ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಅವರದ್ದು. ಬಹುಶಃ ರಾಜ್ಕುಮಾರ್ ಅವರನ್ನು ಬಿಟ್ಟರೆ ಶಿವಣ್ಣನಷ್ಟು ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಶಿವರಾಜ್ ಕುಮಾರ್. ಅವರ ಈ ಕಲರ್ಫುಲ್ ಸಿನಿ ಜರ್ನಿಗೆ ಕಳಶಪ್ರಾಯವಾಗೋ ಎಲ್ಲ ಸಾಧ್ಯತೆಗಳನ್ನೂ ಹೊಂದಿರೋ ಚಿತ್ರ ಕವಚ!
ಕವಚ ಮಲೆಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ಸೂಪರ್ ಹಿಟ್ ಆಗಿದ್ದ ಒಪ್ಪಂನಿಂದ ಸ್ಫೂರ್ತಿ ಪಡೆದು ರಚಿಸಲ್ಪಟ್ಟಿರೋ ಕಥಾ ಹಂದರ ಹೊಂದಿರುವ ಚಿತ್ರ. ನಮ್ಮದೇ ನೆಲದ ಘಮಲು ಹೊತ್ತು ಸಿದ್ಧಗೊಂಡಿರೋ ಈ ಚಿತ್ರ ಡಿಸೆಂಬರ್ ಏಳನೇ ತಾರೀಕು ತೆರೆ ಕಾಣಲು ತಯಾರಾಗಿದೆ.
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಈ ವರೆಗೂ ಮಾಡಿರದಂಥಾ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಮನ ಮಿಡಿಯುವ ಕಥಾ ಹಂದರ ಹೊಂದಿರೋ ಕವಚದಲ್ಲಿ ಶಿವಣ್ಣ ಅಂಧನಾಗಿಯೂ ಮನೋಜ್ಞವಾಗಿ ನಟಿಸಿದ್ದಾರಂತೆ. ಈ ಮೂಲಕ ಕವಚ ಶಿವಣ್ಣ ಇಷ್ಟೂ ವರ್ಷಗಳ ಸಿನಿಮಾ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗುತ್ತದೆಂಬ ನಿರೀಕ್ಷೆಗಳೂ ಇವೆ.
ಎಂ. ವಿ ಸತ್ಯನಾರಾಯಣ ಮತ್ತು ಎ.ಸಂಪತ್ ಜಂಟಿಯಾಗಿ ನಿರ್ಮಾಣ ಮಾಡಿರೋ ಕವಚವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ಇಶಾ ಕೊಪ್ಪೀಕರ್ ಶಿವಣ್ಣನಿಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬೇಬಿ ಮೀನಾಕ್ಷಿ, ಕೃತಿಕಾ ಜಯರಾಮ್, ತಬಲಾ ನಾಣಿ, ರವಿ ಕಾಳೆ, ವಸಿಷ್ಠ ಸಿಂಹ ಮುಂತಾದವ ತಾರಾಗಣವೂ ಇದೆ. ಕ್ರೈಂ ಬೇಸಿನ ಈ ಕಥಾನಕ ಎಂಥವರನ್ನೂ ಕಾಡಬಲ್ಲಂಥಾ ಅಂಶಗಳನ್ನು ಅಡಕವಾಗಿಸಿಕೊಂಡಿದೆ, ಈಗಾಗಲೇ ಅರ್ಜುನ್ ಜನ್ಯಾ ಸಂಗೀತ ನೀಡಿರೋ ಹಾಡುಗಳೂ ಕೂಡಾ ಜನಮನ ಸೆಳೆದುಕೊಂಡಿವೆ.
ಒಂದೊಂದು ಚಿತ್ರಗಳಲ್ಲಿಯೂ ಎನರ್ಜಿಟಿಕ್ ಆಗಿಯೇ ಪಾತ್ರಗಳಿಗೆ ಜೀವ ತುಂಬೋದು ಶಿವಣ್ಣನ ಸ್ಪೆಷಾಲಿಟಿ. ಆ ನಿಟ್ಟಿನಲ್ಲಿ ನೋಡ ಹೋದರೆ ಶಿವಣ್ಣ ಈಗ ಧರಿಸಿರೋದು ಪಕ್ಕಾ ಡಿಫರೆಂಟದ್ ಕವಚ. ಅದಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.
#
No Comment! Be the first one.