ಕಪಟನಾಟಕ ಪಾತ್ರಧಾರಿ ಸಿನಿಮಾ ಇದೇ ತಿಂಗಳ ೮ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಕ್ರಿಯಾಶೀಲ ಛಾಯಾಗ್ರಾಹಕ ಎನಿಸಿಕೊಂಡಿರುವ ಪರಮೇಶ್ ಕಾರ್ಯ ನಿರ್ವಹಿಸಿದ್ದಾರೆ. ಅವರ ಜೊತೆಗಿನ ಮಾತುಕತೆಯ ಒಂದಿಷ್ಟು ವಿವರ ಇಲ್ಲಿದೆ…

– ನಿಮ್ಮ ಹಿನ್ನೆಲೆ, ನೀವು ಈ ಹಿಂದೆ ಮಾಡಿದ್ದ ಸಿನಿಮಾಗಳು ಯಾವುವು? : ನಾನು ಥಿಯೇಟರ್ ಬ್ಯಾಗ್ರೌಂಡ್‌ನಿಂದ ಬಂದವನು.ನಟನೆ, ಬ್ಯಾಕ್ ಸ್ಟೇಜ್, ಲೈಟಿಂಗ್ ಎಲ್ಲಾ ಮಾಡ್ತಿದ್ದೆ. ಕ್ಯಾಮರಾಮನ್ ಆಗಿ ನನ್ನ ಮೊದಲ ಸಿನಿಮಾ ಸಿಪಾಯಿ. ಅದಾದ ನಂತರ ಕಿರೀಟ, ಸಂಜೀವ, ೬ನೇ ಮೈಲಿ ಈಗ ರೀಸೆಂಟಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಸಿನಿಮಾ ಮಾಡಿದ್ದೇನೆ. ಇನ್ನೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ಕಪಟ ನಾಟಕ ಪಾತ್ರಧಾರಿ ಮತ್ತೊಂದು ಸಿನಿಮಾ.

– ಕಪಟ ನಾಟಕ ಪಾತ್ರಧಾರಿ ತಂಡದಲ್ಲಿ ನೀವು ಸೇರಿದ್ದು ಹೇಗೆ? : ನಾನು ಬಾಲು ಇಬ್ಬರೂ ನಾಟಕದಲ್ಲಿ ನಟಿಸುತ್ತಿದ್ದೆವು. ಅದರ ಮುಖಾಂತರ ಬಾಲು ನನ್ನ ಕರೆದು ಕ್ರಿಶ್ ಅವರನ್ನು ಪರಿಚಯಿಸಿದರು. ಕ್ರಿಶ್ ಅವರು ಈ ಕಥೆ ಹೇಳಿದ ಮೇಲೆ ಕೇಳಿ ನನಗೆ ತುಂಬಾ ಖುಷಿಯಾಯ್ತು. ಎಲ್ಲಾ ತರಹದ ಹಂದರಗಳೂ ಈ ಸಿನಿಮಾದಲ್ಲಿವೆ. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ.

– ನಿರ್ದೇಶಕ ಕ್ರಿಶ್ ಅವರ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು? ಇದು ಕ್ರಿಶ್ ಅವರ ಮೊದಲನೇ ಸಿನಿಮಾ ಆದ್ರೂ ಯಾವುದೇ ವಿಷಯದಲ್ಲಾಗಲೀ ಪರ್ಟಿಕ್ಯುಲರ್ಲಿ ಇದೇ ಬೇಕು ಅನ್ನೋ ಅಂಶ ಚೆನ್ನಾಗಿತ್ತು. ಅದನ್ನ ಕಟ್ಟಿಕೊಡೋದು ನನಗೆ ಸುಲಭ ಆಯಿತು. ನಾವು ಸಿನಿಮಾ ಶೂಟಿಂಗ್ ಹೋಗುವ ಮುಂಚಿನ ಪ್ರೀ-ವರ್ಕ್‌ಗಳನ್ನ ತುಂಬಾಚೆನ್ನಾಗಿ ಮಾಡಿಕೊಂಡಿದ್ವಿ. ಶಾಟ್ಸ್ ನಿಂದ ಹಿಡಿದು ಎಲ್ಲದಕ್ಕೂ ನನ್ನನ್ನ ತುಂಬಾ ಇನ್ವಾಲ್ವ್ ಮಾಡಿಕೊಂಡ್ರು. ಟೆಕ್ನಿಕಲಿ ಅವರಿಗೂ ಫಸ್ಟ್ ಆಗಿರೋದ್ರಿಂದ ಚರ್ಚೆ ಮಾಡಿಕೊಂಡು ಮಾಡಿದ್ರಿಂದ ತುಂಬಾ ಅನುಕೂಲವಾಯಿತು.

– ಛಾಯಾಗ್ರಹಣದಲ್ಲಿ ಹೊಸ ಪ್ರಯೋಗವನ್ನೇನಾದರೂ ಮಾಡಿದ್ದೀರಾ? :  ನಾವು ಸಿನಿಮಾ ಶೂಟಿಂಗ್ ಹೋಗೋ ಮುನ್ನ ಪ್ರತಿಯೊಂದು ಸೀಕ್ವೆನ್ಸ್ ಹೀಗೇ ಆಗಬೇಕು, ಶಾಟ್ಸ್ ಹೀಗೇ ಬರಬೇಕುಅನ್ನೋದು ಮೊದಲೇ ಇದ್ದಿದ್ರಿಂದ ಕನ್ಫ್ಯೂಷನ್ ಇರಲಿಲ್ಲ. ಈ ಪ್ರಿಪರೇಶನ್ ನಮಗೆ ತುಂಬಾ ಸಹಾಯವಾಯಿತು. ಏನೇ ಹೇಳಿದ್ರೂ ಕ್ರಿಶ್ ಅವರು ರಿಸೀವ್ ಮಾಡೋ ಗುಣ ತುಂಬಾ ಚೆನ್ನಾಗಿದೆ. ಬೇಡ ಅಂದ್ರೆ ಯಾಕೆ ಬೇಡ ಅನ್ನೊ ಕಾರಣಗಳು ಸಹ ಕೊಡುತ್ತಿದ್ದರು. ಅವರು ತುಂಬಾ ಪುಸ್ತಕಗಳನ್ನು ಬರೆದಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡುವ ಅನುಭವ ಬಹಳ ಚೆನ್ನಾಗಿತ್ತು.

CG ARUN

ಗರ್ಭಿಣಿ ಯಜ್ಞಾಶೆಟ್ಟಿ ಹ್ಯೂಮನ್ ಬಾಂಬರ್!

Previous article

ಬ್ರಹ್ಮಚಾರಿಗೆ ಬೆಡ್ ರೂಮ್ ಬಾಧೆ!

Next article

You may also like

Comments

Leave a reply

Your email address will not be published. Required fields are marked *