2018-19ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ವಿಭಾಗದಿಂದ 13 ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಚಿತ್ರಗಳ ವಿಜೇತರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯು ಅಭಿನಂದನಾ ಕಾರ್ಯಕ್ರಮದ ಮೂಲಕ ಗೌರವಿಸಿದೆ. ಇದೇ ಸಂದರ್ಭದಲ್ಲಿ ಭೀಕರ ಪ್ರವಾಹದಿಂದ ನೆರೆ ಹಾವಳಿಗೆ ತುತ್ತಾಗಿರುವ ಉತ್ತರ ಕರ್ನಾಟಕದ ಸಂತ್ರಸ್ಥರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ 25 ರುಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದೆಂದು ಮಾಧ್ಯಮದವರಿಗೆ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಸಾರಾ.ಗೋವಿಂದು, ಎಸ್.ಎ.ಚಿನ್ನೆಗೌಡ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾತಿಚರಾಮಿ ನಿರ್ದೆಶಕ ಮಂಸೋರೆ, ಒಂದಲ್ಲಾ ಎರಡಲ್ಲ ನಿರ್ದೇಶಕ ಸತ್ಯಪ್ರಕಾಶ್, ನಿರ್ಮಾಪಕ ಉಮಾಪತಿ, ಬಾಲ ಕಲಾವಿದ ರೋಹಿತ್, ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ನಿರ್ಮಾಪಕರ ಪರವಾಗಿ ಚಿದಾನಂದ, ಸಾಹಸ ನಿರ್ದೇಶಕರುಗಳಾದ ಅನ್ಬು ಅರಿವು ಮುಂತಾದವರು ಗೌರವವನ್ನು ಸ್ವೀಕರಿಸಿದ್ದಾರೆ.