ಭಾರತೀಯ ಚಿತ್ರಜಗತ್ತನ್ನು ಬೆಕ್ಕಸ ಬೆರಗಾಗುವಂತೆ ಮಾಡಿದ ಕನ್ನಡ ಸಿನಿಮಾ ಕೆಜಿಎಫ್ ಸ್ಯಾಂಡಲ್ ವುಡ್ ನ ಮಟ್ಟಿಗೆ ಅತ್ಯಂತ ಯಶಸ್ವಿ ಚಿತ್ರ. ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿಬಂದ ಐಟಿ ಅಧಿಕಾರಿಗಳು ಒಮ್ಮೆ ರೈಡ್ ಮಾಡುವಷ್ಟರಮಟ್ಟಿಗೆ ಕಮಾಯಿ ಮಾಡಿದ ಕೆಜಿಎಫ್ ಗಲ್ಲಾ ಪೆಟ್ಟಿಗೆಯನ್ನೇ ಉಡೀಸ್ ಮಾಡಿತ್ತು. ಕೆಜಿಎಫ್ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್ ಪಾರ್ಟ್ 2 ಬಹಳಷ್ಟು ಸೌಂಡ್ ಮಾಡುತ್ತಿದೆ.
ಲೋಕಸಭಾ ಚುನಾವಣೆಯ ನಿಮಿತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪ್ರಚಾರದಲ್ಲಿದ್ದ ರಾಕಿಂಗ್ ಸ್ಟಾರ್ ಕೆಲ ದಿನಗಳ ಮಟ್ಟಿಗೆ ಶೂಟಿಂಗ್ ನ್ನು ಮುಂದೂಡಿದ್ದರು. ಸರಳವಾಗಿ ಚಿತ್ರದ ಮಹೂರ್ತವನ್ನು ನೆರವೇರಿಸಿಕೊಂಡಿದ್ದ ಚಿತ್ರತಂಡ ಈಗಾಗಲೇ ಸಿನಿಮಾ ಶೂಟಿಂಗ್ ಪ್ರಾರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರೀಕರಣವನ್ನು ಇದೇ 13ಕ್ಕೆ ಮುಂದೂಡಲಾಗಿದೆ. ಈ ಹಿಂದೆ ಕೋಲಾರ, ಬೆಂಗಳೂರು ಮುಂಬೈ ಕಡೆಗಳಲ್ಲಿ ಶೂಟಿಂಗ್ ನಡೆಸಿದ್ದ ಕೆಜಿಎಫ್ ಟೀಂ ಇದೇ ಮೊದಲಬಾರಿಗೆ ಕರಾವಳಿ ಭೂ ಪ್ರದೇಶಗಳ ಕಡೆಗೆ ಗಮನಹರಿಸಿದೆ. ಈಗಾಗಲೇ ಅಭಿಮಾನಿಗಳು ಕೆಜಿಎಫ್ 2 ಬರುವುದನ್ನೇ ಕಾತುರದಿಂದ ಕಾಯುತ್ತಿದ್ದು, ರಾಕಿಂಗ್ ಜಪ ಮಾಡುತ್ತಿದ್ದಾರೆ. ಇನ್ನು ಚಿತ್ರದ ಸಲಾಂ ರಾಕಿಭಾಯ್ ಟೈಟಲ್ ಸಾಂಗ್ಗೆ ನ್ಯೂ ಟ್ಯೂನ್ಗಳು ರೆಡಿಯಾಗುತ್ತಿದ್ದು, ರವಿಬಸ್ರೂರ್ ಸಂಗೀತ ಮತ್ತೊಮ್ಮೆ ಧೂಳೆಬ್ಬಿಸಲಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದ್ದು , ವಿಜಯ್ ಕಿರಗಂದೂರು ಬಂಡವಾಳ ಹೂಡಲಿದ್ದಾರೆ.
No Comment! Be the first one.