ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕ ಚೋಪ್ರಾ ಬಿಕಿನಿ ತೊಟ್ಟು ಬೀಚ್ ನಲ್ಲಿ ಎಂಜಾಯ್ ಮಾಡಿ ಬಂದ ಬೆನ್ನಲ್ಲೆ ಮತ್ತೊಬ್ಬ ಬಾಲಿವುಡ್ ನಟಿ ಬಿಕಿನಿಯಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ ನ ಹಾಟ್ ಬೆಡಗಿ ಕತ್ರಿನಾ ಕೈಫ್ ಬಿಕಿನಿಯಲ್ಲಿ ಫೋಸ್ ಕೊಡುತ್ತಿರೋ ನಟಿ. ಸದ್ಯ ಫಿಲಿಫೈನ್ಸ್ ನಲ್ಲಿ ಫುಲ್ ಬ್ಯುಸಿಯಾಗಿರೋ ಕತ್ರಿನಾ, ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಕತ್ ಎಂಜಾಯ್ ಮಾಡ್ತಿದ್ದಾರೆ. ಕತ್ರಿನಾ ತಮ್ಮ ಇನ್ ಸ್ಟಾದಲ್ಲಿ ಬಿಕಿನಿಯಲ್ಲಿ ನಿಂತಿರೋ ಪೋಟೋಗಳನ್ನು ವಿಡಿಯೋಗಳನ್ನು ಷೇರ್ ಮಾಡಿ ಅಭಿಮಾನಿಗಳಿಗೆ ರಸದೂಟವನ್ನು ನೀಡಿದ್ದಾರೆ.
ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟ್ರೋಲಿಗರ ಕೆಂಗಣ್ಣಿಗೂ ಬೀಳುವ ಸಾಧ್ಯತೆ ಇದೆ. ಆ ವಿಡಿಯೋಗಳನ್ನು ಫೋಟೋಗಳನ್ನು ಪ್ರಸಿದ್ಧ ಅಂಡರ್ ವಾಟರ್ ಫೋಟೋಗ್ರಾಫರ್ ಲುಮಿನಸ್ ದೀಪ್ ಅನ್ನೋರು ಸೆರೆ ಹಿಡಿದಿದ್ದಾರಂತೆ. ಕತ್ರಿನಾ ನಿಯತಕಾಲಿಕೆಯೊಂದಕ್ಕೆ ಈ ಫೋಟೋ ಶೂಟ್ ನೀಡಿದ್ದು, ಅದರ ಸಲುವಾಗಿಯೇ ಸಿಮಿಲೋನ್ನಿನ ಐಸ್ ಲ್ಯಾಂಡಿಗೆ ತೆರಳಿದ್ದರಂತೆ.