ಚಿನ್ನದ ಗಣಿ ಕೆಜಿಎಫ್ ಆಧಾರಿತವಾಗಿಯೇ ಸಿನಿಮಾ ಮಾಡಿ ಈಗಾಗಲೇ ಗೆದ್ದಿರುವ ರಾಕಿಂಗ್ ಸ್ಟಾರ್ ಯಶ್ ಅದರ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅಂಡ್ ಟೀಮ್ ಮೊದಲಿಗಿಂತ ಮತ್ತಷ್ಟು ಎನರ್ಜಿಟೆಕ್ ಆಗಿಯೇ ಕೆಜಿಎಫ್ 2 ಚಿತ್ರೀಕರಣವನ್ನು ದೊಡ್ಡ ದೊಡ್ಡ ಸೆಟ್ ನಲ್ಲಿಯೇ ಮಾಡುತ್ತಿದೆ.

ಭಾರತದಾದ್ಯಂತ ಚಾಪ್ಟರ್ ಒಂದರ ಮೂಲಕ ಸದ್ದು ಮಾಡಿದ್ದ ಕೆಜಿಎಫ್ ಎರಡನೇ ಚಾಪ್ಟರ್ ಮೂಲಕ ಧೂಳೆಬ್ಬಿಸಬೇಕೆಂಬ ಜವಾಬ್ದಾರಿಯಿಂದಲೇ ಕೆಜಿಎಫ್ 2 ಚಿತ್ರೀಕರಣಕ್ಕೆ ಯಾವುದೇ ವಿಘ್ನಗಳಾಗದಂತೆ ಆರಂಭದಿಂದಲೇ ನೋಡಿಕೊಂಡಿತ್ತು. ಆದರೆ ಅದೇ ಗ್ಯಾಪ್ ನಲ್ಲಿಯೇ ಕೆಜಿಎಫ್ ಟೀಂ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಯೆಸ್… ಹೆಚ್ ಎಂ ಟಿ ಯಲ್ಲಿ ಬೃಹತ್ತಾದ ಕೃತಕ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣವನ್ನು ಮುಗಿಸಿಕೊಂಡು ಕೆಜಿಎಫ್ ನ ಸೈನೈಡ್ ದಿಬ್ಬದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದ್ದ ಕೆಜಿಎಫ್ ಟೀಂ ನ ವಿರುದ್ಧವಾಗಿ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಎನ್. ಶ್ರೀನಿವಾಸ್ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲದೇ ಕೆಜಿಎಫ್ ಚಿತ್ರದಲ್ಲಿ ಕೆಜಿಎಫ್ ಪ್ರದೇಶವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದ್ದು, ಕೆಜಿಎಫ್ ನ ಸಂರಕ್ಷಿತ ಸೈನೈಡ್ ದಿಬ್ಬದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಪರಿಸರವನ್ನು ಹಾಳುಗೆಡವುತ್ತಿದ್ದಾರೆಂಬ ಆರೋಪವನ್ನು ಮಾಡಿದ್ದಾರೆನ್ನಲಾಗುತ್ತಿದೆ. ಇದರ ಆಧಾರದ ಮೇಲೆ ಚಿತ್ರದ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿ ನಿರ್ಮಾಪಕರಿಗೆ ಕೆಜಿಎಫ್  ಜೆಎಂಎಫ್ ಸಿ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

 

CG ARUN

ಸದ್ಯದಲ್ಲೇ ಸೆಟ್ಟೇರಲಿದೆ ಬಾಲ್ ಕೋಟ್!

Previous article

ಬನ್ನಿ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ ಕಾಜಲ್ ಅಗರ್ ವಾಲ್!

Next article

You may also like

Comments

Leave a reply

Your email address will not be published. Required fields are marked *

More in cbn