ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಫೆಬ್ರವರಿ ಹದಿನೈದರಂದು ಬಿಡುಗಡೆಗೆ ರೆಡಿಯಾಗಿದೆ. ಅಪ್ಪ, ಮಗ ಮತ್ತು ಸೊಸೆಯ ಸುತ್ತಾ ನಡೆಯೋ ಮಜವಾದ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಾಯಕ ಚಂದನ್ ಗೆ ಜೋಡಿಯಾಗಿ ನಟಿಸಿರುವವರು ಸಂಜನಾ ಆನಂದ್.
ಸಂಜನಾಗಿದು ಮೊದಲ ಸಿನಿಮಾ. ಆದರೆ ಈ ಮೊದಲ ಹೆಜ್ಜೆಯಲ್ಲಿಯೇ ಕರಿಯಪ್ಪನ ಕೆಮಿಸ್ಟ್ರಿ ಸಂಜನಾರನ್ನು ಪರಿಪೂರ್ಣ ನಟಿಯನ್ನಾಗಿರೂಪಿಸಿದೆ. ಅಷ್ಟಕ್ಕೂ ನಟನೆ ಅನ್ನೋದು ಎಳವೆಯಿಂದಲೇ ಸಂಜನಾರನ್ನು ಕಾಡುತ್ತಿದ್ದ ಕನಸು. ಆದರೆ ಮನೆಯಲ್ಲಿ ಮಾತ್ರ ಈ ಬಗ್ಗೆ ಕೊಂಚ ಮಡಿವಂತಿಕೆ ಇದ್ದದ್ದು ಸುಳ್ಳಲ್ಲ. ಮೂಲತಃ ಕೊಡಗಿನವರಾದರೂ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಸಂಜನಾ ಚಿಕ್ಕ ವಯಸಿನಿಂದಲೇ ಭರತನಾಟ್ಯದ ರಂಗಕ್ಕಿಳಿದಿದ್ದರು. ಈ ನಡುವೆಯೇ ತನ್ನೊಳಗಿನ ಆಸಕ್ತಿಗೆ ವಿರುದ್ಧವಾದ ದಿಕ್ಕಿನಲ್ಲಿಯೇ ಓದಿ ಡೆಲ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೈ ತುಂಬಾ ಸಂಬಳ ಸಿಗೋ ಒಂದೊಳ್ಳೆ ಕೆಲಸವನ್ನೂ ಸಂಜನಾ ಪಡೆದುಕೊಂಡಿದ್ದರು.
ಆದರೆ, ಆಳವಾಗಿ ಬೇರೂರಿರೋ ಯಾವುದೇ ಆಸಕ್ತಿಯಾದರೂ ಗುರಿಯ ನೇರಕ್ಕೆ ತಂದು ಬಿಟ್ಟೇ ತೀರುತ್ತದೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವವರು ಸಂಜನಾ. ಡೆಲ್ ನಲ್ಲಿ ಇಡೀ ಜೀವನ ಸೆಟ್ ಆಯ್ತೆಂಬಂಥಾ ಚೆಂಣದದ ಕೆಲಸ ಸಿಕ್ಕಿತ್ತಲ್ಲಾ? ಇದರ ನಡುವೆ ಬದುಕು ಕಳೆದು ಹೋಯ್ತು ಅಂತಿರುವಾಗಲೇ ಕಿರು ಚಿತ್ರವೊಂದರಲ್ಲಿ ನಟಿಸೋ ಅವಕಾಸ ಬಂದೊದಗಿತ್ತು. ಆ ಕಿರುಚಿತ್ರದ ಕಾರಣದಿಂದಲೇ ಕೆಮಿಸ್ಟ್ರಿ ಆಫ್ ಕರಿಯಪ್ಪದಲ್ಲಿ ನಾಯಕಿಯಾಗೋ ಅವಕಾಶವೂ ಕೂಡಿ ಬಂದಿತ್ತು.
ಆದರೆ ಮನೆಯಲ್ಲಿ ಅಮ್ಮನನ್ನು ಹೇಗೋ ಒಪ್ಪಿಸಿದ್ದ ಸಂಜನಾಗೆ ಅಪ್ಪನನ್ನು ಒಪ್ಪಿಸೋದೇ ದೊಡ್ಡ ಸಾಹಸವಾಗಿತ್ತಂತೆ. ಆದರೀಗ ಚಿತ್ರದ ಬಗ್ಗೆ ಕೇಳಿ ಬರುತ್ತಿರೋ ಒಳ್ಳೆ ಮಾತುಗಳಿಂದಾಗಿ ಹೆತ್ತವರೆಲ್ಲ ಖುಷಿಯಾಗಿದ್ದಾರೆ. ಈ ಚಿತ್ರದಲ್ಲಿ ಅಂಥಾದ್ದೊಂದು ಒಳ್ಳೆಯ ಪಾತ್ರವೇ ಸಂಜನಾಗೆ ಸಿಕ್ಕಿದೆ. ತೀರಾ ದೊಡ್ಡ ದೊಡ್ಡ ಕಲಾವಿದರೊಂದಿಗೆ ನಟಿಸಲು ಭಯ ಹೊಂದಿದ್ದ ಅವರಿಗೆ ನಿರ್ದೇಶಕರು, ಚಂದನ್, ತಬಲಾ ನಾಣಿ ಸೇರಿದಂತೆ ಇಡೀ ಚಿತ್ರತಂಡ ಸಾಥ್ ನೀಡಿದೆ. ಆ ಕಾರಣದಿಂದಲೇ ಚೆನ್ನಾಗಿ ನಟಿಸೋಕೆ ಸಾಧ್ಯವಾಯ್ತು ಅನ್ನೋ ಸಂಜನಾಗೆ, ಕರಿಯಪ್ಪನ ಸೊಸೆಯಾಗಿ ಅದೃಷ್ಟ ಖುಲಾಯಿಸಿದೆ. ಅವರ ಮುಂದೀಗ ಹೊಸಾ ಅವಕಾಶಗಳ ಸಾಲು ನೆರಯಲಾರಂಭಿಸಿದೆ
#
No Comment! Be the first one.