ಸ್ಯಾಂಡಲ್ ವುಡ್ ನಟ, ಕಿರಾತಕ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈ ಸಾಲಿನ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಲಭಿಸಿದೆ. ಕತಾರ್ ನಲ್ಲಿ ನಡೆದ 8ನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕೆಜಿಎಫ್ ಚಿತ್ರದ ರಾಕಿಭಾಯ್ ಪಾತ್ರಕ್ಕೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಶ್ ಗೆ ನೀಡಲಾಗಿದೆ.
ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಟಗರು ಸಿನಿಮಾದಿಂದ ಶಿವಣ್ಣ, Rambo 2 ಚಿತ್ರದಿಂದ ಶರಣ್, ಅಯೋಗ್ಯ ಚಿತ್ರದಿಂದ ನೀನಾಸಂ ಸತೀಶ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದಿಂದ ಅನಂತ್ ನಾಗ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಬಾರಿಯು ರಾಕಿಂಗ್ ಸ್ಟಾರ್ ಯಶ್ ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ ಚಿತ್ರಕ್ಕೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
No Comment! Be the first one.