ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಈಗಾಗಲೇ ಪ್ರಾರಂಭವಾಗಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಈ ಚಿತ್ರದ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಪಾತ್ರದಲ್ಲಿ ಬಾಲಿವುಡ್ ನ ರವಿನಾ ಟಂಡನ್ ಕಾಣಿಸಿಕೊಳ್ಳಲಿದ್ದಾರಂತೆ! ಕನ್ನಡಕ್ಕೆ ಉಪೇಂದ್ರ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದ ರವೀನ ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿರುವುದು ಸಿನಿ ರಸಿಕರ ಸಂತಸಕ್ಕೂ ಕಾರಣವಾಗಿದೆ. ಸದ್ಯ ರವೀನಾ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕಥೆ ಕೇಳಿ ಓಕೆ ಮಾಡಿದ್ದಾರಂತೆ. ಸದ್ಯದಲ್ಲೇ ಅಧಿಕೃತ ಮಾಹಿತಿಯೂ ಹೊರಬೀಳಬೇಕಿದೆ.
ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಗಳನ್ನು ಮೈಸೂರು ಮತ್ತು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ, ಬಳ್ಳಾರಿಯ ಪ್ರದೇಶಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾದ 90 ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಮುಗಿಸುವ ಪ್ಲ್ಯಾನ್ ನಲ್ಲಿಯೂ ತಂಡವಿದೆ. ಈಗಾಗಲೇ ಕೆಜಿಎಫ್ ಬಳಗಕ್ಕೆ ಸಂಜಯ್ ದತ್ ಸೇರಿದ್ದು, ಸದ್ಯದಲ್ಲೇ ರವೀನ ತಂಡನ್ ಸೇರ್ಪಡೆಯಾಗಲಿದ್ದಾರೆ.
Leave a Reply
You must be logged in to post a comment.