ಹಿಂದಿ ಕಿರುತೆರೆ ನಟ ಹಾಗೂ ಮಾಡೆಲ್ ಕರಣ್ ಒಬೆರಾಯ್, ನಟಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರಂತೆ. ಜತೆಗೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರಂತೆ. ಸದ್ಯ ಇದೇ ಆರೋಪದಡಿಯಲ್ಲಿ ಹಿಂದಿ ಕಿರುತೆರೆ ನಟ ಕರಣ್ ಒಬೆರಾಜ್ ನನ್ನು ಮುಂಬೈನ ಓಸ್ವಿಪುರದ ಪೊಲೀಸರು ಬಂಧಿಸಿದ್ದಾರೆ.
ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ಪೊಲೀಸ್ ಠಾಣೆಯಲ್ಲಿ, ಈ ರೂಪದರ್ಶಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳಂತೆ. ಈ ಸಂಬಂಧ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ಅಡಿ ಪ್ರಕರಣ ದಾಖಲಾಗಿದ್ದು, ಕರಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಕರಣ್ ‘ಸ್ವಾಭಿಮಾನ‘ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಆತ ‘ಸಾಯಾ ಆಂಡ್ ಜಸ್ಸಿ ಜೈಸೇ ಕೋಹಿ ನಹೀ‘ ಎಂಬ ಕಾರ್ಯಕ್ರಮ ಹಾಗೂ ಕೆಲವೊಂದು ಜಾಹಿರಾತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.