- ಮಹಂತೇಶ್ ಮಂಡಗದ್ದೆ
ಸ್ಯಾಂಡಲ್ವುಡ್ ಸಿನಿ ಮಾಂತ್ರಿಕ ಅಂತಾನೇ ಖ್ಯಾತಿ ಗಳಿಸಿರೋ ಪ್ರಶಾಂತ್ ನೀಲ್ ಕೆ.ಜಿ.ಎಫ್ ಅನ್ನೋ ಮಾಸ್ಟರ್ ಪೀಸ್ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲೇ ತಮ್ಮ ಚಾಪು ಮೂಡಿಸಿರೋ ಡೈರೆಕ್ಟರ್. ಕೆ.ಜಿಎಫ್ ಸಿನಿಮಾ ಬಂದು ಸಪ್ತಸಾಗರದಾಚೆಗೆ ಸೌಂಡ್ ಮಾಡಿಯಾಯ್ತು.
ಈಗ ಕೆ.ಜಿ.ಎಫ್ 2 ಸಿನಿಮಾ ಕೂಡ ಕಂಪ್ಲೀಟ್ ಆಗಿದ್ದು, ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು, ರಿಲೀಸ್ ಆಗೋಕೆ ರೆಡಿಯಾಗಿ ನಿಂತಿದೆ. ಅಲ್ಲದೇ ಪ್ರಶಾಂತ್ ನೀಲ್ರ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಕೂಡ ಮುಗಿದಿದೆ. ಈ ನಡುವೆ ನಾರಾಚಿಯ ಸ್ಟೋರಿಗೆ ಇಲ್ಲಿಗೆ ಫುಲ್ ಸ್ಟಾಪ್ ಬಿತ್ತಾ ಅನ್ನೋ ಥಾಟ್ ಎಲ್ಲರಲ್ಲೂ ಮೂಡಿದೆ. ಆದರೆ ಈಗ ಪ್ರಶಾಂತ್ ನೀಲ್ ಮಾಡಿರೋ ಟ್ವೀಟ್ವೊಂದು ಇಲ್ಲಾ ಕೆ.ಜಿ.ಎಫ್ ಸರಣಿ ಇನ್ನೂ ಮುಂದುವರೆಯುತ್ತೆ ಅಂತಿದೆ.
ಕೆ.ಜಿಎಫ್ ಸಿನಿಮಾದ ನಂತರ ಸಲಾರ್ ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕೂಡ ಮುಗಿಸಿರುವ ನಿರ್ದೇಶಕ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್ ಟೀಮ್ ಜೊತೆ ಜಾಲಿ ಟೈಮ್ ಕಳೆಯುತ್ತಿದ್ದಾರೆ. ತಮ್ಮ ಇಡೀ ಕೆಜಿಎಫ್ ಬಳಗವನ್ನ ಒಂದೇ ಕಡೆ ಸೇರಿಸಿಕೊಂಡು ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಫೋಟೋ ಟ್ವೀಟ್ ಮಾಡೋ ಮೂಲಕ ಪ್ರಶಾಂತ್ ನೀಲ್, ‘ಈ ತಂಡದ ಜೊತೆ ಜರ್ನಿ ಶುರುವಾಗಿದೆ, ಕೊನೆಯಾಗೋದಿಲ್ಲ’ ಅಂತ ಬರೆದುಕೊಂಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ದಂಪತಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಟ ಯಶ್ ದಂಪತಿ ಹಾಗೂ ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ ಸರ್ವರೂ ಈ Get Togetherನಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ‘ಈ ತಂಡದ ಜೊತೆ ಜರ್ನಿ ಕೊನೆಯಾಗೋದಿಲ್ಲ’ ಅಂತಾ ಅವರು ಹಾಕೊಂಡಿರೊ ಕ್ಯಾಪ್ಷನ್. ಈ ಒಂದು ಕ್ಯಾಪ್ಷನ್ನಿಂದ ಕೆ.ಜಿ.ಎಫ್ ಟೀಂ ಮತ್ತೆ ಕೆಲಸ ಮಾಡುತ್ತೆ ಅಂತಾ ಇಂಡೈರೆಕ್ಟಾಗಿ ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದಾರೆ. ಆದ್ರೆ ಅದು ಬೇರೆ ಕಥೆಯ ಸಿನಿಮಾನಾ ಅಥವಾ ಕೆ.ಜಿ.ಎಫ್ ಸಿನಿಮಾದ ಮತ್ತೊಂದು ಚಾಪ್ಟರ್ ಹಾ ಅನ್ನೋದು ಸದ್ಯದ ಕುತೂಹಲ.
No Comment! Be the first one.