ಸ್ಯಾಂಡಲ್ ವುಡ್ ನ ಇತ್ತೀಚಿನ ಬಹಳಷ್ಟು ಸಿನಿಮಾಗಳು ಪರಭಾಷೆಗಳ ನಟ ನಟಿಯರನ್ನು ಅತಿಥಿ ಪಾತ್ರಗಳಾಗಿ ನಟಿಸುವುದಕ್ಕೆ ಅವಕಾಶ ಕೊಡುವ ಮೂಲಕ ಕರ್ನಾಟಕದಲ್ಲಿರುವ ಪರಭಾಷಿಗರು ಕನ್ನಡ ಸಿನಿಮಾವನ್ನು ನೋಡುವಂತೆ ಪ್ರೇರೇಪಿಸಲಾಗುತ್ತಿದೆ. ಸದ್ಯ ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಕೆಜಿಎಫ್ 2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಎಲ್ಲೆಡೆ ಕೆಜಿಎಫ್ 2 ಹವಾ ಎದ್ದಿದೆ. ಈಗಾಗಲೇ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್, ಉಪೇಂದ್ರ ಖ್ಯಾತಿಯ ರವೀನ ಟಂಡನ್ ಇರಲಿದ್ದಾರೆ ಎಂಬುದು ನಿಕ್ಕಿಯಾಗಿದೆ. ಇದೀಗ ಟಾಲಿವುಡ್ ನ ಖ್ಯಾತ ಪೋಷಕ ನಟ ರಾವ್ ರಮೇಶ್ ಸಹ ಕೆಜಿಎಫ್ 2 ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.
ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಲಿದ್ದು, ಆಗಸ್ಟ್ ವೇಳೆಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಇತ್ತೀಚೆಗಷ್ಟೇ ಚಿತ್ರೀಕರಣಕ್ಕೆ ಚಾಲನೆ ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರದ ಸಣ್ಣ ಪುಟ್ಟ ಸೀನ್ ಗಳನ್ನು ಸೆರೆಹಿಡಿಯುತ್ತಿದ್ದಾರೆ. ಅಂದ ಹಾಗೆ, ನಿಖಿಲ್ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿ ನಟಿಸುವ ಮೂಲಕ ರಾವ್ ರಮೇಶ್ ಈಗಾಗಲೇ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ.
No Comment! Be the first one.