ಎಂ ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರ ಈಗಾಗಲೇ ನಾನಾ ದಿಕ್ಕಿನಿಂದ ಪ್ರೇಕ್ಷಕರನ್ನ ಆವರಿಸಿಕೊಂಡಿದೆ. ಇದೇ ಏಪ್ರಿಲ್ ತಿಂಗಳ ಹತ್ತೊಂಬತ್ತರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶ್ರೇಯಸ್ ನಾಯಕನಾಗಿ ಅದ್ದೂರಿಯಾಗಿಯೇ ಎಂಟ್ರಿ ಕೊಡುತ್ತಿರೋ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿರೋ ಕೌತುಕದ ಪ್ರಶ್ನೆಗಳು ಒಂದೆರಡಲ್ಲ. ಆದರೆ ಅದನ್ನು ಮತ್ತಷ್ಟು ಉದ್ದೀಪನಗೊಳಿಸುವಂಥಾ ವಿಚಾರಗಳೇ ಚಿತ್ರತಂಡದ ಕಡೆಯಿಂದ ಜಾಹೀರಾಗುತ್ತಿವೆ.
ಗುರುದೇಶಪಾಂಡೆ ನಿರ್ದೇಶನ ಮಾಡಿರೋ ಪಡ್ಡೆಹುಲಿ ಚಿತ್ರದ ನಿಜವಾದ ಕಥಾ ಹಂದರವೇನೆಂಬ ಬಗ್ಗೆ ಆರಂಭದಿಂದಲೂ ಒಂದು ಬಗೆಯ ಕುತೂಹಲವಿತ್ತು. ಆದರೆ ಬರ ಬರುತ್ತಾ ಇದರ ಪಾತ್ರವರ್ಗವೇ ಪ್ರಧಾನ ಆಕರ್ಷಣೆಯಾಗಿ ಮಾರ್ಪಾಟಾಗಿದೆ!
ಆರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪಡ್ಡೆಹುಲಿಯಲ್ಲಿ ನಟಿಸುತ್ತಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಆ ನಂತರ ಸುಧಾರಾಣಿಯೂ ಈ ಸಾಲಿಗೆ ಸೇರಿಕೊಂಡರು. ನೋಡ ನೋಡುತ್ತಲೇ ಪಡ್ಡೆ ಹುಲಿಯ ಪಕ್ಕದಲ್ಲಿ ಕಿರಿಕ್ ಪಾರ್ಟಿ ರಕ್ಷಿತ್ ಕೂಡಾ ನಿಂತು ನಕ್ಕರು. ಇದೀಗ ರಕ್ಷಿತ್ ಇಲ್ಲಿ ಯಾವ ಪಾತ್ರ ನಿರ್ವಹಿಸಿದ್ದಾರೆಂಬ ಸುಳಿವೊಂದು ಸಿಕ್ಕಿದೆ.
ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕಾಲೇಜು ಹುಡುಗ ಕರ್ಣನಾಗಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಪಡ್ಡೆಹುಲಿ ಚಿತ್ರದಲ್ಲಿ ರಕ್ಷಿತ್ ಕಿರಿಕ್ ಪಾರ್ಟಿ ಕರ್ಣನಾಗಿಯೇ ಕಾಣಿಸಿಕೊಂಡಿದ್ದಾರೆ. ಇಲ್ಲವರು ಕಾಲೇಜು ಗ್ಯಾಂಗಿನ ಸೀನಿಯರ್. ಕಿರಿಕ್ ಪಾರ್ಟಿ ಪಾತ್ರದ ಮುಂದುವರೆದ ಸ್ಟೋರಿ ಅವರ ಪಾತ್ರದ ಮೂಲಕ ಅನಾವರಣಗೊಳ್ಳಲಿದೆಯಂತೆ.
No Comment! Be the first one.