ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ಮೂಲಕ ದಾಖಲೆಯನ್ನೇ ಮಾಡಿದೆ. ಬಾಲಿವುಡ್ ಚಿತ್ರಗಳೇ ಥಂಡಾ ಹೊಡೆಯುವಂತೆ ಅಬ್ಬರಿಸುತ್ತಿರೋ ಈ ಚಿತ್ರವನ್ನು ಸದ್ಯಕ್ಕೆ ಯಾವ ಕನ್ನಡ ಚಿತ್ರಗಳೂ ಹಿಂದಿಕ್ಕೋದು ಸಾಧ್ಯವಿಲ್ಲವೆಂಬ ವಾತಾವರಣವಿದೆ. ಆದರೆ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಮಾತ್ರ ಕೆಜಿಎಫ್ ದಾಖಲೆಯನ್ನು ಬ್ರೇಕ್ ಮಾಡೋ ಸೂಚನೆಗಳಿವೆ!
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಪೈಲ್ವಾನ್ ಚಿತ್ರ ಒಂಬತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಚಿತ್ರವನ್ನು ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮಾತ್ರವಲ್ಲದೇ ಮರಾಠಿ, ಪಂಜಾಬಿ, ಭೋಜ್ಪುರಿ, ಬೆಂಗಾಲಿ ಭಾಷೆಗಳಲ್ಲಿಯೂ ತೆರೆಗಾಣಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಸುದೀಪ್ ಅವರಿಗೆ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಮಾರ್ಕೆಟ್ಟಿದೆ. ಬಾಹುಬಲಿ ಚಿತ್ರದ ಮೂಲಕ ಎಲ್ಲ ಭಾಷೆಗಳಲ್ಲಿಯೂ ಅವರಿಗೆ ಪ್ರೇಕ್ಷಕರಿದ್ದಾರೆ. ಅದನ್ನು ಸಂಪೂರ್ಣವಾಗಿ ಬಳಸಿಕೊಂಡು ಹೊಸಾ ದಾಖಲೆ ಸೃಷ್ಟಿಸಲು ಪೈಲ್ವಾನ್ ಚಿತ್ರತಂಡ ಮುಂದಾಗಿದೆ. ಈ ಚಿತ್ರ ಕೂಡಾ ವಿಶೇಷವಾದೊಂದು ಕಥೆ ಹೊಂದಿದೆ ಎಂಬ ಸುಳಿವು ಈಗಾಗಲೇ ಸಿಕ್ಕಿದೆ. ಸುದೀಪ್ ಈವರೆಗಿನ ಗೆಟಪ್ಪುಗಳಿಗಿಂತಲೂ ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರೋ ಪೋಸ್ಟರುಗಳೇ ಎಲ್ಲವನ್ನೂ ಹೇಳುತ್ತಿವೆ. ಬಹುಶಃ ಕೆಜಿಎಫ್ ಚಿತ್ರದ ಹಿಂದೆಯೇ ಪೈಲ್ವಾನ್ ಚಿತ್ರದ ಅಬ್ಬರವೂ ಶುರುವಾಗಲಿದೆ.
#
No Comment! Be the first one.