ಬಾಲಿವುಡ್ ನ ಪ್ರಮುಖ ಜೋಡಿಗಳ ಪೈಕಿ ಕರೀನಾ ಮತ್ತು ಸೈಫ್ ಅಲಿ ಖಾನ್ ಪ್ರಮುಖರಾಗಿದ್ದಾರೆ. ಮದುವೆಯಾಗಿ ಆರು ವರ್ಷವಾಗಿದ್ದರೂ ಇಬ್ಬರ ನಡುವೆ ಇರುವ ಪ್ರೀತಿ ಎಳ್ಳಷ್ಟು ಮಾಸದೇ ಉಳಿದಿರುವುದು ವಿಶೇಷವಾಗಿದೆ. ಯಾಕಂದ್ರೆ ಸಿನಿ ತಾರೆಯರ ದಾಂಪತ್ಯ ಮುರಿದು ಬೀಳೋದು ಬಟ್ಟೆ ಬದಲಿಸುವಷ್ಟು ಸುಲಭವಲ್ಲವೇ.
ಮದುವೆಗೆ ಮುನ್ನ 5 ವರ್ಷಗಳ ಕಾಲ ಪ್ರೇಮ ಪಕ್ಷಿಗಳಾಗಿದ್ದ ಕರೀನಾ ಜೋಡಿ ನಂತರ ಎಲ್ಲರನ್ನು ಒಪ್ಪಿಸಿ ಮದುವೆಯಾದವರು. ಮದುವೆಗೆ ಮುನ್ನ ಲಿವ್ ಇನ್ ನಲ್ಲಿರುವ ಅಲಿ ಖಾನ್ ಮನದಾಸೆಯಾಗಿತ್ತಂತೆ. ಹೌದು.. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಲುವಾಗಿ ಆಲಿ ಖಾನ್ ಲಿವಿಂಗ್ ನಲ್ಲಿರಲು ನಿರ್ಧರಿಸಿ, ನೇರವಾಗಿ ಕರೀನಾ ತಾಯಿಯನ್ನೇ ಅಪ್ರೋಚ್ ಮಾಡಿದ್ದರಂತೆ. ಕರೀನಾ ತಾಯಿ ಅದಕ್ಕೆ ವಿರೋಧ ವ್ಯಕ್ತಪಡಿಸದೇ ಸರಿ ಎಂದೊಪ್ಪಿಕೊಂಡಿದ್ದರಂತೆ. ಇನ್ನು ಕರೀನಾ ಮತ್ತು ಆಲಿ ಖಾನ್ ಅವರ ಮದುವೆಗೆ ಒಪ್ಪಿಸುವುದು ಕಷ್ಟವಾಗಲಿಲ್ಲವೆಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಕರೀನಾ ತಿಳಿಸಿದ್ದಾರೆ.
No Comment! Be the first one.