ಹಾಟ್ ಬ್ಯೂಟಿ ಮತ್ತು ತಮ್ಮ ಫಿಟ್ ನೆಸ್ ಮೂಲಕವೇ ಬಿ ಟೌನ್ ನಲ್ಲಿ ತನ್ನ ಚಾರ್ಮ್ ಉಳಿಸಿಕೊಂಡ ನಟಿಮಣಿಯರ ಪೈಕಿ ಕತ್ರಿನಾ ಕೈಫ್ ಅಗ್ರಸ್ಥಾನದಲ್ಲಿದ್ದಾರೆ. ಸದ್ಯ ಭಾರತ್ ಸಿನಿಮಾದ ಪ್ರೊಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕತ್ರಿನಾ ಕೈಫ್ ಸದ್ಯದಲ್ಲೇ ಕಾಸ್ಮೆಟಿಕ್ ಬ್ರ್ಯಾಂಡ್ ಒಂದನ್ನು ಆರಂಭಿಸಲಿದ್ದಾರಂತೆ. ಹೌದು ಫ್ಯಾಷನ್ ಮತ್ತು ಸ್ಟೈಲ್ ಬ್ರ್ಯಾಂಡ್ ಗಳಿಗೆ ರೂಪದರ್ಶಿಯೂ ಆಗಿರುವ ಕತ್ರಿನಾ ಕಾಸ್ಮೆಟಿಕ್ ಬ್ರ್ಯಾಂಡೊಂದನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಶೀಘ್ರದಲ್ಲೇ ಅದನ್ನು ಮಾರುಕಟ್ಟೆಗೆ ಪರಿಚಯಿಸುವ ಸಿದ್ದತೆಯಲ್ಲಿಯೂ ಇದ್ದಾರೆ. ಎಲ್ಲ ಅಂದುಕೊಂಡಂತಾದರೆ ಇದೇ ವರ್ಷದ ಅಕ್ಟೋಬರ್ ವೇಳೆಗೆ ಕತ್ರಿನಾ ಹೆಸರಿನ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಲೆಬ್ರೆಟಿಗಳಾದ ರಿಹನ್ನಾ, ಕೈಲಿ ಜೆನ್ನರ್, ಮಡೋನ್ನಾ, ಕಿಮ್ ಕರ್ದಷಿಯಾನ್, ವಿಕ್ಟೋರಿಯಾ ಬೇಕಂ ಸೇರಿದಂತೆ ಬಹುತೇಕರು ತಮ್ಮದೇ ಹೆಸರಿನ ಕಾಸ್ಮೆಟಿಕ್ ಉತ್ಪನ್ನಗಳ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಸದ್ಯ ಇವರ ಸಾಲಿಗೆ ಕತ್ರಿನಾ ಕೂಡ ಸೇರುವ ಕಾಲವೂ ಸನ್ನಿಹಿತವಾಗಲಿದೆ.
Leave a Reply
You must be logged in to post a comment.