ಬಾಲಿವುಡ್ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಮತ್ತು ಉರಿ ಖ್ಯಾತಿಯ ವಿಕ್ಕಿ ಕೌಶಲ್ ಡೇಟ್ ಮಾಡುತ್ತಿದ್ದಾರೆಂಬ ಡೌಟು ಬಿ ಟೌನಿನಲ್ಲಿ ಬಹಳ ಜೋರಾಗಿಯೇ ಚರ್ಚೆಗೊಳಗಾಗಿದೆ. ಇತ್ತೀಚಿಗಷ್ಟೇ ರಣಬೀರ್ ಕಪೂರ್ ಜತೆಗೆ ತಾವು ರಿಲೇಷನ್ ಶಿಪ್ ಕಡಿದುಕೊಂಡಿರುವುದಾಗಿ ಕತ್ರಿನಾ ಕನ್ ಫರ್ಮ್ ಮಾಡಿದ್ದರು. ಇದೇ ಸಮಯದಲ್ಲಿ ವಿಕ್ಕಿ ಕೂಡ ತಮ್ಮ ಗೆಳತಿ ಹರ್ಲಿನ್ ಸೇಥಿ ಜತೆಗೆ ಬ್ರೇಕ್ ಅಪ್ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಇಬ್ಬರು ಭಗ್ನ ಪ್ರೇಮಿಗಳು ಒಂದೇ ಪಾಥ್ ನಲ್ಲಿರುವುದರಿಂದ ಇಬ್ಬರು ಡೇಟಿಂಗ್ ನಲ್ಲಿರಬಹುದೆಂದು ಸೋಶಿಯಲ್ ಮೀಡಿಯಾದಲ್ಲಿ ಪೋಲಿಂಗ್ ನಡೆಯುತ್ತಿದೆ.
ಇನ್ನು ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಕತ್ರಿನಾ ಕೈಫ್ ಮತ್ತು ಬ್ಯಾಡ್ ಬಾಯ್ ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಭಾಗವಹಿಸಿದ್ದರು. ಷೋನಲ್ಲಿ ವಿಕ್ಕಿ ಮಾತಿನಲ್ಲಿಯೇ ಕತ್ರಿನಾಳ ಕಾಲೆಳೆದಿದ್ದರು. ಜತೆಗೆ ಕತ್ರಿನಾಗಾಗಿ ಮುಝಸೇ ಶಾದಿ ಕರೋಗಿ ಅನ್ನೋ ಹಾಡೊಂದನ್ನು ಹಾಡಿದ್ದರು. ಕತ್ರಿನಾ ಇದ್ದಕ್ಕೆ ಮುಗುಳ್ನಕ್ಕು ಚೆಲ್ಲಿದ್ದರು. ಜತೆಗೆ ವಿಕ್ಕಿ ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗುವುದಾಗಿಯೂ ಹೇಳಿದ್ದರು. ಈ ಎಲ್ಲ ವಿದ್ಯಮಾನಗಳು ಕತ್ರಿನಾ ಮತ್ತು ವಿಕ್ಕಿ ಕೌಶಲ್ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಏನೋ ಇರಬಹುದೆಂದು ಯೋಚಿಸುವಂತಾಗಿದೆ. ಊರಿಗೆ ಬಂದೋರು ನೀರಿಗೆ ಬರೋಲ್ವೇ. ಸದ್ಯಕ್ಕೆ ಸೀಕ್ರೆಟ್ ಆಗಿ ಮಾಡುವ ಸಂಗತಿಗಳು ಕೆಲ ದಿನಗಳಷ್ಟರಲ್ಲಿಯೇ ಜಗಜ್ಜಾಹೀರಾಗಲೇಬೇಕಲ್ಲವೇ. ಯಾವುದಕ್ಕೂ ಕಾದು ನೋಡೋಣ.
No Comment! Be the first one.