಷ್ಟದಲ್ಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಳಗಿರುವ ಹೆಗ್ಗಣಗಳನ್ನು ಬಡಿದು ಹೊರದಬ್ಬಿದರೆ ಸ್ಟುಡಿಯೋ ಬೇರೆ ಲೆವೆಲ್ಲಿಗೆ ಬೆಳೆಯುತ್ತದೆ. ಈಗ ಕಂಠೀರವ ಸ್ಟುಡಿಯೋ ಸಿನಿಮಾಗಿಂತಾ ಸೀರಿಯಲ್ಲಿಗೆ ಹೆಚ್ಚು ಬಳಕೆಯಾಗುತ್ತಿದೆ. ಸಾಕಷ್ಟು ನಿರ್ಮಾಣ ಸಂಸ್ಥೆಗಳು ಅಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಚಂದ್ರಮ್ಮನ ಅಕೌಂಟಿಗೆ ಪ್ರತಿ ತಿಂಗಳು ಹಣ ಸಂದಾಯ ಮಾಡುತ್ತಿದ್ದಾರೆ. ಕನ್ನಡದ ದೊಡ್ಡ ಪ್ರೊಡಕ್ಷನ್‌ ಸಂಸ್ಥೆ ಪುಷ್ಕರ್‌ ಫಿಲಂಸ್‌ ನಿಂದಲೂ ಈಕೆಯ ಅಕೌಂಟಿಗೆ ಹಣ ಜಮೆಯಾಗಿದೆ ಅಂದರೆ ನಂಬಲೇಬೇಕು!

ಸದ್ಯ ಕಂಠೀರವ ಸ್ಟುಡಿಯೋ ಒಳಗಿನ ಭ್ರಷ್ಟಾಚಾರದ ವಿರುದ್ಧ ಅಲ್ಲಿನ ಟ್ರಸ್ಟಿಗಳು ಸಿಡಿದೆದ್ದಿದ್ದಾರೆ. ಅದರ ನಿರ್ದೇಶಕಿ ಮಮತಾ ಬಗ್ಗೆ ಮಾತ್ರವಲ್ಲದೆ ಅಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಈ ಕೆಳಕಂಡಂತೆ ಆರೋಪ ಮಾಡಿದ್ದಾರೆ. ಅದರ ಯಥಾವತ್ತು ಪ್ರತಿ ಇಲ್ಲಿದೆ…

ಶ್ರೀಮತಿ ಎಂ.ಆರ್.ಮಮತ, ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಕಂಠೀರವಸ್ಟುಡಿಯೋಸ್ ನಿಯಮಿತದಲ್ಲಿ ಮಾಡಿರುವ ಭ್ರಷ್ಠಾಚಾರ ಮತ್ತು ಅವ್ಯವಹಾರಗಳ ಪಟ್ಟಿ ಹಾಗೂ ಇದಕ್ಕೆ ಸಂಬಂಧಿಸಿದ ದಾಖಲೆಗಳು

 • ೧. ಈ ಹಿಂದೆ ಸ್ಟುಡಿಯೋಗೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಹೆಚ್ಚುವರಿ ಕಾರ‍್ಯಭಾರದಲ್ಲಿ IAS, IPS, KAS ಮತ್ತು ಆಯುಕ್ತರು, ನಿರ್ದೇಶಕರು, ಜಂಟಿ ನಿರ್ದೇಶಕರನ್ನು ಸ್ಟುಡಿಯೋಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುತ್ತಿದ್ದು, ಆಗ ಅವರಿಗೆ ನೀಡುವ ವೇತನ ಭತ್ಯೆ, ಡ್ರೈವರ್ (ಚಾಲಕ)ವೇತನ, ಡೀಸೆಲ್\ಪೆಟ್ರೋಲ್ ಇನ್ನಿತರ ವೆಚ್ಚಗಳು ಉಳಿತಾಯವಾಗುತ್ತಿತ್ತು. ಆದರೆ ಇದೀಗ ಪೂರ್ಣಪ್ರಮಾಣದ ವ್ಯವಸ್ಥಾಪಕನಿರ್ದೇಶಕರನ್ನು ಸ್ಟುಡಿಯೋಗೆ ನೇಮಿಸಿದ್ದಾರೆ, ಅಲ್ಲದೇ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ‍್ಯ ನಿರ್ವಸುತ್ತಿರುವವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ ಇವರಿಗೆ ಸಂಸ್ಥೆಯ ನಿಯಮಗಳೇ ತಿಳಿದಿರುವುದಿಲ್ಲ.

 •  ಈಗ ಕರ‍್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರು, ಹೊರಗುತ್ತಿಗೆ ಸಿಬ್ಬಂದಿಗಳನ್ನು ಅವರಿಗೆ ಹೇಗೆ ಬೇಕೋ ಹಾಗೇ ಬಳಸಿಕೊಂಡು ಸಂಸ್ಥೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಇವರೇ ಪ್ರತ್ಯೇಕ ಕಚೇರಿಯಂತೆ ಕರ‍್ಯನಿರ್ವಹಿಸುತ್ತಿದ್ದಾರೆ. ಅವರ ಮಾತು ಯಾರು ಕೇಳುವುದಿಲ್ಲವೋ ಮತ್ತು ಅವರ ಅವ್ಯವಹಾರಕ್ಕೆ ಸಹಾಯ ಮಾಡುವುದಿಲ್ಲವೋ ಅವರನ್ನು ಕೂಡಲೇ ಕೆಲಸದಿಂದ ಯಾವುದೇ ಕಾರಣ ನೀಡದೆ ತೆಗೆದು ಹಾಕುತ್ತಾರೆ. ಅವರು ಕರ‍್ಯನಿರ್ವಹಿಸಿರುವ ಸಂಬಳವನ್ನು ಸಹ ನೀಡುವುದಿಲ್ಲ. ಈ ರೀತಿ ಈ ಹಿಂದೆ ಸುಮಾರು ೬ ವರ್ಷ ಮೇಲ್ಪಟ್ಟು ಟೈಪಿಸ್ಟ್ ಆಗಿ ಕರ‍್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ೩ ತಿಂಗಳ ವೇತನವನ್ನು ಸಹ ನೀಡಿರುವುದಿಲ್ಲ. ಆದರೆ ಗುತ್ತಿಗೆದಾರರಿಗೆ ಸಂಸ್ಥೆಯಿಂದ ಹಣ ಪಾವತಿಯಾಗಿರುತ್ತದೆ.

 • ಸದರಿಯವರ ಸೇವೆಯನ್ನು ಡಾ||ರಾಜ್‌ಕುಮಾರ್ ಪ್ರತಿಷ್ಠಾನ ಹಾಗೂ ಡಾ||ವಿಷ್ಣುವರ್ಧನ್ ಪ್ರತಿಷ್ಠಾನಗಳ ಸೇವೆಯನ್ನು ಪಡೆದಿರುತ್ತಾರೆ. ಅವರಿಗೆ ಹೊಂದಿಕೊಳ್ಳುವಂತಹ ಹಾಗೂ ಭ್ರಷ್ಠಾಚಾರಕ್ಕೆ ಅನುವು ಮಾಡಿಕೊಳ್ಳುವ ಸಿಬ್ಬಂದಿಯನ್ನು ನೇಮಮಿಸಿಕೊಂಡಿರುತ್ತಾರೆ.

 • ಈ ಹಿಂದೆ ಹೊರಗುತ್ತಿಗೆಯಲ್ಲಿದ್ದ ಚಾಲಕನಿಗೆ ಹೆಚ್ಚುವರಿ ಕರ‍್ಯದ ಸಂಬಳ ನೀಡುವುದಾಗಿ ಕೆಲಸ ನಿರ್ವಹಿಸಿಕೊಂಡು ಹಾಗೇ ಬಿಲ್ ಸಹ ಮಾಡಿ ಹಣವನ್ನು ತೆಗೆದುಕೊಂಡಿರುತ್ತಾರೆ. ಆದರೆ ಚಾಲಕನಿಗೆ ಯಾವುದೇ ಹೆಚ್ಚುವರಿ ವೇತನವನ್ನು ನೀಡಿರುವುದಿಲ್ಲವೆಂದು ಸ್ವತಃ  ಚಾಲಕನೇ ಖುದ್ದಾಗಿನಮ್ಮ ಗಮನಕ್ಕೆ ತಂದಿರುತ್ತಾರೆ.
 • ಕೊರೋನ ಸಮಯದಲ್ಲಿ ಸ್ಟುಡಿಯೋದಲ್ಲಿ ಯಾವುದೇ ಕರ‍್ಯ ಚಟುವಟಿಕೆಗಳು ಇಲ್ಲದಿದ್ದರೂ ಕೂಡ ಹೊರಗುತ್ತಿಗೆಯರ ಸಂಬಳದ ಬಿಲ್ ಮಾಡಿರುತ್ತಾರೆ. ಆದರೆ ಅವರಿಗೆ ಸಂಬಳ ನೀಡಿರುವುದಿಲ್ಲವೆಂದು ಸಹ ನಮ್ಮ ಗಮನಕ್ಕೆ ಬಂದಿರುತ್ತದೆ.
 • ಉದ್ಯಾನವನವನ್ನು ಸಹ ಗುತ್ತಿಗೆ ನೀಡಿದ್ದು ಅದರಲ್ಲಿ ಈ ಹಿಮದೆ ಕರ‍್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಏಕಾ-ಏಕಿಯಾಗಿ ಕೆಲಸದಿಂದ ತೆಗೆದು ಹಾಕಿರುತ್ತಾರೆ. ಏಕೆಂದರೆ ಅವರು ಗುತ್ತಿಗೆದಾರರಿಂದ ಪ್ರತಿ ಮಾಹೆಯಾನ ವ್ಯವಸ್ಥಾಪಕ ನಿರ್ದೇಶಕರು ಕಮೀಷನ್ ಪಡೆಯುತ್ತಿರುತ್ತಿದ್ದಾರೆ ಎನ್ನುವ ವಿಷಯವನ್ನು ಅವರು ಹೇಳಿದಕ್ಕೆ ಕೆಲಸದಿಂದ ತೆಗೆದಿರುತ್ತಾರೆ.
 • ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ವಿಜಯಲಕ್ಷ್ಮಿ ಅರಸ್ ಅವರು ಶ್ರೀ ಕಂಠೀರವ ಸ್ಟುಡಿಯೋದ ಜಮೀನನ್ನು ಸುಮಾರು ೫ ರಿಂದ ೬ ಜನರಿಗೆ ಕಾನೂನಿನ ವಿರುದ್ಧ ಪರಭಾರೆ ಮಾಡಿರುತ್ತಾರೆ. ಇದರಿಂದಾಗಿ ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತಕ್ಕೆ ಅಪಾರ ನಷ್ಟವಾಗುತ್ತಿದ್ದನ್ನು ಮನಗೊಂಡು ಸರ್ಕಾರವು ಆಗಿನ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಿರುತ್ತಾರೆ. ಯಾರೋ ತಪ್ಪಿಗೆ ಅಧಿಕಾರಿಗಳು ಬಲಿಯಾಗಿರುತ್ತಾರೆ. ಇದೇ ಅಧ್ಯಕ್ಷರು ಈಗಿನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕೈ ಜೋಡಿಸಿ ಡಬ್ಬಿಂಗ್ ಹಾಗೂ ರೆಕಾರ್ಡಿಂಗ್  ಮತ್ತು ಶ್ರೀ ಕಂಠೀರವ ಸ್ಟುಡಿಯೋದ ಜಮೀನನ್ನು ಕಬಳಿಸಲು ಉನ್ನಾರ ರೂಪಿಸಿ ಪ್ರತಿ ದಿನ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಟುಡಿಯೋಗೆ ಅಪಾರ ನಷ್ಟವಾಗುತ್ತಿದೆ.

 • ೮.     ಕಾವೇರಿ ಹಾಗೂ ಶಂಕರ್‌ನಾಗ್ ಫ್ಲೋರಿನಲ್ಲಿ ೦೨ ಖಾಸಗೀ ವಾಹಿನಿಗಳು ಸುಮಾರು ೧೩ ವರ್ಷಗಳಿಂದ  ಶ್ರೀ ಕಂಠೀರವ ಸ್ಟುಡಿಯೋದ ಫ್ಲೋರ್‌ಗಳಲ್ಲಿ ಚಿತ್ರೀಕರಿಸುತ್ತಿದ್ದು ವಾರ್ಷಿಕವಾಗಿ ಪ್ರತಿ ಸಂಸ್ಥೆಯಿAದ ಬರುತ್ತಿದ್ದ ರೂ.೧.೦೦ ಕೋಟಿ ಸ್ಟುಡಿಯೋ ಆದಾಯವನ್ನು ತಪ್ಪಿಸಿರುತ್ತಾರೆ. ಇವರುಗಳ ದುರಾಡಳಿತ ಹಾಗೂ ಭ್ರಷ್ಠಾಚಾರದ ಕಾಟದಿಂದಾಗಿ ಸದರಿ ಸಂಸ್ಥೆಯವರು ಫ್ಲೋರ್‌ಗಳಲ್ಲಿ ಚಿತ್ರೀಕರಿಸುವುದನ್ನು  ಸ್ಟುಡಿಯೋದಿಂದ  ತೆರೆವುಗೊಳಿಸಿರುತ್ತಾರೆ. ಇದಕ್ಕೆ ಸಾಕ್ಷಿ ಸಂಬಂಧಿಸಿದ ಕಡತಗಳನ್ನು ಪರಮರ್ಶಿಸಬಹುದು.
 • ಚಿತ್ರೀಕರಣದ ಸಿಬ್ಬಂದಿಗಳ ಜೊತೆಗೂಡಿ ಸಂಸ್ಥೆಗೆ ಬರುವ ಆದಾಯವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು  ಸಂಸ್ಥೆಗೆ ಬರುವ ಲಕ್ಷಗಟ್ಟಲೆ ಆದಾಯವನ್ನು ಸೋರಿಕೆಮಾಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಚಿತ್ರೀಕರಣ ಸಿಬ್ಬಂದಿಗಳ ವೈಯಕ್ತಿಕ ಸಣ್ಣ ಉಳಿತಾಯ ಖಾತೆಗಳನ್ನು ಪ  ರಿಶೀಲಿಸುವುದು. (ಶ್ರೀಮತಿ ಜಿ.ಚಂದ್ರಮ್ಮ, ಶ್ರೀ ಹೆಚ್.ಎಸ್.ಹನುಮಂತಪ್ಪ ಹಾಗೂ ಶ್ರೀ ರಾಜಶೇಖರ್)
 • ಶ್ರೀಮತಿ ಎಂ.ಆರ್.ಮಮತ, ವ್ಯವಸ್ಥಾಪಕ ನಿರ್ದೇಶಕರು ಇವರು ಅಧಿಕಾರ ವಹಿಸಿಕೊಂಡ ದಿನದಿಂದಲ್ಲೂ  ಹೊರಗುತ್ತಿಗೆ ಸಿಬ್ಬಂದಿ ಗುತ್ತಿಗೆದಾರರ ಕರಾರು ಮುಗಿದಿದ್ದರೂ ಅನಧಿಕೃತವಾಗಿ ಅವರನ್ನೇ ಅಂದಿನಿAದ-ಇAದಿನವರೆಗೂ ಮುಂದುವರೆಸಿಕೊAಡು ಹೋಗಿರುತ್ತಾರೆ, ಅದಲ್ಲದೇ ಗುತ್ತಿಗೆದಾರರು ಮಾಡುವ ಬಿಲ್ಲಿಗೂ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಅಜಾಗಜಾಂತರ ವ್ಯತ್ಯಾಸವಿರುತ್ತದೆ. (ಇದಕ್ಕೆ ಸಂಬಂಧಿಸಿದ ಕಡತವನ್ನು ಪರಿಶೀಲಿಸುವುದು ಹಾಗೂ ರಾಮಕೃಷ್ಣ, ಮೇಲ್ವಿಚಾರಕ ರಕ್ಷಣಾ ಪಡೆ ಇವರನ್ನು ವಿಚಾರಣೆಗೊಳಪಡಿಸುವುದು.)
 • ವ್ಯವಸ್ಥಾಪಕ ನಿರ್ದೇಶಕರು ಇವರು ಅಧಿಕಾರ ವಹಿಸಿಕೊಂಡ ದಿನದಿಂದಲ್ಲೂ ವಿದ್ಯುತ್ ಸಂರಕ್ಷಣೆ ಗುತ್ತಿಗೆದಾರರ  ಕರಾರು ಮುಗಿದಿದ್ದರೂ  ಅನಧಿಕೃತವಾಗಿ ಸದರಿ ಗುತ್ತಿಗೆದಾರರನ್ನೇ  ಮುಂದುವರೆಸಿ ಕೊಂಡಿರುತ್ತಾರೆ. ಇದು ಸಹ ಭ್ರಷ್ಠಾಚಾರದಿಂದ ಕೂಡಿರುತ್ತದೆ. (ಇದಕ್ಕೆ ಸಂಬಂಧಿತ ಕಡತವನ್ನು ಪರಿಶೀಲಿಸುವುದು)

 • ೧೨.   ವ್ಯವಸ್ಥಾಪಕ ನಿರ್ದೇಶಕರು ಇವರು ಅಧಿಕಾರ ವಹಿಸಿಕೊಂಡ ದಿನದಿಂದಲ್ಲೂ ಸ್ಟುಡಿಯೋದ ಉದ್ಯಾನವನದ ನಿರ್ವಹಣೆಯ ಗುತ್ತಿಗೆದಾರರ ಕರಾರು ಮುಗಿದಿದ್ದರೂ ಅನಧಿಕೃತವಾಗಿ ಸದರಿ ಗುತ್ತಿಗೆಯವರನ್ನೇ ಮುಂದುವರೆಸಿರುತ್ತಾರೆ. ಇದು ಸಹ ಭ್ರಷ್ಠಾಚಾರ ಮತ್ತು ಅವ್ಯವಹಾರದಿಂದ ಕೂಡಿರುತ್ತದೆ. (ಇದಕ್ಕೆ ಸಂಬAಧಿತ ಕಡತವನ್ನು ಪರಿಶೀಲಿಸುವುದು)
 • ೧೩.   ವ್ಯವಸ್ಥಾಪಕ ನಿರ್ದೇಶಕರು ಸ್ಟುಡಿಯೋದ ಅಭಿವೃದ್ಧಿ ಬಗ್ಗೆ ಗಮನ ನೀಡದೇ
 • ಬ     ರೀ ಸಿಬ್ಬಂದಿಗಳು ಕರ್ತವ್ಯಕ್ಕೆ ತಡವಾಗಿ ಬರುತ್ತಿರುತ್ತಾರೆ ಹಾಗೂ ಕೆಲಸನಿರ್ವಹಿಸುವುದಿಲ್ಲವೆನ್ನುವ ಬಗ್ಗೆ ಪ್ರತಿ ಮಂಡಳಿ ಸಭೆಯಲ್ಲಿ ಬರೀ ಸಿಬ್ಬಂದಿಗಳ ಬಗ್ಗೆ ದೂರಿರುತ್ತಾರೆ. ಇದನ್ನು ಹೊರುತು ಪಡಿಸಿದರೆ ಸ್ಟುಡಿಯೋದ ಅಭಿವೃದ್ಧಿಯ ಬಗ್ಗೆ ಏನು ಮಾತಾಡುವುದಿಲ್ಲ.

 • ೧೪.   ಶ್ರೀಮತಿ ಎಂ.ಆರ್.ಮಮತ, ವ್ಯವಸ್ಥಾಪಕ ನಿರ್ದೇಶಕರು ಸ್ಟುಡಿಯೋದಲ್ಲಿ ನಡೆಯುವ ಸಭೆಯ ನಡವಳಿಯನ್ನು ತಿರುಚಿ ತಮಗೆ ಅನುಕೂಲವಾದ  ರೀತಿಯಲ್ಲಿ ನಡವಳಿಯನ್ನು ಮಾಡಿಕೊಂಡು ಹಾಗೂ ಸಭೆಯ ವಿಷಯ ಸೂಚಿಯಲ್ಲಿ ಇಲ್ಲದಂತಹ ವಿಷಯಗಳನ್ನು ಸಭೆಯ ನಡವಳಿಯಲ್ಲಿ ಸೇರಿಸಿಕೊಂಡು ಅನುಮೋದಿಸಲಾಗಿದೆ ಎಂದು ನಡವಳಿಯನ್ನು ಮಾಡಿ, ಸದರಿ ಸಭೆಯ ಅಧ್ಯಕ್ಷರ ಸಹಿ ಬದಲು ಬೇರೆ ನಿರ್ದೇಶಕರಾದ ಶ್ರೀ ಕೆ.ಮೋಹನ್‌ದೇವ್ ಆಳ್ವ, ಇವರನ್ನು ಸಭೆಯ ಅಧ್ಯಕ್ಷರೆಂದು ನಡವಳಿಯಲ್ಲಿ ಸೇರಿಸಿ ಸದರಿಯವರಿಂದ ಸಹಿ ಮಾಡಿಸಿರುತ್ತಾರೆ. ಇದೇ ರೀತಿಯಾಗಿ ಸ್ಟುಡಿಯೋದ ಆಡಳಿತದಲ್ಲಿ ಎಷ್ಟೊಂದು ವಿಷಯಗಳಲ್ಲಿ ಭ್ರಷ್ಠಾಚಾರ ಹಾಗೂ ಅವ್ಯವಹಾರವನ್ನು ಸದರಿ ವ್ಯವಸ್ಥಾಪಕ ನಿರ್ದೇಶಕರು ಮಾಡಿರುತ್ತಾರೆ.
 • ೧೫. ಡಾ||ರಾಜ್‌ಕುಮಾರ್ ಸಮಾಧಿಗೆ ಬಿಟ್ಟುಕೊಟ್ಟಿರುವ ೨ ಎಕರೆ ಜಮೀನಿಗೆ ಸರ್ಕಾರವು ನಿಗಧಿಪಡಿಸಿರುವ ೧೬.೫೦ ಕೋಟಿ ರೂಗಳು ಸ್ಟುಡಿಯೋಗೆ ಸಂದಾಯವಾಗಬೇಕಾಗಿದ್ದು, ಇದರಲ್ಲಿ ಸ್ಟುಡಿಯೋದ ಅಭಿವೃದ್ಧಿಗೆಗೆ ಎಂದು ರೂ.೫.೦೦ ಕೋಟಿಗಳನ್ನು ನೀಡಿದ್ದು ಅನದ್ನು ಹೊಂದಾಗಿ ಮಾಡಿಕೊಳ್ಳಲಾಗಿದ್ದು, ಇನ್ನೂ ಉಳಿಕೆ ರೂ.೧೧.೫೦ ಕೋಟಿಗಳು  ಸರ್ಕಾರದಿಂದ ಬಾಕಿ ಬರಬೇಕಾಗಿದೆ.

 • ಶಾಸನಬದ್ಧ ಲೆಕ್ಕಪರಿಶೋಧಕರು ಸ್ಟುಡಿಯೋದ ಆದಾಯವು ಸೋರಿಕೆಯಾಗಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ.
 • ವ್ಯವಸ್ಥಾಪಕ ನಿರ್ದೇಶಕರು ಪ್ರತಿ ನಿರ್ದೇಶಕರ ಮಂಡಳಿ ಸಭೆಯಲ್ಲೂ ವಿಷಯ ಸೂಚಿಯೊಂದಿಗೆ ಇತರ ವಿಷಯಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡು ಸಭೆಯಲ್ಲಿ ವಿಷಯದ ಬಗ್ಗೆ ಚರ್ಚಿಸದೆ ಇದ್ದರೂನಿರ್ಣಯಿಸಲಾಗಿದೆಂದು ನಮೂದಿಸಿ ಸಭೆಯ ಅಧ್ಯಕ್ಷರ ಸಹಿಯನ್ನು ಪಡೆದಿರುತ್ತಾರೆ. (ಒಂದು ಪಕ್ಷ ಸಭೆಯ ಅಧ್ಯಕ್ಷರು ಇದಕ್ಕೆ ಒಪ್ಪದೇ ಇದ್ದಲ್ಲಿ ಇತರ ನಿರ್ದೇಶರನ್ನು ಸಭೆಯ ಅಧ್ಯಕ್ಷರೆಂದು ಅವರ ಸಹಿಯನ್ನುನಡವಳಿಯಲ್ಲಿ ಪಡೆದಿರುತ್ತಾರೆ.)
 • ಶ್ರೀಮತಿ ಎಂ.ಆರ್ ಮಮತ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದಾಗ ಲಾಭವಾಗಿ ನಡೆಯುತ್ತಿದ್ದ ಸಂಸ್ಥೆಯನ್ನು ನಷ್ಟವಾಗಿನಡೆಯುವಂತೆ ಮಾಡಿರುತ್ತಾರೆ.
 • ೧೯. ಈ ವಿಷಯವನ್ನು ಸರ್ಕಾರಕ್ಕೆ ಆನೇಕ ಬಾರೀ ಪತ್ರಗಳನ್ನು ನೀಡಿ, ನಾವು ಖುದ್ದಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಟುಡಿಯೋದಲ್ಲಿ ನಡೆಯುವ ಭ್ರಷ್ಠಾಚರದ (ಹಣ ಸೋರಿಕೆಯ ಬಗ್ಗೆ) ತಿಳಿದಿದ್ದರೂ ಸಹ ಸರ್ಕಾರದ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.

ಕಂಠೀರವ  ಸ್ಟುಡಿಯೋಗೆ ಅನ್ಯಾಯ ಮಾಡಿದವರು ಯಾರು?

To be continued….

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಡಾರ್ಲಿಂಗ್‌ ಈಗ ಬಹಳ ಬ್ರಿಲಿಯಂಟ್‌!

Previous article

ಅವಳ ಕಿವಿ ಅಗಲ, ನೋಡಲು ಸುಮಾರಾಗಿದ್ದಾಳೆ ಅಂದಿದ್ದರು….!

Next article

You may also like

Comments

Leave a reply

Your email address will not be published.