ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಂಠೀರವ ಸ್ಟುಡಿಯೋ ಏನಾಯಿತು? ಇಷ್ಟು ವಿಶಾಲವಾದ ಜಾಗ ಪೆಂಡಾಲು ಹಾಕಿ ಸಿನಿಮಾ ಮುಹೂರ್ತ ಮಾಡಲಷ್ಟೇ ಸೀಮಿತವಾಯಿತಾ? ಕನ್ನಡ ಚಿತ್ರರಂಗದ ಉದ್ದಾರಕ್ಕೆಂದೇ ಹಲವರು ಕನಸಿಟ್ಟು ಶುರು ಮಾಡಿದ ಕಂಠೀರವದ ಕತೆ ಇವತ್ತೇನಾಗಿದೆ?

ಸಿನಿಮಾ ಚಿತ್ರೀಕರಣಕ್ಕೆಂದು ಕನ್ನಡದ ಸಿನಿಮಾ ಮಂದಿ ಹೈದ್ರಾಬಾದಿನ ರಾಮೋಜಿ ಅನ್ನಪೂರ್ಣ ಸ್ಟುಡಿಯೋಗೆ ಹೋಗುತ್ತಾರೆ. ಕನ್ನಡದ ಬಹುತೇಕ ಸಿನಿಮಾಗಳ ತಾಂತ್ರಕ ಕೆಲಸ ನಡೆಯೋದು ಚೆನ್ನೈನಲ್ಲಿ. ಹಾಗಾದರೆ ಕರ್ನಾಟಕದಲ್ಲಿ ಇವಕ್ಕೆಲ್ಲಾ ಅವಕಾಶ ಇಲ್ಲವಾ? ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲವಾ?

ಬೆಂಗಳೂರಿನಲ್ಲೇ ಇರುವ ಖಾಸಗಿ ಒಡೆತನದ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಟೀವಿ ವಾಹಿನಿಯ ರಿಯಾಲಿಟಿ ಶೋಗಳು ಸೆಟ್‌ ನಿರ್ಮಿಸಿಕೊಂಡು ಪರ್ಮನೆಂಟಾಗಿ ಜಾಂಡಾ ಊರಿವೆ. ಬಾಲಣ್ಣನ ಕನಸಿನ ಸೌಧದಂತಿದ್ದ ಅಭಿಮಾನ್‌ ಸ್ಟುಡಿಯೋ ಅವರದ್ದೇ ಮಕ್ಕಳ ಕಿತ್ತಾಟದಲ್ಲಿ ಯಾವುದಕ್ಕೂ ಬೇಡದಂತಾಗಿದೆ. ಸಿಟಿ ಮಧ್ಯದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಈಗ ಆಸ್ತಿ ಹಿಡಿದು ಕೂತಿರುವ ರಾಜಲಕ್ಷ್ಮಿ ಮತ್ತು ಸಡಗೋಪನ್‌ ದಂಪತಿ ಹೆಚ್ಚೂಕಮ್ಮಿ ನಿರ್ನಾಮ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ರಾಕ್‌ ಲೈನ್‌ ಸ್ಟುಡಿಯೋ ದೂರ. ಇರೋದರಲ್ಲೇ ಹೆಚ್ಚು ಉಪಯೋಗಕ್ಕೆ ಬರುತ್ತಿರೋದು ನೆಲಮಂಗಲದಿಂದ ಆಚೆಯೆಲ್ಲೋ ಇರುವ ಮೋಹನ್‌ ಬಿ.ಕೆರೆ ಸ್ಟುಡಿಯೋ. ಕಲಾನಿರ್ದೇಶಕ ಮೋಹನ್‌ ಬಿ. ಕೆರೆ ತಮ್ಮ ಸ್ವಂತ ಜಮೀನಿನಲ್ಲಿ ಮಾಡಿಕೊಂಡಿರುವ ಈ ಸ್ಟುಡಿಯೋದಲ್ಲಿ ಸ್ಟ್ರೀಟ್‌ ಸೆಟ್ ಸೇರಿದಂತೆ ಒಂದಿಷ್ಟು ಅನುಕೂಲ ಮಾಡಿಕೊಂಡಿದ್ದಾರೆ.

ಅದು ಬಿಟ್ಟರೆ, ಕೆಲಸ ನಿಲ್ಲಿಸಿ, ಶಿಥಿಲಾವಸ್ಥೆಯಲ್ಲಿರುವ ಹೆಚ್.ಎಂ.ಟಿ, ಬಿನ್ನಿಮಿಲ್ಲು, ಮೈಸೂರ್‌ ಲ್ಯಾಂಪ್ಸ್‌ ನಂಥಾ ಫ್ಯಾಕ್ಟರಿಗಳಲ್ಲಿ ವಿಪರೀತ ಬಾಡಿಗೆ ಕೊಟ್ಟು ಕನ್ನಡ ಚಿತ್ರಗಳ ಚಿತ್ರೀಕರಣ ನಡೆಯುತ್ತಿವೆ. ಇನ್ನು, ಕಾಡು, ಅರಮನೆ ಹೋಲುವ ಸ್ಥಳ ಬೇಕೆಂದರೆ, ಮೈಸೂರು ಅರಸರ ಫ್ಯಾಮಿಲಿಗೆ ಸೇರಿದ್ದು ಎನ್ನಲಾದ ಸಪೋಟಾ ಗಾರ್ಡನ್‌, ಬೆಂಗಳೂರ್‌ ಪ್ಯಾಲೆಸುಗಳಿಗೇ ಹೋಗಬೇಕು. ಅದು ಸಣ್ಣ ಸಿನಿಮಾಗಳಿಗೆ ಸಾಧ್ಯವಿಲ್ಲ. ಯಾಕೆಂದರೆ, ಅಲ್ಲಿ ಕೂಡಾ ಬಾಡಿಗೆ ಹೆಚ್ಚು.

 

ಹಾಗಾದರೆ, ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಂಠೀರವ ಸ್ಟುಡಿಯೋ ಏನಾಯಿತು? ಇಷ್ಟು ವಿಶಾಲವಾದ ಜಾಗ ಪೆಂಡಾಲು ಹಾಕಿ ಸಿನಿಮಾ ಮುಹೂರ್ತ ಮಾಡಲಷ್ಟೇ ಸೀಮಿತವಾಯಿತಾ? ಕನ್ನಡ ಚಿತ್ರರಂಗದ ಉದ್ದಾರಕ್ಕೆಂದೇ ಹಲವರು ಕನಸಿಟ್ಟು ಶುರು ಮಾಡಿದ ಕಂಠೀರವದ ಕತೆ ಇವತ್ತೇನಾಗಿದೆ? ಡಾ. ರಾಜ್‌ ಕುಮಾರ್‌, ವಿಷ್ಣು, ಅಂಬರೀಶ್‌ ರಂಥಾ ಮೇರು ನಟರು ನಟಿಸಿ, ಜೀವಿಸಿ ಹೋದ ಜಾಗ ಈಗ ಎಷ್ಟು ಉದ್ದಾರವಾಗಿದೆ?

ರಾಜ್‌, ಪಾರ್ವತಮ್ಮ, ಅಂಬರೀಶ್‌ ಅವರ ಸಮಾಧಿಗಳೊಂದಿಗೆ ಕಂಠೀರವ ಸ್ಟುಡಿಯೋ ಕೂಡಾ ಅಕ್ಷರಶಃ ಕಣ್ಮುಚ್ಚಿ ಮಲಗಿದೆ. ಕಂಠೀರವ ಸ್ಟುಡಿಯೋವನ್ನು ನಡೆಸಲು ಆಗುತ್ತಿಲ್ಲ. ಇಲ್ಲಿರುವ ನೌಕರರಿಗೆ ಸಂಬಳ ಕೂಡಾ ಗಿಟ್ಟುತ್ತಿಲ್ಲ ಅಂತೆಲ್ಲಾ ಕೆಲವರು ನವರಂಗೀ ನಾಟಕ ಮಾಡುತ್ತಿದ್ದಾರೆ. ಇಷ್ಟು ಸುವಿಸ್ತಾರವಾದ ಜಾಗವನ್ನಿಟ್ಟುಕೊಂಡು, ಮಾಡವಬಾರದ ಅನ್ಯಾಯ ಮಾಡುತ್ತಾ ಕೂತರೆ ಉದ್ದಾರವಾದರೂ ಎಲ್ಲಿಂದ ಆಗಲು ಸಾಧ್ಯ?

*ಸ್ಟುಡಿಯೋ ಒಳಗೆ ಹೆಗ್ಗಣಗಳ ಸಾಮ್ರಾಜ್ಯ!*

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಒಂದು ಎಳೆ ಕೂದಲು ಕೂಡಾ ಹಾವಾಗಿ ಸುತ್ತಿಕೊಳ್ಳಬಹುದು!

Previous article

ಡಾರ್ಲಿಂಗ್‌ ಈಗ ಬಹಳ ಬ್ರಿಲಿಯಂಟ್‌!

Next article

You may also like

Comments

Leave a reply

Your email address will not be published.