ಅನೀಶ್ ತೇಜೇಶ್ವರ್ ನಟನೆಯ ಕೇಡಿ ನಂ ೧ ಚಿತ್ರಕ್ಕೀಗ ಬಿರುಸಿನ ತಯಾರಿಗಳು ಆರಂಭವಾಗಿವೆ. ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಚೊಚ್ಚಲ ನಿರ್ದೇಶನದ ಈ ಚಿತ್ರದ ತಾರಾಗಣದ ಆಯ್ಕೆ ಕಾರ್ಯವೀಗ ಬಿರುಸಿನಿಂದ ನಡೆಯುತ್ತಿದೆ. ಅದರಲ್ಲಿಯೂ ಈ ಚಿತ್ರದ ನಾಯಕಿಯ ಆಐಕೆ ವಿಚಾರದಲ್ಲಿ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಚಿತ್ರತಂಡ ತೀರ್ಮಾನಿಸಿಯದೆ.

ನಾಯಕಿಯ ಆಯ್ಕೆಗಾಗಿಯೇ ಆಡಿಷನ್ ಒಂದನ್ನು ಆಯೋಜಿಸಲಾಗಿದೆ. ಹದಿನೆಂಟರಿಂದ ಇಪ್ಪತೈದು ವರ್ಷದೊಳಗಿನ ಯುವತಿಯರು ತಮ್ಮ ಭಾವ ಚಿತ್ರದೊಂದಿಗೆ winkwhistleauditions@gmail.com ವಿವರಗಳನ್ನು ಕಳಿಸುವ ಮೂಲಕ ಈ ಆಡಿಷನ್ನಿಗೆ ಪ್ರವೇಶ ಪಡೆಯ ಬಹುದಾಗಿದೆ. ಇದೇ ಸಂದರ್ಭದಲ್ಲಿ ಕೆಲ ಪೋಷಕ ಪಾತ್ರಗಳಿಗೂ ಕೂಡಾ ಆಡಿಷನ್ ಮೂಲಕವೇ ನಟ ನಟಿಯರನ್ನು ಆಯ್ಕೆ ಮಾಡಲೂ ಯೋಜಿಸಲಾಗಿದೆ.

ಪ್ರಶಾಂತ್ ರಾಜಪ್ಪ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆಂಬ ಸುದ್ದಿ ಹೊರ ಬಿದ್ದ ಬಳಿಕ ಈ ಚಿತ್ರದ ಟೈಟಲ್ ಲಾಂಚ್ ಆದಂದಿನಿಂದಲೂ ಈ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಆದ್ದರಿಂದಲೇ ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಬಗ್ಗೆಯೂ ಕುತೂಹಲವಿತ್ತು. ಕನ್ನಡ ಚಿತ್ರರಂಗದ ಸ್ಟಾರ್ ನಟಿಯರ ಹೆಸರೂ ಈ ಸಾಲಿನಲ್ಲಿ ವ್ಯಾಪಕವಾಗಿಯೇ ಕೇಳಿ ಬಂದಿತ್ತು. ಆದರೆ ಕೇಡಿಗೆ ಹೊಸಾ ಹುಡುಗಿಯನ್ನೇ ಜೋಡಿ ಮಾಡಲು ಪ್ರಶಾಂತ್ ರಾಜಪ್ಪ ನಿರ್ಧರಿಸಿದ್ದಾರೆ.

ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಒಂದಸು ಮಟ್ಟದ ಗೆಲುವು ಪಡೆದಿದ್ದ ಅನೀಶ್ ತೇಜೇಶ್ವರ್ ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಗೆಟಪ್ಪಿನಲ್ಲಿ ಕಾಣಿಸಿಕೊಳದ್ಳಲಿರೋ ಖುಷಿಯಲ್ಲಿದ್ದಾರೆ. ಇದುವರೆಗೂ ಸ್ಟೈಲಿಶ್ ಲುಕ್ಕಿನಲ್ಲಿಯೇ ನಟಿಸುತ್ತಾ ಬಂದಿದ್ದ ಅನೀಶ್ ಹಳ್ಳಿ ಹೈದನಾಗಿ ಹೇಗೆ ಕಾಣಿಸಲಿದ್ದಾರೆಂಬುದನ್ನು ನೋಡಲು ಬಗ್ಗೆ ಅವರ ಅಭಿಮಾನಿ ಬಳಗ ಕಾತರದಿಂದ ಕಾಯಲಾರಂಭಿಸಿದೆ.

#

Arun Kumar

ರಚಿತಾಗಿದು ಖುಷಿಯ ಸುಗ್ಗಿ ಸೀಜನ್ನು!

Previous article

ಪೈರೇಟ್ಸ್ ಆಫ್ ಕೆರೆಬಿಯನ್ ಛಾಯೆಯೇ?

Next article

You may also like

Comments

Leave a reply

Your email address will not be published. Required fields are marked *