ಈ ಕೆ.ಜಿ.ಎಫ್. ಸಿನಿಮಾಗೂ ಮಣ್ಣಿಗೂ ಅದೇನು ನಂಟೋ? ಚಾಪ್ಟರ್ ಒನ್ ತುಂಬಾ ಕೋಲಾರದ ಧೂಳೇ ತುಂಬಿಹೋಗಿದ್ದು ಎಲ್ಲರಿಗೂ ಗೊತ್ತಿದೆ. ಈಗ ಎರಡನೇ ಚಾಪ್ಟರ್‌ಗಾಗಿ ಕೆ.ಜಿ.ಎಫ್. ಟೀಮು ರಾಜಾಸ್ಥಾನದ ಮರುಭೂಮಿಗೆ ಹೊರಡಲಿದೆಯಂತೆ. .ಜಿ.ಎಫ್. ಮೊದಲ ಭಾಗವನ್ನು ಶುರು ಮಾಡುವಾಗ ಅದು ಭಾರತದ ಬಹುಭಾಷೆಗಳಲ್ಲಿ ರಿಲೀಸಾಗುತ್ತದೆ ಅನ್ನೋ ಅಂದಾಜೇ ಇರಲಿಲ್ಲ. ಆದರೆ ಬಿಡುಗಡೆ ಹೊತ್ತಿಗೆ ನಾಲ್ಕಾರು ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಸೌಂಡು ಮಾಡಿದ್ದಲ್ಲಾ? ಆ ಕಾರಣದಿಂದಲೋ ಏನೋ ಚಿತ್ರತಂಡ ಸಿನಿಮಾವನ್ನು ಗ್ಲೋಬಲ್ ಲೆವೆಲ್ಲಿಗೇ ಹೊಂದುವಂತೆ ತಯಾರಿಸುವ ಪ್ಲಾನು ಮಾಡಿದೆಯಾ ಅನ್ನಿಸುತ್ತಿದೆ.
ಯಾಕೆಂದರೆ, ಈ ಬಾರಿ ಕೆ.ಜಿ.ಎಫ್ ಭಾಗ ಎರಡಕ್ಕಾಗಿ ರಾಜಾಸ್ಥಾನದ ಮರಳುಗಾಡಿನಲ್ಲಿ ಚಿತ್ರಿಸುವ ಪ್ಲಾನು ನಡೆಯುತ್ತಿದೆಯಂತೆ. ನಮ್ಮ ಊರಿನಲ್ಲಿ ಬಿಸಿಲ ಬಾಧೆ ತಡೆಯಲಾರದಷ್ಟು ಹೆಚ್ಚಿದೆ. ಇಂಥಾದ್ದರಲ್ಲಿ ಕೆನ್ನೆ ತುಂಬಾ ಗೂಡು ಕಟ್ಟಿದಂಥಾ ಗಡ್ಡ, ತಲೆ ತುಂಬಾ ಕೂದಲು ಹೊತ್ತ ಕಲಾವಿದರು ಆ ಬಿಸಿಲುಗಾಡಿನಲ್ಲಿ ಹೇಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೋ? ಗೊತ್ತಿಲ್ಲ!
No Comment! Be the first one.