ಸದ್ಯ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನೊಪ್ಪಿಕೊಂಡು ಬ್ಯುಸಿಯಾಗಿರುವ ಕತ್ರಿನಾ ಕೈಫ್ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಹೌದು ನಟಿಯಾಗಿ ಗುರುತಿಸಿಕೊಂಡಿರುವ ಕತ್ರಿನಾ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಸ್ಟಾರ್ಟ್ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ. ಈ ಹಿಂದೆಯೇ ಈ ಸುದ್ದಿ ಹರಿದಾಡುತ್ತಿದ್ದರೂ ಕತ್ರಿನಾ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಆದರೆ ಸಂದರ್ಶನವೊಂದರಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ವರ್ಷಾಂತ್ಯಕ್ಕೆ ಪ್ರೊಡಕ್ಷನ್ ಹೌಸ್ ಶುರು ಮಾಡಲು ಡಿಸೈಡ್ ಮಾಡಿದ್ದಾರೆ.
ಈಗಾಗಲೇ ಅನುಷ್ಕಾ ಶರ್ಮ, ದೀಪಿಕಾ ಪಡುಕೋಣೆ ನಟಿಮಣಿಯರು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡು ನಿರ್ಮಾಪಕಿಯರಾಗಿ ಮಿಂಚುಹರಿಸಿರುವ ಸಾಲಿಗೆ ಲೇಟ್ ಆದ್ರೂ ಲೇಟೆಸ್ಟಾಗಿ ಕತ್ರಿನಾ ಕೈಫ್ ಸೇರ್ಪಡೆಗೊಳ್ಳಲಿದ್ದಾರೆ. ಸದ್ಯ ಸಲ್ಮಾನ್ ಖಾನ್ ಜತೆ ಅಭಿನಯಿಸಿರುವ ಭಾರತ್ ಚಿತ್ರದ ಬಿಡುಗಡೆಗಾಗಿ ಕತ್ರಿನಾ ಕಾಯುತ್ತಿದ್ದಾರೆ.
Leave a Reply
You must be logged in to post a comment.