ಸದ್ಯ ಫ್ರಾನ್ಸ್ ನಲ್ಲಿ ನಡೆಯುತ್ತಿರುವ 72ನೇ ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ನ ಹಾಟ್ ಸುಂದರಿಯರು ಕೆಂಪು ಹಾಸಿನ ಮೇಲೆ ಸಕತ್ ಹೆಜ್ಜೆ ಹಾಕುತ್ತಿದ್ದು, ಉತ್ಸವದ ಎರಡನೇ ದಿನ ದೀಪಿಕಾ ಪಡುಕೋಣೆ ತಮ್ಮ ಉಡುಪು ಹಾಗೂ ವಾಕಿಂಗ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ನಿಂಬೆ ಹಸಿರು ಬಣ್ಣದ ಜಿಯಾಂಬಟ್ಟಿಸ್ಟಾ ವಲ್ಲಿ ಗೌನ್​ ತೊಟ್ಟು ರೆಡ್​ ಕಾರ್ಪೆಟ್​ ಮೇಲೆ ಮಹಾರಾಣಿಯಂತೆ ಹೆಜ್ಜೆ ಹಾಕಿದ ದೀಪಿಕಾ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಲಿಂಬೆ ಹಸಿರು ಬಣ್ಣದ ಗೌನ್​ ಜತೆ ತಲೆಗೆ ಬೇಬಿ ಪಿಂಕ್​ ಬಣ್ಣದ ಬ್ಯಾಂಡ್​ ಹಾಗೂ ಅದೇ ಬಣ್ಣದ ಕೊರಳು ಪಟ್ಟಿಯನ್ನೂ ಧರಿಸಿ ಕೆಂಪು ಹಾಸಿನ ಮೇಲೆ ನಡೆಯುತ್ತ ಪೇನ್​ ಆ್ಯಂಡ್​ ಗ್ಲೋರಿ ಸ್ಪ್ಯಾನಿಶ್​ ಡ್ರಾಮಾ ಪ್ರದರ್ಶನಕ್ಕೆ ಭೇಟಿ ಕೊಟ್ಟರು.

https://www.instagram.com/p/Bxkdl6jAJdZ/?utm_source=ig_web_copy_link

ದೀಪಿಕಾ ಪಡುಕೋಣೆ ಕಾನ್​ ಚಲನಚಿತ್ರೋತ್ಸವದ ಎರಡನೇ ದಿನದ ತಮ್ಮ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಅವರ ಪತಿ ರಣವೀರ್​ ಸಿಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಫೋಟೋಗಳಿಗೂ ಕಾಮೆಂಟ್​ ಕೊಟ್ಟು, ವಾವ್​ ಎಂದು ಪತ್ನಿಯ ಸೌಂದರ್ಯವನ್ನು ಹೊಗಳಿದ್ದಾರೆ. ದೀಪಿಕಾ ಪಡುಕೋಣೆ ತಾವು ರೆಡಿಯಾಗಿ ಮೆಟ್ಟಿಲುಗಳನ್ನು ಇಳಿದು ಬರುತ್ತ ಕ್ಯಾಮರಾ ಎದುರು ತುಟಿಯನ್ನು ಮುಂದೆ ಮಾಡಿರುವ ವಿಡಿಯೋವೊಂದನ್ನು ಕೂಡ ಶೇರ್​ ಮಾಡಿದ್ದಾರೆ. ಈ ವಿಡಿಯೋಕ್ಕೆ ರಣವೀರ್​, MuuuuuAh ಎಂದು ಕಾಮೆಂಟ್​ ಮಾಡಿದ್ದಾರೆ. ತಮ್ಮ ಮೊದಲ ದಿನದ ಫೋಟೋಗಳನ್ನೂ ದೀಪಿಕಾ ಶೇರ್​ ಮಾಡಿಕೊಂಡಿದ್ದರು.

CG ARUN

ಥ್ರಿಲ್ಲಿಂಗ್ ಮೂಡ್ ನಲ್ಲಿದ್ದಾರೆ ಹನ್ಸಿಕಾ!

Previous article

ರಿಯಲ್ ಸ್ಟಾರ್ ಜತೆಯಾದ ಡೆಡ್ಲಿ ಆದಿತ್ಯ!

Next article

You may also like

Comments

Leave a reply

Your email address will not be published. Required fields are marked *