ಹೆಸರು ಕೇಳಿದಾಕ್ಷಣ ಇದ್ಯಾವ ಪದನಪ್ಪಾ ಅಂತ ಯೋಚಿಸುವ ಮಟ್ಟಿಗೆ ಇರುವ ಟೈಟಲ್ಲು. ಇಲ್ಲಿಯವರೆಗೂ ಫ್ರೀ ಲ್ಯಾನ್ಸರ್ ಸ್ಕ್ರೀನ್ ಪ್ಲೇ ರೈಟರ್ ಆಗಿದ್ದ ಚೊಚ್ಚಲ ನಿರ್ದೇಶನಕ್ಕೆ ಮನಸ್ಸು ಮಾಡಿರೋ ನಿರ್ದೇಶಕ; ಮಗ ಎಂದಷ್ಟೇ ಪ್ರಿಫರೆನ್ಸ್ ಕೊಡದೇ ಕಥೆಗೆ ಓಗೋಟ್ಟು ಸಿನಿಮಾ ಮಾಡಲು ಮುಂದಾಗಿರುವ ನಿರ್ಮಾಪಕರು. ಇವೆಲ್ಲದರ ಜತೆಗೆ ಹಣ ಮಾಡಲೇಬೇಕೆಂಬ ಅನಿವಾರ್ಯತೆ, ಅಗತ್ಯತೆ ಇಲ್ಲದೆಯೇ ಕೈ ತುಂಬ ಸಂಬಳ ಗಳಿಸುತ್ತಿದ್ದರೂ, ತನ್ನ ಆಲೋಚನೆಗಳಿಗೆ, ಮನುಷ್ಯ ಕಳೆದುಕೊಂಡಿರುವ ಬದುಕಿನ ನಿಜಾರ್ಥವನ್ನು ಸಾಧ್ಯವಾದಷ್ಟು ಮಟ್ಟಿಗೆ ಜನರಿಗೆ ತಿಳಿಸಿ ಸಾರ್ಥಕತೆಯ ಜೀವನವನ್ನು ನಡೆಸಲು ಅಗತ್ಯಾಂಶಗಳನ್ನು ತನ್ನದೇ ಧಾಟಿಯಲ್ಲಿ ತಿಳಿಸಹೊರಟಿರುವ ಹೀರೋ. ಅಗತ್ಯವಿರುವ ಮಸಾಲೆ ಪದಾರ್ಥಗಳು ಕೂಡಿದಾಗ ರುಚಿಕರವಾದ ಸಾಂಬಾರಾಗಬಹುದೆನ್ನುವುದಕ್ಕೆ ಖನನ ಸಿನಿಮಾ ಪ್ರತ್ಯಕ್ಷ ಉದಾಹರಣೆ. ಹೌದು ಸದ್ಯದಲ್ಲೇ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಗೆ ರೆಡಿಯಾಗಿರುವ ಖನನ ಸಿನಿಮಾ ಇಷ್ಟೆಲ್ಲಾ ಎಲಿಜಿಬಿಲಿಟಿ ಪಡೆದಿರುವುದು ರಿಲೀಸ್ ಆಗದೇ ಸಿನಿಮಾ ಗೆದ್ದಂತೆಯೇ ಸರಿ.
ಈ ಸಿನಿಮಾದ ಕೇಂದ್ರ ಬಿಂದು ನಾಯಕ ಆರ್ಯವರ್ದನ್ ಮೂಲತಃ ಇಂಜಿನಿಯರಿಂಗ್ ಮುಗಿಸಿ, ಈ ಹಿಂದೆ ಇಸ್ರೋದಲ್ಲಿಯೂ ವಿಜ್ಞಾನಿಯಾಗಿ ಕೆಲ ಕಾಲದ ಮಟ್ಟಿಗೆ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಹೆಸರಾಂತ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸೆಳೆದದ್ದು ಸಿನಿಮಾ ಮಾಧ್ಯಮ. ಹಾಗಂತ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಗಳಿಸಿ ಮೆರೆಯಬೇಕೆಂಬ ಹಂಬಲವೂ, ಆಸ್ಥೆಯೂ ಅವರಲ್ಲಿಲ್ಲದಿದ್ದರೂ ಸಹ ತನ್ನ ಉದ್ದೇಶವನ್ನು, ನಿಲುವುಗಳನ್ನು, ಪರಿಕಲ್ಪನೆಗಳನ್ನು ಸುಲಭವಾಗಿ ಜನರಿಗೆ ತಲುಪಿಸಬಹುದೆಂಬ ಏಕೈಕ ಕಾರಣಕ್ಕೆ ಸಿನಿಮಾ ಮಾಧ್ಯಮವನ್ನು ಆರಿಸಿಕೊಂಡದ್ದು ಕೇಳುಗರ ಕಿವಿ ನೆಟ್ಟಗಾಗುವಂತೆ ಮಾಡುತ್ತದೆ.
ಬಾಲ್ಯದಿಂದಲೂ ನಾಟಕ, ನೃತ್ಯದಲ್ಲಿ ಪರಿಣತರಾಗಿರುವ ಆರ್ಯವರ್ಧನ್ ಬಣ್ಣದ ಲೋಕದ ತಾಕತ್ತನ್ನು ತಿಳಿದು ತಿಳಿದೇ ಚಿತ್ರರಂಗಕ್ಕೆ ಧುಮಿಕಿದ್ದಾರೆ. ಈ ಮೊದಲು ಕೂಡ್ಲು ರಾಮಕೃಷ್ಣ ಅವರ ಮಾರ್ಚ್ 22 ಎಂಬ ಸಿನಿಮಾದಲ್ಲಿ ಮುಸ್ಲಿಂ ಪಾತ್ರವೊಂದರ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಆರ್ಯವರ್ದನ್ ಪೂರ್ಣ ಪ್ರಮಾಣದ ನಾಯಕನಾಗಿದ್ದು ಖನನದ ಮೂಲಕವೇ. ಕಥೆಯಲ್ಲಿರುವ ಸ್ಪಷ್ಟತೆ, ಬದುಕಿನ ಬಗೆಗಿರುವ ಕಲ್ಪನೆ, ಜನ ಬದುಕಿನ ಹೊರತಾಗಿ ಕೇವಲ ಆರ್ಟಿಫಿಷಿಯಲ್ ಲೈಫಿಗೆ ತಗುಲಿಕೊಂಡು ಬದುಕಿನ ನಿಜವಾದ ಆತ್ಮತೃಪ್ತಿಯನ್ನು ಅನುಭವಿಸಲು ವಿಫಲರಾಗುತ್ತಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ಹೆಚ್ಚು ಫೋಕಸ್ ಮಾಡಿರುವುದೇ ಖನನ ಇಷ್ಟವಾಗಲು ಕಾರಣ ಎನ್ನುತ್ತಾರೆ ಆರ್ಯವರ್ಧನ್.
ಇನ್ನು ಕೇವಲ ತಂದೆ ತನಗಾಗಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆಂಬ ಅಪವಾದವನ್ನು ಒಪ್ಪದ ಆರ್ಯವರ್ಧನ್, ಚಿಟ್ಟೆ ಸಿನಿಮಾದಲ್ಲಿ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಅರ್ಹರಿಗೆ ಅವಕಾಶ ಕೊಡುವ ಗುಣ ತಂದೆಗಿದೆ ಎಂದು ಒಲವು ವ್ಯಕ್ತಪಡಿಸಿದರು. ಇನ್ನು ಖನನದಲ್ಲಿ ನಾಯಕನ ಜತೆಗೆ ನಟಿಸಿರುವ ನಾಯಿಯೊಂದು ಕೆಲ ತಿಂಗಳ ಹಿಂದೆ ಅಸುನೀಗಿದ್ದು ಅವರಿಗೆ ಹೆಚ್ಚು ಮನಸ್ಸಿನ ನಾಟಿದ ವಿಚಾರವಂತೆ. ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಗಳಲ್ಲಿ ಪರಿಣತರಾಗಿರುವ ಆರ್ಯವರ್ಧನ್ ಡಬ್ಬಿಂಗ್ ಆರಿರುವ ಭಾಷೆಗಳಿಗೆ ಸ್ವತಃ ತಾನೇ ಡಬ್ ಮಾಡಿರುವುದು ವಿಶೇಷವಾಗಿದೆ.
ಸದ್ಯಕ್ಕೆ ಖನನದಲ್ಲಿ ನಟಿಸಿ, ಮತ್ತಾವುದೇ ಸ್ಕ್ರಿಪ್ಟ್ ನ್ನು ಒಪ್ಪಿಕೊಳ್ಳದ ಆರ್ಯವರ್ಧನ್, ಜನತೆಯನ್ನು ಮುಟ್ಟುವ, ತನ್ನ ನಿಲುವುಗಳು ತಲುಪಬಹುದಾದ ಸ್ಕ್ರಿಪ್ಟ್ ನ ಹುಡುಕಾಟದಲ್ಲಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಒಬ್ಬ ವಯಸ್ಕನ ಬಾಯಲ್ಲಿ ಬರಬಾರದ ಸಾಕಷ್ಟು ಪ್ರ ುದ್ಧ ವಿಚಾರಗಳನ್ನು ತಿಳಿದು, ಸಾರ್ಥಕತೆಯ ಜೀವನದಲ್ಲಿ ತನ್ನ ಜೊತೆ ಸಮಾಜವು ಬರಬೇಕೆನ್ನುವ ಹಂಬಲದಲ್ಲಿರುವ ಆರ್ಯವರ್ಧನ್ ಗೆ ಸಿನಿ ಬಜ್ ಹಾರೈಸುತ್ತದೆ. ಅವರ ಉದ್ದೇಶ ಯಶಸ್ಸಿನ ಹಾದಿಯಲ್ಲಿ ಸಾಗುವಂತಾಗಲಿ.
No Comment! Be the first one.