ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಫ್ಯಾಮಿಲಿ ವಿದೇಶಿ ಪ್ರವಾಸದಲ್ಲಿದ್ದು, ರಜೆಯ ಮಜವನ್ನು ಅನುಭವಿಸುತ್ತಿದ್ದಾರೆ. ಪ್ರವಾಸದ ಸಮಯದಲ್ಲಿ ತೆಗೆದ ಪೋಟೋಗಳನ್ನು ಕರೀನಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಎರಡು ಫೋಟೋಗಳು ಸಹ ಮೇಕಪ್ ಇಲ್ಲದೇ ತೆಗೆದಿರುವುದಾಗಿದ್ದರೂ ಸಹ ನ್ಯಾಚುರಲ್ ಆಗಿಯೇ ಕರೀನಾ ಮಿಂಚುತ್ತಿದ್ದಾರೆ.
ಹಾಗೆಯೇ ಅವರು ಪತಿ, ಮಗನೊಂದಿಗೆ ಇರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮೂವರು ಒಂದು ವಾರದ ಹಿಂದೆ ಲಂಡನ್ಗೆ ಹಾರಿದ್ದು ಮುಂಬಯಿ ವಿಮಾನ ನಿಲ್ದಾಣದಿಂದ ಹೊರಟ ಫೋಟೊ ಕೂಡ ವೈರಲ್ ಆಗಿದೆ. ಇದರಲ್ಲಿ ಕರೀನಾ ಕಪೂರ್ ಅವರು ತಮ್ಮ ಪತಿಯ ತೋಳನ್ನು ಹಿಡಿದುಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದರೆ, ಸೈಫ್ ಅಲಿಖಾನ್ ಪುತ್ರನನ್ನು ಎತ್ತಿಕೊಂಡಿದ್ದಾರೆ.
Comments