“ಸತ್ತಾಗ ಹೂಳೋ ಜಾಗ ನಮ್ಮದಲ್ದೇ ಇರಬಹುದು. ಆದ್ರೆ, ಉಸಿರಿರೋತನಕ ನಮ್ ಜಾಗದಲ್ಲೇ ಬದುಕಬೇಕು, ಸೋಲ್ತೀವೋ ಗೆಲ್ತೀವೋ ಧೈರ್ಯವಾಗಿ ಹೋರಾಡಬೇಕು… ತಿರುಗಿಸಿ ಹೊಡಿದೇಇದ್ರೆ ಅಟ್ಟಿಸಿಕೊಂಡು ಬರ‍್ತಾನೇ ಇರ್ತಾರೆ… ಈ ಊರೇ ನಮಗೆ ಅಯೋಧ್ಯ, ಈ ಜನಗಳೇ ನಮ್ಮ ಆಯುಧ… – ಇದು ಈಗಷ್ಟೇ ರಿಲೀಸಾಗಿರುವ ಖಾಕಿ ಸಿನಿಮಾದ ಟೀಸರಿನ ಖಡಕ್ ಮತ್ತು ಮಾಸ್ ಡೈಲಾಗುಗಳು. ಈ ಟ್ರೇಲರು ನೋಡಿದ ಯಾರೇ ಆದರೂ ಇದು ನವೀನ್ ಬಿ ರೆಡ್ಡಿ ನಿರ್ದೇಶನದ ಮೊದಲ ಸಿನಿಮಾ ಅಂತಾ ಹೇಳಲು ಸಾಧ್ಯವೇ ಇಲ್ಲ. ಅಷ್ಟು ಪವರ್ಫುಲ್ಲಾಗಿ ಮೂಡಿಬಂದಿದೆ ಖಾಕಿ ಸಿನಿಮಾದ ಟೀಸರ್. ಮೇಕಿಂಗ್ ಕೂಡಾ ಅಷ್ಟೇ ಗುಣಮಟ್ಟ ಹೊಂದಿದೆಯೆನ್ನುವುದರ ಸೂಚನೆ ಈ ಟೀಸರಿನಲ್ಲಿ ಸಿಕ್ಕಿದೆ!

ರೋಜ಼್, ಮಾಸ್ ಲೀಡರ್, ವಿಕ್ಟರಿ-೨ ಸಿನಿಮಾಗಳಿಗೆ ಬಂಡವಾಳ ಹೂಡುವ ಮುಖಾಂತರ ನಿರ್ಮಾಪಕರೆನಿಸಿಕೊಂಡವರು ತರುಣ್ ಶಿವಪ್ಪ. ಸಿನಿಮಾ ಶುರುವಿನಿಂದ ಹಿಡಿದು ಬಿಡುಗಡೆಯ ತನಕ ಪ್ರತಿಯೊಂದು ವಿಚಾರದಲ್ಲೂ ಹೊಸತನವಿರಬೇಕು ಎಂದು ಬಯಸೋ ನಿರ್ಮಾಪಕರಿವರು. ಹೀಗಾಗಿಯೇ ತರುಣ್ ಟ್ಯಾಕೀಸ್ ಬ್ಯಾನರಿನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಅತ್ಯುತ್ತಮ ಗುಣಮಟ್ಟ ಹೊಂದಿರುತ್ತವೆ. ಸದ್ಯ ತರುಣ್ ಶಿವಪ್ಪ ಮತ್ತು ಮಾನಸ ತರುಣ್ ನಿರ್ಮಿಸುತ್ತಿರುವ ಚಿತ್ರ ಖಾಕಿ.

ಚಿರಂಜೀವಿ ಸರ್ಜಾ ನಟನೆಯ ಈ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ದಿ ಪವರ್ ಆಫ್ ಕಾಮನ್ ಮ್ಯಾನ್ ಎನ್ನುವ ಅಡಿಬರಹ ಹೊಂದಿರುವ ಸಿನಿಮಾ ಚಿರಂಜೀವಿ ಸರ್ಜಾ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡೋದು ಗ್ಯಾರೆಂಟಿ ಅಂತಾ ಗಾಂಧಿನಗರದ ತುಂಬಾ ಟಾಕ್ ಕ್ರಿಯೇಟ್ ಆಗಿದೆ. ತಾನ್ಯಾ ಹೋಪ್ ಈ ಚಿತ್ರದ ನಾಯಕಿ. ಕೇಬಲ್ ಆಪರೇಟರ್ ಯುವಕನಿಂದ ಕತೆ ಆರಂಭಗೊಂಡು ಯಾರೂ ಊಹೆ ಮಾಡಲಾರದ ತಿರುವುಗಳ ಸುತ್ತ ಖಾಕಿ ಬೆಸೆದುಕೊಂಡಿದೆಯಂತೆ. ಈಗಾಗಲೇ ಬಿಡುಗಡೆಗೊಂಡಿರುವ ಖಾಕಿಯ ಪೋಸ್ಟರುಗಳೇ ಈ ಸಿನಿಮಾದಲ್ಲಿ ಜನರಿಗೆ ಹತ್ತಿರವಾಗುವ ಅಂಶಗಳಿವೆ ಅನ್ನೋದನ್ನು ಸಾರಿ ಹೇಳಿವೆ. ಈ ಕುತೂಹಲ ಇಮ್ಮಡಿಗೊಳಿಸುವಂತಾ ಖಾಕಿಯ ಟೀಸರ್ ಈಗ ಲೋಕಾರ್ಪಣೆಗೊಂಡಿದೆ.

ಬಾಲಾ ಛಾಯಾಗ್ರಹಣ, ವಿನೋದ್ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಮಾಸ್ತಿ, ಗುರುರಾಜ ದೇಸಾಯಿ ಸಂಭಾಷಣೆ, ಋತ್ವಿಕ್ ಸಂಗೀತ ಸೇರಿದಂತೆ ಎಲ್ಲ ಹೆಸರು ಮಾಡಿರುವ ತಂತ್ರಜ್ಞರು ಖಾಕಿಯಲ್ಲಿ ಒಟ್ಟು ಸೇರಿದ್ದಾರೆ. ಈ ಚಿತ್ರದ ನಿರ್ದೇಶಕ ನವೀನ್ ರೆಡ್ಡಿ ಅವರ ಪಾಲಿಗಿದು ಚೊಚ್ಚಲ ಸಿನಿಮಾ. ಆದರೆ ಈ ಹಿಂದೆ ಇದೇ ತರುಣ್ ಟಾಕೀಸ್ ನಿರ್ಮಿಸಿದ್ದ ರೋಜ಼್ ಮತ್ತು ಮಾಸ್ ಲೀಡರ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಸಂಗಮ ಮತ್ತು ಕೂಲ್ ಚಿತ್ರಗಳೂ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕಲಿತಿದ್ದಾರೆ. ಪ್ರತಿಯೊಬ್ಬ ಪ್ರಜೆ ಕೂಡಾ ತಮ್ಮ ರಕ್ಷಣೆಯನ್ನು ತಾವೇ ಹೇಗೆ ಮಾಡಿಕೊಳ್ಳಬಹುದು ಎಂಬುದರ ಸುತ್ತ ವಿದ್ಯಾಧರ್ ಹೆಣೆದಿರುವ ಕಥೆಯನ್ನು ನವೀನ್ ರೆಡ್ಡಿ ರೋಚಕವಾಗಿ ರೂಪಿಸಿದ್ದಾರೆ. ಅದರ ಸಣ್ಣ ಸ್ಯಾಂಪಲ್ಲು ಟೀಸರಿನಲ್ಲಿ ಅನಾವರಣಗೊಂಡಿದೆ.

CG ARUN

‘ಸ್ಟಾರ್ ಕನ್ನಡಿಗ’ ಈ ವಾರ ಬಿಡುಗಡೆ

Previous article

ಚೇಸ್ ಯಾವಾಗ ರಿಲೀಸ್?

Next article

You may also like

Comments

Leave a reply

Your email address will not be published. Required fields are marked *