ಭಾರತದ ಪ್ರಸಿದ್ಧ ಕಿರುತೆರೆ ಕಾರ್ಯಕ್ರಮಗಳಲ್ಲಿ ಹಿಂದಿಯ ಕಪಿಲ್ ಶರ್ಮಾ ಶೋ ಪ್ರಮುಖವಾದದ್ದು. ಈಗಂತೂ ಈ ಶೋ ಸಿನಿಮಾ ಪ್ರಚಾರದ ವಿಚಾರದಲ್ಲಿಯೂ ಭಾರೀ ಪ್ರತಿಷ್ಠೆ ಪಡೆದುಕೊಂಡಿದೆ. ಬಾಲಿವುಡ್ ಸಿನಿಮಾ ಜಗತ್ತಿನ ದಿಗ್ಗಜರೇ ಈ ಶೋಗೆ ತೆರಳಲು ಕಾದು ನಿಂತಿರುತ್ತಾರೆ. ಇದೀಗ ಇಂಥಾ ಶೋನಲ್ಲಿ ಕಿಚ್ಚಾ ಸುದೀಪ್ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಖುಷಿಯಿಂದಲೇ ಟ್ವಿಟರ್ನಲ್ಲಿಯೂ ಹೇಳಿಕೊಂಡಿದ್ದಾರೆ.
ಈ ಶೋನಲ್ಲಿ ಸುನೀಲ್ ಶೆಟ್ಟಿ ಮುಂತಾದವರ ಜೊತೆ ಕಿಚ್ಚಾ ಭಾಗವಹಿಸಿದ್ದಾರೆ. ಕಪಿಲ್ ಶರ್ಮಾ ಜೊತೆ ಜನುಮದಲ್ಯಾವತ್ತೂ ನಗದಷ್ಟು ನಕ್ಕಿರೋದಾಗಿಯೂ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀಪ್ ಪೈಲ್ವಾನ್ ಚಿತ್ರದ ಬಗ್ಗೆ ಪ್ರಚಾರ ಕಾರ್ಯ ಮಾಡಿರಬಹುದಾ ಅಂತಲೂ ಅಂದಾಜಿಸಲಾಗುತ್ತಿದೆ.
ಈಗಾಗಲೇ ಪೈಲ್ವಾನ್ ಚಿತ್ರ ದೇಶಾಧ್ಯಂತ ಸುದ್ದಿಯಲ್ಲಿದೆ. ಇದಲ್ಲದೇ ಈ ಚಿತ್ರ ಎಂಟು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಹೀಗೆ ಬೇರೆ ಭಾಷೆಗಳಿಗೆ ಕಿಚ್ಚನ ಚಿತ್ರಗಳು ತಲುಪೋದು ಕಷ್ಟವೇನಲ್ಲ. ಯಾಕಂದ್ರೆ ಇಡೀ ಇಂಡಿಯಾಕ್ಕೆ ಅವರು ಪರಿಚಿತರು. ಈಗಾಗಲೇ ಬಾಹುಬಲಿ, ಫೂಂಕ್ ಮುಂತಾದ ಚಿತ್ರಗಳ ಮೂಲಕ ಹಿಂದಿ ಸೇರಿದಂತೆ ನಾನಾ ಭಾಷೆಗಳಲ್ಲಿ ಅವರು ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಿರುವಾಗ ಕಪಿಲ್ ಶರ್ಮಾ ಶೋನಲ್ಲಿ ಕಿಚ್ಚಾ ಪೈಲ್ವಾನ್ ಬಗ್ಗೆ ಪ್ರಚಾರ ಮಾಡಿದ್ದಾರಾ ಅಥವಾ ಸಿಸಿಎಲ್ ವಿಚಾರವಾಗಿ ಅಲ್ಲಿಗೆ ಹೋಗಿದ್ದಾರಾ ಅನ್ನೋದು ಇಷ್ಟರಲ್ಲಿಯೇ ಬಯಲಾಗಲಿದೆ.
#
No Comment! Be the first one.