- ಸಂತೋಷ್ ಸಕ್ರೆಬೈಲು
ಬಾಲಿವುಡ್ ಸ್ಟಾರ್ಸ್ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ತಮ್ಮ ಮುದ್ದಾದ ಕಂದಮ್ಮನನ್ನ ಮನೆಗೆ ಬರಮಾಡಿಕೊಂಡಿದ್ದಾರೆ. ಹೆರಿಗಾಗಿ ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಟಿ ಕರೀನಾ ಕಪೂರ್ ದಾಖಲಾಗಿದ್ದರು. ಫೆಬ್ರವರಿ 21ನೇ ತಾರೀಖಿನಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ನಂತರ ಇವತ್ತು ತಮ್ಮ ಮನೆಗೆ ಮಗುವನ್ನ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಿಂದ ಹೊರಗೆ ಬರುವಾಗ ಕರೀನಾ ತನ್ನ ಮುದ್ದಾದ ಮಗುವಿನೊಂದಿಗೆ ಕಾರಿನಲ್ಲಿ ಹೊರಟಾಗ ಕ್ಯಾಮೆರಾ ಕಣ್ಣಿಗೆ ಒಂದಷ್ಟು ಫೋಟೋಗಳ ಸೆರೆಸಿಕ್ಕಿದ್ವು.. ಮಗುವಿಗೆ ಜನ್ಮ ನೀಡಿದ ಬಳಿಕ ಸಿಕ್ಕ ಮೊದಲ ಫೋಟೋಗಳು ಇವಾಗಿದ್ದವು..
ಕರೀನಾ ಕಪೂರ್ ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಇವತ್ತು ಡಿಸ್ಚಾರ್ಜ್ ಆಗಿದ್ದಾರೆ. ಸೈಫ್ ಅಲಿ ಖಾನ್ ತನ್ನ ಮಗು ಮತ್ತು ಹೆಂಡಿತಿಯನ್ನ ಮನೆಗೆ ಕರೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನ ಮುಗಿಸಿ ಮನೆಯತ್ತ ಕಾರು ಹೊರಟಿತು. ಈ ವೇಳೆ ಸೈಫ್ ಮತ್ತು ಕರೀನಾ ಮಾಧ್ಯಮಗಳಿಗೆ ಯಾವುದೇ ರಿಯಾಕ್ಷನ್ ನೀಡಲಿಲ್ಲ. ಜೊತೆಗೆ ತಮ್ಮ ಮಗುವಿನ ಮುಖವನ್ನ ತೋರಿಸದೇ ಕಾರಿನಲ್ಲಿ ಹೊರಟು ಹೋದ್ರು. ಆದ್ರೂ ಕೂಡ ಅಲ್ಲಿದ ಕ್ಯಾಮೆರಾ ಮ್ಯಾನ್ ತನ್ನ ಕೈಚಳಕದಿಂದ ಕರೀನಾ ಮಗುವಿನ ಫೋಟೋವನ್ನ ಕ್ಲಿಕ್ಕಿಸಿದ್ರು. ಇನ್ನು ಈ ಫೋಟೋದಲ್ಲಿ ಕಾಣುತ್ತಿದ್ದ ಹಾಗೆ, ಕರೀನಾಳ ಕೈ ತೋಳಲ್ಲಿ ಮಗು ಬೆಚ್ಚನೆ, ಮುದ್ದಾಗಿ ಮಲಗಿದೆ. ಪುಟ್ಟ ಕಂದನ ಮುಖಕ್ಕೆ ಸಣ್ಣ ಬಟ್ಟೆಯನ್ನ ಮಾಸ್ಕ್ ರೀತಿ ಹಾಕಿದ್ದರು. ಈ ಕಾರಣದಿಂದ ಮಗುವಿನ ಮುಖ ಸರಿಯಾಗಿ ಕಾಣುತ್ತಿಲ್ಲ, ಆದರೆ, ಕಾರಿನಲ್ಲಿ ಕರೀನಾ ಕಪೂರ್ ಮತ್ತು ಸೈಪ್ ಅಲಿ ಖಾನ್ ಇದ್ದಿದ್ದು, ಮಾಧ್ಯಮಗಳತ್ತ ಕೈ ಬೀಸಿ ಮುಂದೆ ಸಾಗಿದ್ರು.
ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕಳೆದ ಭಾನುವಾರ ಬೆಳಗ್ಗೆ ಮುಂಬೈನ ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೀನಾ ಕಪೂರ್ ದಾಖಲಾಗಿದ್ರು. ಅದೇ ದಿನ ಅಂದ್ರೆ ಫೆಬ್ರವರಿ 21ರ ಬೆಳಗ್ಗೆ 9 ಗಂಟೆಗೆ ಗಂಡು ಮಗುವಿಗೆ ಕರೀನಾ ಜನ್ಮ ನೀಡಿದ್ದರು. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಹಲವು ವರ್ಷಗಳು ಪ್ರೀತಿಸಿ, ಇಬ್ಬರು ಒಟ್ಟಿಗೆ ಸುತ್ತಾಡಿದ್ದವರು. ನಂತರ 2012ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಾಲ್ಕು ವರ್ಷಗಳ ನಂತ್ರ ಅಂದ್ರೆ ಡಿಸೆಂಬರ್ 20, 2016ರಲ್ಲಿ ತಮ್ಮ ಮೊದಲ ಮಗು ತೈಮೂರ್ ಜನನವಾಗಿತ್ತು. ಆ ಬಳಿಕ ಎರಡನೇ ಮಗುವಿನ ಆಗಮನವಾಗುತ್ತಿದೆ ಅಂತ ಕಳೆದ ಆಗಸ್ಟ್‌ನಲ್ಲಿ ಘೋಷಣೆ ಮಾಡಿದ್ದರು!
No Comment! Be the first one.