ಖೊಟ್ಟಿ ಪೈಸೆ ಎಂದರೆ ಚಲಾವಣೆಯಲ್ಲಿರದ ನಾಣ್ಯ. ಉತ್ತರ ಕರ್ನಾಟಕದಲ್ಲಿ ಬಳಸುವ ಪದ ಇದು. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಇಟ್ಟುಕೊಂಡು ಈ ನಾಣ್ಯಕ್ಕೂ, ಮನುಷ್ಯನಿಗೂ ಇರುವಂತಹ ಸಂಬಂಧವನ್ನು ಹೇಳಲು ಹೊರಟಿದ್ದಾರೆ ಕಿರಣ್.ಕೆ.ಆರ್. ಖೊಟ್ಟಿ ಪೈಸೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಹಾಗೂ ಸಂಭಾಷಣೆ ಬರೆದು ನಿದೇಶನ ಕೂಡ ಮಾಡಿದ್ದಾರೆ. ಕಿರಣ್ ಅವರ ಸಿನಿಮಾ ಸಹಾಸಕ್ಕೆ ಬಂಡವಾಳ ಹಾಕುವ ಮೂಲಕ ವೀರಪ್ಪ.ವಿ.ಶಿರಗಣ್ಣ ನಿರ್ಮಾಪಕರಾಗಿದ್ದಾರೆ. ವೆಂಕಟಗೌಡ ಅವರ ಮೂಲಕ ಖೊಟ್ಟಿ ಪೈಸೆ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊನ್ನೆ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕಿರಣ್ ೧೯೯೮ ರಲ್ಲಿ ೫, ೧೦ ಹಾಗೂ ೨೦ ಪೈಸೆ ನಾಣ್ಯಗಳ ಚಲಾವಣೆಯನ್ನು ರದ್ದುಪಡಿಸಲಾಗಿತ್ತು, ಆಗಿನ ಕಾಲದಲ್ಲಿ ಆ ನಾಣ್ಯಗಳು ತುಂಬಾ ಬೆಲೆ ಬಾಳುತ್ತಿದ್ದವು.
ಉತ್ತರ ಕರ್ನಾಟಕದ ಒಂದು ಕುಟುಂಬದ ಕಥೆಯನ್ನು ಈ ನಾಣ್ಯಗಳು ರದ್ದಾದ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕಮರ್ಷಿಯಲ್ ಅಂಶಗಳನ್ನು ಬಿಟ್ಟು ಕಂಟೆಂಟ್ ಮೇಲೆ ಕಥೆ ಮಾಡಿದ್ದೇನೆ. ಚಿತ್ರದಲ್ಲಿ ಆಗಿನ ಕಾಲದ ಭಾಷೆಯನ್ನೇ ಬಳಿಸಿದ್ದೇವೆ. ಬಾಗಲಕೋಟೆ ಜಿಲ್ಲೆಯ ಭಿಮನಾಳ ಗ್ರಾಮದಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ವೈಜನಾಥ್ ಬಿರಾದರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚೇತನ್ ಹಾಗು ಸಹನ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರೆಟ್ರೋ ಸ್ಟೈಲ್ ಕಥೆ ಇದಾಗಿದೆ ಎಂದು ಹೇಳಿದರು. ನಾಯಕ ರಾಮಚೇತನ್ ಮಾತನಾಡಿ ಆಣ್ಣಯ್ಯ, ಪುಟ್ಟಮಲ್ಲಿ, ಧಾರಾವಾಹಿಗಳಲ್ಲಿ ಆಬಿನಯಿಸಿದ್ದೇನೆ. ಇದು ನನ್ನ ಮೊದಲ ಚಿತ್ರ. ಸೀರಿಯಲ್ ಗಳಲ್ಲಿ ನನ್ನ ಅಭಿನಯ ನೋಡಿ ಕಿರಣ್ ಅವರು ನನಗೆ ಈ ಚಿತ್ರದಲ್ಲಿ ಅವಕಾಶ ಕೊಟ್ಟರು, ಬಿರಾದರ್ ಅವರ ಬೆಂಬಲಕ್ಕೆ ನಿಲ್ಲುವ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ ಎಂದು ಹೇಳಿದರು. ನಾಯಕ ಸಹನ ಮಾತನಾಡಿ ನನಗೂ ಇದು ಮೊದಲು ಚಿತ್ರ ಹಳ್ಳಿ ಹುಡುಗಿ ಯಾರಿಗೂ ಕೇರ್ ಮಾಡದ ದಿಟ್ಟ ಯುವತಿಯಾಗಿ ಈ ಚಿತ್ರದಲ್ಲಿ ಕಾಣಿಸಿದ್ದೇನೆ ಎಂದು ಹೇಳಿದರು. ನಂತರ ಚಿತ್ರದ ನಿರ್ಮಾಪಕ ವೀರಪ್ಪ ಮಾತನಾಡಿ ನಿರ್ದೇಶಕರು ಹೇಳಿದ ಬಜೆಟ್ನಲ್ಲೆ ಸಿನಿಮಾ ಮಾಡಿದ್ದಾರೆ. ಉತ್ತರ ಕರ್ನಾಟಕ ಕಥೆಯಾಗಿರುವುದರಿಂದ ಜನಕ್ಕೆ ಇಷ್ಟವಾಗುತ್ತೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ವಿತರಕ ವೆಂಕಟ ಗೌಡ ಮಾತನಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಥಿಯೇಟರ್ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿರುವುದಾಗಿ ತಿಳಿಸಿದರು.
#
No Comment! Be the first one.