- ಹರಿಯಬ್ಬೆ ಸತ್ಯ
1995 ರ ‘ಓಂ’ ಚಿತ್ರದಲ್ಲಿ ಒಬ್ಬ ರೌಡಿಯ ಕುರಿತ ಪುಸ್ತಕ ಹಿಡಿದ ಪತ್ರಕರ್ತೆ ರೌಡಿಗಳಿಗೆ ಒಬ್ಬ ಸತ್ಯ ಎಂಬ ರೌಡಿಯ ಕತೆ ಹೇಳ ಹೊರಡುತ್ತಾಳೆ. ಕೆ.ಜಿ.ಎಫ್ ನಲ್ಲಿ ಒಬ್ಬ ಬರಹಗಾರ ಮತ್ತೊಬ್ಬ ಪತ್ರಕರ್ತೆಗೆ ರಾಕಿ ಎಂಬ ಗ್ಯಾಂಗ್ ಸ್ಟರ್ ನ ಕತೆ ಹೇಳಲು ಶುರುವಿಟ್ಟುಕೊಳ್ತಾರೆ. ಓಂ ಸಿನೆಮಾದಲ್ಲಿ ಪುಸ್ತಕದ ಕೊನೆಯ ಪೇಜು ಹರಿದು ಹೋಗಿರುತ್ತದೆ. ಕೆ.ಜಿ.ಎಫ್ ನಲ್ಲಿ ಅರೆಬರೆ ಸುಟ್ಟು ಹೋದ ಪುಸ್ತಕ. ಓಂ ಮತ್ತು ಕೆಜಿಎಫ್ ಎರಡೂ ಸಿನಿಮಾಗಳಲ್ಲೂ reverse screenplay. ಓಂ ಸಿನಿಮಾದಲ್ಲಿ warm-yellow tone ಬಳಸಿದಂತೆ ಕೆಜಿಎಫ್ ನಲ್ಲೂ green tone ಫಿಲ್ಟರ್ ಬಳಕೆಯಾಗಿದೆ. ಅಲ್ಲಿ ಕ್ಯಾಮರಾ ಕಲೆ ತೋರಿಸಿದ ಗೌರಿಶಂಕರ್, ಇಲ್ಲಿ ಭುವನ್ ಗೌಡ. ಓಂ ನಲ್ಲಿ “I love u…u must love me..” ಎನ್ನುವ ಹಂಸಲೇಖರ background score, ಇಲ್ಲಿ “ಬೆವರ ಒರೆಸೋ ಬಾರೋ ಸುಲ್ತಾನ..”ಎನ್ನುವ ರವಿ ಬಸ್ರೂರ್.!
ಹಾಗಂತ ಕೆಜಿಎಫ್, ಓಂ ಸಿನಿಮಾಗಳು comparison ಮಾಡಲು ಸಾಧ್ಯವಿಲ್ಲ. ಓಂ ನಲ್ಲಿ ತಂದೆಯ ಇಚ್ಛೆಗೆ ವಿರುದ್ಧವಾಗಿ ಪಾತಕಲೋಕಕ್ಕೆ ಇಳಿಯುವ ನಾಯಕ. ಕೆಜಿಎಫ್ ನಲ್ಲಿ ತನ್ನ ಮಗ ಯಾವುದೇ ಮಾರ್ಗದಲ್ಲಾದರೂ ಶ್ರೀಮಂತನಾಗ ಬಯಸುವ ತಾಯಿ. ಓಂ ಸಿನೆಮಾದಲ್ಲಿ ಪರಿಸ್ಥಿತಿಗೆ ಬಲಿಯಾಗುವ ಅಮಾಯಕ ಯುವಕ. ಕೆಜಿಎಫ್ ನಲ್ಲಿ ಪರಿಸ್ಥಿತಿಯನ್ನೇ ಗೆಲ್ಲಲು ಹೊರಡುವ ಹಠವಾದಿ. ಕೆಜಿಎಫ್ ನಲ್ಲಿ ಗಟ್ಟಿಮುಟ್ಟಾದ ಕತೆ ಏನಿಲ್ಲ. ಆದರೆ ಕೊನೆಯ ತನಕವೂ ಕರೆದುಕೊಂಡು ಹೋಗುವ ಬಿಗಿಯಾದ ನಿರೂಪಣೆ ಇದೆ. ನಿರ್ದೇಶಕನ ಕತೆ ಹೇಳುವ ವಿಧಾನ ಅದ್ಭುತ. ಚಿತ್ರದಲ್ಲಿನ frames ಶ್ರೀಮಂತ. ಹುಚ್ಚನನ್ನ, ಮಕ್ಕಳನ್ನು, ಗೊಂಬೆಗಳನ್ನು, ಪೆನ್ಸಿಲ್ sketches ಬಳಸಿಕೊಂಡ ರೀತಿ superb. Ration ನ ಗಾಡಿ ಎಳೆಯುವ ಸೀನು ಬಾಹುಬಲಿಯ ರಥ ಎಳೆದ ಸೀನಿಗಿಂತ natural ಇರುವುದರಿಂದ ಪರಿಣಾಮಕಾರಿಯಾಗಿ ಬಂದಿದೆ.
ತೆಲುಗಿನ ‘ಶಿವ’, ತಮಿಳಿನಲ್ಲಿ ನಾಯಗನ್, ಕನ್ನಡದ ‘ಓಂ’, ಹಿಂದಿಯ ರಾಮಗೋಪಾಲ್ ವರ್ಮರ ‘ಸತ್ಯ’ ಸಿನಿಮಾಗಳ ನಂತರ ‘ಕೆಜಿಎಫ್’ ಪಾತಕ ಲೋಕವನ್ನು classic ಶೈಲಿಯಲ್ಲಿ ತೋರಿಸಿದೆ.
ಕಮರ್ಷಿಯಲ್ ಸಿನಿಮಾ ತಂತ್ರಜ್ಞಾನ ಕಲಿಯ ಬಯಸುವ ಯುವಕರಿಗೆ ಇದೊಂದು masterpiece. ಕನ್ನಡದ ಮುಂಬರುವ ಸಿನೆಮಾಗಳು ‘ಮಾರುಕಟ್ಟೆ’ಗೆ ಹೇಗೆ ಹೋಗಬೇಕು ಅಂತಾ ತೋರಿಸಿ ಕೊಟ್ಟಿದೆ. ಕನ್ನಡಕೊಬ್ಬರು ಪ್ರಶಾಂತ್ ನೀಲ್ ದೊರೆತಿದ್ದಾರೆ. ಬೊಂಬಡ ಹೊಡಿತಿದ್ದ so called hero ಗಳಿಗೆ ‘ಯಶ್’ ಸಾಮರ್ಥ್ಯ ಏನೆಂದು ಸಾಬೀತಾಗಿದೆ.
#
No Comment! Be the first one.