ವರ್ಷಾಂತರಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಲೇಡಿ ಸೀರಿಯಲ್ ಕಿಲ್ಲರ್ ಕೆ.ಡಿ ಕೆಂಪಮ್ಮ. ಒಂದೊಂದೂರಿನಲ್ಲಿ ಒಂದೊಂದು ಹೆಸರಿನಿಂದ ಕಾಣಿಸಿಕೊಳ್ಳುತ್ತಿದ್ದ ಈಕೆಯ ಟಾರ್ಗೆಟ್ ಮಹಿಳೆಯರೇ. ಸೈನೈಡ್ ಮೂಲಕ ಮಹಿಳೆಯರನ್ನು ಕೊಂದು ಚಿನ್ನಾಭರಣ ದೋಚುತ್ತಿದ್ದ ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಪಡೆದಿದ್ದಾಳೆ.
ಇದೀಗ ಜೈಲುವಾಸಿಯಾಗಿರೋ ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾಳ ರೌದs ಕಥೆ ಚಿತ್ರವಾಗುತ್ತಿದೆ. ಅದಕ್ಕೆ ಸೈನೈಡ್ ಮಲ್ಲಿಕಾ ಎಂದೇ ಟೈಟಲ್ ಇಡಲಾಗಿದೆ!
ಈ ಚಿತ್ರದಲ್ಲಿ ಸಂಜನಾ ಪ್ರಕಾಶ್ ಸೈನೈಡ್ ಮಲ್ಲಿಕಾ ಆಗಿ ಕಾಣಿಸಿಕೊಳ್ಳಲಿದ್ದಾಳಂತೆ. ಗುರು ಎಂಟರ್ಟೈನ್ಮೆಂಟ್ ಬ್ಯಾನರಿನಡಿ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರವನ್ನು ಗುರು ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಬಲರಾಮ್ ಬೈಸಾನಿ ಜಂಟಿ ನಿರ್ಮಾಪಕರಾಗಿರೋ ಈ ಚಿತ್ರದ ಬೆಚ್ಚಿ ಬೀಳಿಸುವಂಥಾ ಟೀಸರ್ ಒಂದು ಇಷ್ಟರಲ್ಲಿಯೇ ಬಿಡುಗಡೆಯಾಗೋ ಸನ್ನಾಹದಲ್ಲಿದೆ!
೧೯೯೯ರಿಂದಲೂ ಕೆಂಪಮ್ಮ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಅದೆಷ್ಟೋ ಮಹಿಳೆಯರನ್ನು ಕೊಲೆ ಮಾಡಿದ್ದಳು. ಮಹಿಳೆಯರನ್ನು ನಂಬಿಸಿ ದೇವಸ್ಥಾನಗಳ ಆವರಣದಲ್ಲಿಯೇ ಸೈನೈಡ್ ಮೂಲಕ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದವಳು ಕೆಂಪಮ್ಮ. ಈಕೆ ಸೈನೈಡ್ ಮಲ್ಲಿಕಾ ಎಂದೇ ಕುಖ್ಯಾತಿ ಗಳಿಸಿದ್ದಳು. ವರ್ಷಗಳ ಹಿಂದೆ ಬಂಧನಕ್ಕೊಳಗಾಗಿ ಕಂಬಿ ಎಣಿಸುತ್ತಿರೋ ಈಕೆ ಇಂಡಿಯಾದ ಮೊದಲ ಸೀರಿಯಲ್ ಕಿಲ್ಲರ್ ಎಂಬ ಕುಖ್ಯಾತಿಗೂ ಪಾತ್ರಳಾಗಿದ್ದಾಳೆ.
ದಂಡುಪಾಳ್ಯ ಮಾದರಿಯ ರಕ್ತಸಿಕ್ತ ಕಥಾನಕ ಹೊಂದಿರೋ ಈ ಚಿತ್ರದ ಮೋಷನ್ ಪೋಸ್ಟರ್ ಈ ಹಿಂದೆಯೇ ಬಿಡುಗಡೆಯಾಗಿದೆ. ಇದೀಗ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಾಗುತ್ತಿದೆ.
#
No Comment! Be the first one.