ಇದು ಈ ವರ್ಷದ ಸೂಪರ್ ಹಿಟ್ ಸಿನಿಮಾ!
ಡಾ.ಡಿ.ಎಸ್ ಮಂಜುನಾಥ್ ನಿರ್ಮಾಣದ ಕೆಮಿಸ್ಟ್ರಿ ಆಫ್ ಕರಿಯಪ್ಪ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಕುಮಾರ್ ನಿರ್ದೇಶನದ ಈ ಸಿನಿಮಾ ಅಪ್ಪಟ ನೆಲದ ಘಮಲಿನ ಕಥೆ, ಗಂಭೀರ ವಿಚಾರವನ್ನೂ ಕೂಡಾ ಹಾಸ್ಯದ ಶೈಲಿಯಲ್ಲಿಯೇ ನಿರೂಪಣೆ ಮಾಡಿರುವ ಭಿನ್ನವಾದ ಪ್ರಯೋಗಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಕರಿಯಪ್ಪನ ಕೆಮಿಸ್ಟ್ರಿ ಯಶಸ್ವಿಯಾಗಿ ಐವತ್ತನೇ ದಿನ ಪೂರೈಸಿಕೊಂಡಿದೆ.
ನಿರ್ದೇಶಕ ಕುಮಾರ್ ಈ ಚಿತ್ರವನ್ನು ರೂಪಿಸಿದ ರೀತಿಗೆ ಎಲ್ಲ ವರ್ಗಗಳ ಪ್ರೇಕ್ಷಕರೂ ಫಿದಾ ಆಗಿದ್ದಾರೆ. ಯಾವುದೇ ಚಿತ್ರವಾಗಿದ್ದರೂ ಪ್ರೇಕ್ಷಕರ ಬಾಯಿಂದ ಬಾಯಿಗೆ ಹರಡಿಕೊಳ್ಳೋ ಒಳ್ಳೆ ಮಾತುಗಳಿಂದಲೇ ಗೆದ್ದು ಬಿಡುತ್ತವೆ. ಆದರೆ ಇಂಥಾದ್ದೊಂದು ಸಕಾರಾತ್ಮಕ ಅಲೆ ಸೃಷ್ಟಿಸೋದು ಅಷ್ಟು ಸಲೀಸಿನ ಸಂಗತಿಯೇನಲ್ಲ. ಒಂದೊಳ್ಳೆ ಕಥೆ, ಬೆರಗಾಗಿಸುವಂಥಾ ಹೊಸತನಗಳೆಲ್ಲ ಇರೋ ಚಿತ್ರಗಳಿಂದ ಮಾತ್ರವೇ ಅದು ಸಾಧ್ಯವಾಗುತ್ತೆ. ಕರಿಯಪ್ಪನ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿರೋದರ ಹಿಂದೆಯೂ ಅಂಥಾದ್ದೇ ಕ್ರಿಯೇಟಿವ್ ಅಂಶಗಳಿವೆ.
ಇಂಥಾ ಭರಪೂರ ಗೆಲುವು ದಕ್ಕಬೇಕೆಂದರೆ ಕ್ರಿಯೇಟಿವ್ ವಿಭಾಗದ ಜೊತೆಗೇ ಅದಕ್ಕೆ ಸಾಥ್ ನೀಡುವ ನಿರ್ಮಾಪಕರ ಪಾತ್ರವೂ ಪ್ರಧಾನವಾಗುತ್ತದೆ. ಆ ನಿಟ್ಟಿನಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಗೆಲುವಿನಲ್ಲಿ ನಿರ್ಮಾಪಕ ಮಂಜುನಾಥ್ ಗೌಡರ ಪಾತ್ರವೂ ಪ್ರಧಾನವಾಗಿದೆ. ಈ ಹಿಂದೆ ಸಂಯುಕ್ತ-೨ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದವರು ಡಿ ಎಸ್ ಮಂಜುನಾಥ್. ಸಿನಿಮಾವನ್ನು ಧ್ಯಾನದಂತೆ ಪರಿಭಾವಿಸಿ ವ್ಯವಹಾರದಾಚೆಗೆ ಯೋಚಿಸೋ ಮನಸ್ಥಿತಿ ಹೊಂದಿರುವವರು ಮಂಜುನಾಥ್. ಈ ಕಾರಣದಿಂದಲೇ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಈ ವರ್ಷದ ಬಿಗ್ ಹಿಟ್ ಮೂವಿಯಾಗಿ ದಾಖಲಾಗಿದೆ.
ತಬಲಾ ನಾಣಿ ಮುಖ್ಯಪಾತ್ರವನ್ನು ನಿರ್ವಹಿಸಿದ್ದ ಈ ಚಿತ್ರದಲ್ಲಿ ಚಂದನ್ ಆಚಾರ್ಯ ಮತ್ತು ಸಂಜನಾ ಆನಂದ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಈ ಮೂಲಕ ಒಂದು ಹಿಸ್ಟರಿ ಕ್ರಿಯೇಟ್ ಮಾಡುವಲ್ಲಿ ಗೆದ್ದಿದ್ದಾನೆ. ಈ ಚಿತ್ರ 2019ರ ಹಿಟ್ ಚಿತ್ರವಾಗಿ ದಾಖಲಾಗಿ ಎಪ್ಪತೈದನೇ ದಿನದತ್ತ ದಾಪುಗಾಲಿಡುತ್ತಿದೆ.
No Comment! Be the first one.