ಕನ್ನಡದ ನಟಿಯರು ಪರಭಾಷೆಗಳಿಗೆ, ಪರಭಾಷೆಗಳ ನಟಿಯರು ಕನ್ನಡಕ್ಕೆ ಬರುವುದು ಹೋಗುವುದು ಈಗೀಗ ಕಾಮನ್ನಾಗಿಬಿಟ್ಟಿದೆ. ಅದರಲ್ಲೂ ಬೇರೆ ಭಾಷೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿಮಣಿಯರು ಕನ್ನಡಕ್ಕೆ ಪದಾರ್ಪಣೆ ಮಾಡಿದರಂತೂ ಸಂತಸದಲ್ಲಿಯೇ ವೆಲ್ ಕಮ್ ಮಾಡುವ ಕನ್ನಡಿಗರು ಸದ್ಯ ಮತ್ತೊಂದು ಸ್ವಾಗತಕ್ಕೆ ರೆಡಿಯಾಗಿದ್ದಾರೆ.

ಯೆಸ್.. ಮಾಲಿವುಡ್ ಸುಮದರಿ, ದಕ್ಷಿಣ ಭಾರತದ ಮಹಾನಟಿ ಕೀರ್ತಿ ಸುರೇಶ್ ಕನ್ನಡ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ‘ಅಯೋಗ್ಯ’ ಚಿತ್ರ ನಿರ್ದೇಶಕ ಮಹೇಶ್ ಇದೀಗ ‘ಮಹಾನಟಿ’ಯ ಡೇಟ್ಸ್ ಗಾಗಿ ಕಾಯುತ್ತಿದ್ದು, ತಮ್ಮ ಮುಂದಿನ ಚಿತ್ರ ‘ಮದಗಜ’ಕ್ಕಾಗಿ ಕೀರ್ತಿ ಸುರೇಶ್ ಅವರನ್ನು ಕರೆತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಯುವರತ್ನ, ಗಂಡುಗಲಿಮದಕರಿ ನಾಯಕ ಚಿತ್ರಗಳಲ್ಲಿ ಕೀರ್ತಿ ಸುರೇಶ್ ಅಭಿನಯಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಡಿತ್ತಾದರೂ ಸದ್ದಿಲ್ಲದೇ ತಣ್ಣಗೂ ಆಗಿತ್ತು. ಸದ್ಯ ಮತ್ತೊಮ್ಮೆ ಮದಗಜನಿಗೆ ಕೀರ್ತಿ ಸುರೇಶ್ ಹೆಸರು ತಳುಕು ಹಾಕಿಕೊಂಡಿದ್ದು,  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಈ ಸಿನಿಮಾ ಮೂಲಕವಾದರೂ ಕೀರ್ತಿ ಕನ್ನಡಕ್ಕೆ ಕಾಲಿಡಲಿ ಎಂಬ ಕನ್ನಡಿಗರ ಆಶಯ ನಿಜವಾಗಲಿದೆಯಾ ನೋಡ್ಬೇಕು.

CG ARUN

ಲಾಭದ ಪಟ್ಟಿ ಸೇರಿದ ಆಯುಷ್ಮಾನ್ ಖುರಾನಾ!

Previous article

ವಿಷ್ಣುಪ್ರಿಯನಿಗೆ ನ್ಯಾಷನಲ್ ಕ್ರಷ್ ನಾಯಕಿ!

Next article

You may also like

Comments

Leave a reply

Your email address will not be published. Required fields are marked *