ಲಾಂಗ್ ಗ್ಯಾಪ್ ನ ನಂತರ ಕೋಮಲ್ ಕುಮಾರ್ ನಟಿಸುತ್ತಿರುವ ಹೊಸ ಸಿನಿಮಾ ಕೆಂಪೇಗೌಡ 2. ಕಾಮಿಡಿ, ಲವ್ವು, ಸೆಂಟಿಮೆಂಟ್ ಜಾನರುಗಳಿಗೆ ಜೋತು ಬಿದ್ದಿದ್ದ ಕೋಮಲ್ ಕೆಂಪೇಗೌಡ 2 ಚಿತ್ರದ ಮೂಲಕ ಖಡಕ್ ಪೊಲೀಸ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣಗೊಂಡು ಸಾಕಷ್ಟು ದಿನಗಳೇ ಕಳೆದಿದ್ದರೂ ಸಹ ಕೆಂಪೇಗೌಡ 2 ಬಿಡುಗಡೆಯಾಗದೇ ಮೂಲೆಗೆ ಸೇರಿತ್ತು. ಅದೃಷ್ಟವಶಾತ್ ಕೆಂಪೇಗೌಡ 2 ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಬಿಡುಗಡೆ ಪೂರ್ವ ಕೆಲಸಗಳಲ್ಲಿ ಬ್ಯುಸಿಯಾಗಿ ಹೋಗಿದೆ.
ಈಗಾಗಲೇ ಟ್ರೇಲರ್ ರಿಲೀಸ್ ಮಾಡಿಕೊಂಡಿರುವ ಕೆಂಪೇಗೌಡ 2 ಚಿತ್ರದ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ಸದ್ಯ ಬಿಡುಗಡೆಯಾಗಿದೆ. ಈ ಟ್ರ್ಯಾಕಿಗೆ ಪಟ್ಲ ಸತೀಶ್ ಶೆಟ್ಟಿ ಈ ಹಾಡಿಗೆ ಧ್ವನಿ ನೀಡಿದ್ದು, ಸಖತ್ ಆಗಿ ಸೌಂಡ್ ಮಾಡುತ್ತಿದೆ. ಧನಂಜಯ್ ಸಾಹಿತ್ಯ ಈ ಹಾಡಿಗಿದ್ದು, ವರುಣ್ ಉಣ್ಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಕೋಮಲ್ ಕುಮಾರ್ ರೊಂದಿಗೆ ರಿಷಿಕಾ ಶರ್ಮಾ, ಲೂಸ್ ಮಾದ ಯೋಗಿ ಹಾಗೂ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೂಡ ಬಣ್ಣ ಹಚ್ಚಿದ್ದು , ಶಂಕರೇಗೌಡರವರ ನಿರ್ಮಾಣ ನಿರ್ದೇಶನ ಈ ಚಿತ್ರಕ್ಕಿದೆ.
No Comment! Be the first one.