ಕೆ.ಜಿಎಫ್ ಅನ್ನೋ ಒಂದು ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲೇ ಖ್ಯಾತಿ ಗಳಿಸಿದ ಟ್ಯಾಲೆಂಟೆಡ್ ಡೈರೆಕ್ಟರ್ ಅಂದ್ರೆ ಅದು ಪ್ರಶಾಂತ್ ನೀಲ್. ಕೆ.ಜಿಎಫ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಟಾಲಿವುಡ್ ಮತ್ತು ಕಾಲಿವುಡ್ನಲ್ಲೇ ಬ್ಯುಜಿಯಾಗ್ತಿದ್ದಾರೆ. ಈಗಾಗಲೇ ಪ್ರಭಾಸ್ ಜೊತೆ ಸಿನಿಮಾ ಮಾಡ್ತಿರೋ ನೀಲ್, ನೆಕ್ಸ್ಟ್ ಜೂನಿಯರ್ ಎನ್ ಟಿ ಆರ್, ಅಲ್ಲು ಅರ್ಜುನ್ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
- ಮಹಂತೇಶ್ ಮಂಡಗದ್ದೆ
ಈ ಸುದ್ಧಿ ಕೇಳಿದಾಗಲೇ ಕನ್ನಡಿಗರು ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ ಸ್ಯಾಂಡಲ್ವುಡ್ ನಟರಿಗೆ ಆ್ಯಕ್ಷನ್ ಕಟ್ ಹೇಳಲ್ವಾ ಅಂತಾ ಅಸಮಧಾನ ಹೊರ ಹಾಕಿದ್ರು. ಹಿಟ್ ಆದ ತಕ್ಷಣ ಗಾಂಧಿನಗರವನ್ನೇ ಮರೆತ್ರಾ ಪ್ರಶಾಂತ್ ನೀಲ್ ಅಂತಾ ಪ್ರಶ್ನೆ ಮಾಡಿದ್ರು. ಆದ್ರೆ ಸದ್ಯಕ್ಕೆ ಅಂತಾ ಅಲ್ಲ ಇನ್ನೂ ನಾಲ್ಕೈದು ವರ್ಷ ಸ್ಯಾಂಡಲ್ವುಡ್ ನಟರಿಗೆ ನೀಲ್ ಆ್ಯಕ್ಷನ್ ಕಟ್ ಹೇಳೋದೆ ಡೌಟ್ ಅಂತಿವೆ ಸದ್ಯದ ಮಾಹಿತಿಗಳು.
ಸಲಾರ್ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿರೋ ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಅಷ್ಟೇ ಸ್ಪೀಡ್ ಆಗಿ ಪ್ರೀ ಪ್ಲಾನ್ ಮಾಡಿಕೊಳ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಟಾಲಿವುಡ್ ಕಾಲಿವುಡ್ ಅಂತಾ ಬೇರೆ ಭಾಷೆಯ ಸ್ಟಾರ್ ನಟರಿಗೇ ಆ್ಯಕ್ಷನ್ ಕಟ್ ಹೇಳೋದ್ರಲ್ಲಿ ಬ್ಯುಸಿಯಾಗ್ತಿದ್ದಾರೆ.
ಸಲಾರ್ ಮುಗಿಯುತ್ತಿದ್ದಂತೆಯೇ ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್.ಟಿ ಆರ್ ಮುಂದಿನ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಿದ್ದಾರೆ. ಅದಾದ್ಮೇಲೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ರ ಮುಂದಿನ ಸಿನಿಮಾಗೆ ಡೈರೆಕ್ಟರ್ ಕ್ಯಾಪ್ ತೊಡ್ತಾರೆ ಅಂತಾ ಕೂಡ ಸುದ್ಧಿ ಹರಿದಾಡ್ತಿದೆ. ಈಗ ಕಾಲಿವುಡ್ಗೂ ಪ್ರಶಾಂತ್ ನೀಲ್ ಕಾಲಿಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿದ್ದು, ನಟ ಥಳಪತಿ ವಿಜಯ್ರ 67 ಅಥವಾ 68ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗಷ್ಟೇ ನಿರ್ಮಾಪಕ ದಿಲ್ ರಾಜು, ವಿಜಯ್ ಹಾಗೂ ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಸಿನಿಮಾದ ಬಗ್ಗೆ ಈಗಾಗಲೇ ಮಾತು ಕತೆ ನಡೆದು ಫೈನಲ್ ಹಂತದ ಡಿಸಿಜನ್ ಬಾಕಿ ಇದೆ ಎನ್ನಲಾಗ್ತಿದೆ.
ಮುಂದಿನ 4-6 ವರ್ಷ ಸ್ಯಾಂಡಲ್ವುಡ್ಗೆ ತಲೆ ಹಾಕಲ್ವಾ ಪ್ರಶಾಂತ್ ನೀಲ್?
ಹೌದು, ಸದ್ಯದ ಮಾಹಿತಿಗಳ ಪ್ರಕಾರ ನಿರ್ದೇಶಕ ಪ್ರಶಾಂತ್ ನೀಲ್ ಬರೀ ಟಾಲಿವುಡ್ ಹಾಗೂ ಕಾಲಿವುಡ್ ನಟರ ಸಿನಿಮಾಗಳತ್ತ ಒಲವು ತೋರಿಸ್ತಿದ್ದಾರೆ. ಕೆ.ಜಿ.ಎಫ್ ನಂತರ ಇನ್ನೂ ಮೂರ್ನಾಲ್ಕು ವರ್ಷವಂತೂ ಪ್ರಶಾಂತ್ ನೀಲ್ ಕನ್ನಡದ ನಟರಿಗೆ ಆ್ಯಕ್ಷನ್ ಕಟ್ ಹೇಳೋದು ಕೊಂಚ ಡೌಟೇ. ಅದ್ರಲ್ಲೂ ಪ್ರಶಾಂತ್ ನೀಲ್ ಸಿನಿಮಾಗಳಂದ್ರೆ ಶೂಟಿಂಗ್ ಮುಗಿದು ತೆರೆಗೆ ಬರೋಕೆ 2 ವರ್ಷ ಬೇಕೆ ಬೇಕು. ಒಬ್ಬೊಬ್ಬ ಹೀರೋಗೆ 2 ವರ್ಷ ಅಂದ್ರು ಪ್ರಭಾಸ್ಗೆ 2 ವರ್ಷ, ಎನ್ಟಿಆರ್ಗೆ 2 ವರ್ಷ, ಅಲ್ಲು ಅರ್ಜುನ್ಗೆ 2 ವರ್ಷ ಹಾಗೂ ಥಳಪತಿ ವಿಜಯ್ಗೆ 2 ವರ್ಷ ಅಂತಾ ಲೆಕ್ಕ ಹಾಕುದ್ರು ಮುಂದಿನ 6 ರಿಂದ 8 ವರ್ಷ ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿಯೇ ಪ್ರಶಾಂತ್ ನೀಲ್ ಬ್ಯುಸಿ ಇರಲಿದ್ದಾರೆ.
ಈ ಮಧ್ಯೆ ನಮ್ಮ ಕನ್ನಡ ನಟರ ಜೊತೆ ನೀಲ್ ಸಿನಿಮಾ ಮಾಡೋದು ಕೊಂಚ ಡೌಟೇ ಇದೆ. ಹೀಗಾಗಿ ಕನ್ನಡ ನಟರನ್ನ ಬಿಟ್ಟು ಬೇರೆ ನಟರ ಜೊತೆಯೇ ಪ್ರಶಾಂತ್ ನೀಲ್ ಹೆಸರು ಕೇಳಿ ಬರ್ತಿರೋದ್ರಿಂದ ಕನ್ನಡಿಗರು ಅಸಮಧಾನ ವ್ಯಕ್ತಪಡಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಮ್ ಸ್ಟಾರ್ಗಳ ಜೊತೆ ಸಿನಿಮಾ ಮಾಡಿ ಅಂತಾ ಅಭಿಮಾನಿಗಳು ಕೇಳಿಕೊಳ್ತಿದ್ದಾರೆ.
No Comment! Be the first one.