ಬಹುನಿರೀಕ್ಷಿತ ಭಾರತ್ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕತ್ರಿನಾ ಕೈಫ್ ಕಲರ್ ಫುಲ್ ಆಗಿ ಮಿಂಚಿದ್ದಾರೆ. ಈಗಾಗಲೇ ಟ್ರೇಲರ್ ಮತ್ತು ಆಡಿಯೋ ಮೂಲಕ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿರುವ ಈ ಸಿನಿಮಾದ ಹೈಪ್ ನ ಮಧ್ಯೆ ಕತ್ರಿನಾ ಕೈಫ್ ಮತ್ತೊಂದು ಪಾತ್ರದಲ್ಲಿ ನಟಿಸುವ ಆಸೆಯನ್ನು ಹೊರಹಾಕಿದ್ದಾರೆ. ಹೌದು ಭಾರತದ ಉಕ್ಕಿನ ಮಹಿಳೆ ಹಾಗೂ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಬಯೋಪಿಕ್ ನಲ್ಲಿ ತಾನು ನಟಿಸಲು ಉತ್ಸುಕಳಾಗಿದ್ದೇನೆಂದು ಕತ್ರಿನಾ ತಿಳಿಸಿದ್ದಾರೆ.
ಬಹಳ ದಿನಗಳಿಂದ ಇಂದಿರಾ ಗಾಂಧಿ ಬಯೋಪಿಕ್ ಕುರಿತಾದ ಚರ್ಚೆ ಬಿ ಟೌನ್ ನಲ್ಲಿ ಆಗುತ್ತಲೇ ಇತ್ತು. ಈ ಮಧ್ಯೆ ಕತ್ರಿನಾ ಈ ಹೇಳಿಕೆ ನೀಡಿರುವುದಕ್ಕೂ ಬಯೋಪಿಕ್ ಚರ್ಚೆ ಆಗುತ್ತಿರುವುದಕ್ಕೂ ಲಿಂಕ್ ಇರಬಹುದೆಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬಹಳಷ್ಟು ಚರ್ಚೆಯಾಗುತ್ತಿದ್ದು, ಇಂದಿರಾ ಗಾಂಧಿ ಪಾತ್ರಕ್ಕೆ ಕತ್ರಿನಾ ಸೂಟ್ ಆಗುತ್ತಾರೆಂಬ ಪಾಸೀಟೀವ್ ಪ್ರತಿಕ್ರಿಯೆಗಳು ಹರಿದಾಡುತ್ತಿವೆ. ಝೀರೋ ಸಿನಿಮಾದ ನಂತರ ತೆರೆಮೇಲೆ ಕಾಣಿಸಿಕೊಳ್ಳಲಿದ್ದ ಕತ್ರಿನಾ ಕೈಫ್ ಸಲ್ಮಾನ್ ಜೊತೆ ಸಿನಿಪ್ರಿಯರ ಮುಂದೆ ಡ್ಯೂಯೇಟ್ ಆಡಲು ರೆಡಿಯಾಗಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಜತೆ ಸೂರ್ಯವಂಶಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
No Comment! Be the first one.