- ಸಂತೋಷ್ ಸಕ್ರೆಬೈಲು
ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಸಾಕಷ್ಟು ನಟಿಯರಿದ್ದಾರೆ. ಆ ಲಿಸ್ಟಿಗೆ ಕೀರ್ತಿ ಸುರೇಶ್ ಸೇರಿ ಬಹಳ ಸಮಯವೇ ಕಳೆದಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಾ ದಿನೇ ದಿನೇ ಕೀರ್ತಿ ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಸಿನಿಮಾ ಜರ್ನಿಯ ಮಾತು ಇದಾದರೆ, ಕೀರ್ತಿ ಸುರೇಶ್ ಬಗ್ಗೆ ಒಂದು ಗಾಸಿಪ್ ಕೂಡ ಹರಿದಾಡುತ್ತಿದೆ. ಕೀರ್ತಿ ಸುರೇಶ್ ಎಷ್ಟು ಫೇಮಸ್ ಆಗ್ತಿದ್ದಾರೋ, ಅಷ್ಟೇ ವೇಗವಾಗಿ ಅನಿರುದ್ಧ್ ರವಿಚಂದರ್ ಕೂಡ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಯುವ ಐಕಾನ್ ಅಂತಲೇ ಖ್ಯಾತರಾಗಿರುವ ಮತ್ತು ಸೂಪರ್ ಸ್ಟಾರ್ ರಜನೀಕಾಂತ್ ಅವರ ಕುಟುಂಬದ ಹುಡುಗ ಅನಿರುದ್ಧ್, ಕಾಲಿವುಡ್ನಲ್ಲಿ ಹೆಚ್ಚು ಬೇಡಿಕೆಯಿರುವ ಮ್ಯೂಸಿಕ್ ಕಂಪೋಸರ್ ಆಗಿದ್ದಾರೆ. ಇದೀಗ ಕಾಲಿವುಡ್ ಅಡ್ಡಾದಲ್ಲಿ ಇವರಿಬ್ಬರದ್ದೇ ಸುದ್ದಿ ಜೋರಾಗಿದೆ.
ಕಳೆದ ಕೆಲವು ದಿನಗಳಿಂದ ನಟಿ ಕೀರ್ತಿ ಸುರೇಶ್ ಮತ್ತು ಅನಿರುದ್ಧ್ ರೊಮ್ಯಾಂಟಿಕ್ ರಿಲೇಷನ್ ಶಿಪ್ನಲ್ಲಿ ಇದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ, ಅಲ್ಲದೇ ಈ ವರ್ಷದ ಅಂತ್ಯದ ವೇಳೆಗೆ ಇಬ್ಬರು ಹಸೆಮಣೆ ಏರಲು ಪ್ಲಾನು ನಡೆಸುತ್ತಿದ್ದಾರೆ ಎಂಬ ವದಂತಿಗಳೂ ಹರಿದಾಡ್ತಿವೆ. ಈ ವದಂತಿಗೆ ಪುಷ್ಟಿ ಕೊಡುವಂತೆ ಮಾಡಿದ್ದೇ ಕೀರ್ತಿ ಸುರೇಶ್ ಮಾಡಿದ್ದ ಆ ಒಂದು ಫೋಸ್ಟ್.. 2020ರ ಅಕ್ಟೋಬರ್ 17 ರಂದು ಕೀರ್ತಿ ಸುರೇಶ್ ಬರ್ತ್ಡೇ ನಡೆದಿತ್ತು.
ಈ ವೇಳೆ ಕೀರ್ತಿ, ಅನಿರುದ್ಧ್ ಜೊತೆ ಇದ್ದ ಫೋಟೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಳು. ಇದೀಗ ಕಾಲಿವುಡ್ನಲ್ಲಿ ಈ ಫೋಟೋ ಸಖತ್ ಸದ್ದು ಮಾಡ್ತಿದ್ದು, ಇವರಿಬ್ಬರು ಹಸಮಣೆ ಏರಲು ತೆರೆಮರೆಯಲ್ಲಿ ಸರ್ಕಸ್ ನಡೆಸುತ್ತಿದ್ದಾರೆ ಎಂಬ ವದಂತಿಗೆ ಸಾಥ್ ನೀಡಿದೆ. ಅಲ್ಲದೇ ಅನಿರುದ್ಧ್ ಹುಟ್ಟುಹಬ್ಬವೂ ಮುಂದಿನ ದಿನಗಳಲ್ಲಿ ಬರಲಿದ್ದು, ನಿಮಗೂ ಜನ್ಮ ದಿನದ ಶುಭಾಶಯಗಳು ಮತ್ತು ಕೆಲವೇ ಗಂಟೆಗಳಲ್ಲಿ ನೀವು ಮರಳಿ ನನ್ನನ್ನ ಬಯಸುತ್ತೀರ ಅಂತ ಪೋಸ್ಟ್ ಮಾಡಿದ್ದರು.
ಕೀರ್ತಿ ಸುರೇಶ್ ಮತ್ತು ಅನಿರುದ್ಧ್ ಗಾಸಿಫ್ ವಿಚಾರವನ್ನು ಈಕೆಯ ಪೋಷಕರು ಅಲ್ಲಗೆಳೆದಿದ್ದಾರೆ. ಇದು ಸುಳ್ಳು ಸುದ್ದಿ ಮತ್ತು ನಮ್ಮ ಮಗಳು ಯಾರೊಂದಿಗೂ ಸಂಬಂಧ ಹೊಂದಿಲ್ಲ ಮತ್ತು ಅವರ ವೃತ್ತಿಜೀವನದ ಮೇಲೆ ನಿಗಾ ವಹಿಸುತ್ತಿದ್ದಾರೆ. ಜೊತೆಗೆ ‘ರೆಮೋ’ ಮತ್ತು ‘ತಾನಾ ಸೇಂದಾ ಕೂಟ್ಟಂ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಅನಿರುದ್ಧ್ ಮತ್ತು ಕೀರ್ತಿ ಕೇವಲ ಉತ್ತಮ ಸ್ನೇಹಿತರು ಅಂತ ಹೇಳಿ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಇನ್ನೂ ಬೇರೆ ಟ್ವಸ್ಟ್ ಪಡೆಯುವ ಎಲ್ಲ ಸಾಧ್ಯತೆಯೂ ಇದೆ.
No Comment! Be the first one.