ಸ್ಯಾಂಡಲ್ ವುಡ್ ನಲ್ಲಿ ಕೋಟಿಗೊಬ್ಬ ಅಂದಾಕ್ಷಣ ಸಾಹಸ ಸಿಂಹ ಡಾ. ವಿಷ್ಣು ವರ್ದನ್ ಅವರೇ ಕಣ್ಣ ಮುಂದೆ ಬರುತ್ತಾರೆ. ಕೋಟಿಗೊಬ್ಬ ಆ ಕಾಲದ ಸೂಪರ್ ಹಿಟ್ ಸಿನಿಮಾ ಕೂಡ. ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 2 ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದು, ಕಿಚ್ಚನಿಗೆ ಒಂದು ಮಟ್ಟಿನ ಇಮೇಜನ್ನು ತಂದುಕೊಟ್ಟಿತ್ತು. ಇದೀಗ ಅದರದೇ ಮೂರನೇ ಸೀಕ್ವೆಲ್ ನಲ್ಲಿ ಕಿಚ್ಚ ಸುದೀಪ್ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಚಿತ್ರದ ಟೀಸರ್ ನಲ್ಲಿಯೇ ದುಬಾರಿ ಮೇಕ್ ಓವರ್ ಮೂಲಕ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ, ಕೋಟಿಗೊಬ್ಬ 3 ಸಿನಿಮಾ ಇದೀಗ ತನ್ನ ಮತ್ತೊಂದು ವಿಚಾರದಿಂದ ಅಭಿಮಾನಿಗಳ ಮುಖವರಳಿಸಿದೆ. ಕೋಟಿಗೊಬ್ಬ 3 ಸಿನಿಮಾದಲ್ಲಿನ ಕಿಚ್ಚ ಸುದೀಪ್ ಅವರ ಹೊಸದೊಂದು ಲುಕ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ಆ ಲುಕ್ ನಲ್ಲಿ ಸೇಮ್ ಕ್ರಿಶ್ ಚಿತ್ರದ ಹೃತಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಾಸ್ಟ್ಯೂಮ್, ಲಾಂಗ್ ಹೇರ್, ಕಣ್ಣಿಗೆ ಬಣ್ಣ ಹಚ್ಚಿಕೊಂಡು ಸುದೀಪ್ ದರ್ಶನ ಭಾಗ್ಯ ನೀಡಿದ್ದಾರೆ. ಅಂದಹಾಗೆ ಕೋಟಿಗೊಬ್ಬ 3 ಚಿತ್ರತಂಡ ಫೈಟಿಂಗ್ ಶೂಟಿಂಗ್ ಗೆ ವಿದೇಶಕ್ಕೆ ಹಾರಿದ್ದು, ಚಿತ್ರೀಕರಣವನ್ನು ನಡೆಸುತ್ತಿದೆ. ಇತ್ತೀಚೆಗಷ್ಟೇ ಮಿನರ್ವ ಮಿಲ್ ನಲ್ಲಿ ಮೆಟ್ರೋ ಮಾದರಿಯ ಬೃಹತ್ ಸೆಟ್ ನಿರ್ಮಿಸಿಯೂ ಶೂಟಿಂಗ್ ಮಾಡಲಾಗಿತ್ತು. ಕಿಚ್ಚನ ಈ ಅವತಾರ ಅಭಿಮಾನಿಗಳಲ್ಲಿ ನಾನಾ ಡೌಟುಗಳನ್ನು ಹುಟ್ಟುಹಾಕಿದೆ.
ಸ್ಯಾಂಡಲ್ ವುಡ್ ನಲ್ಲಿ ಕೋಟಿಗೊಬ್ಬ ಅಂದಾಕ್ಷಣ ಸಾಹಸ ಸಿಂಹ ಡಾ. ವಿಷ್ಣು ವರ್ದನ್ ಅವರೇ ಕಣ್ಣ ಮುಂದೆ ಬರುತ್ತಾರೆ. ಕೋಟಿಗೊಬ್ಬ ಆ ಕಾಲದ ಸೂಪರ್ ಹಿಟ್ ಸಿನಿಮಾ ಕೂಡ. ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 2 ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದು, ಕಿಚ್ಚನಿಗೆ ಒಂದು ಮಟ್ಟಿನ ಇಮೇಜನ್ನು ತಂದುಕೊಟ್ಟಿತ್ತು. ಇದೀಗ ಅದರದೇ ಮೂರನೇ ಸೀಕ್ವೆಲ್ ನಲ್ಲಿ ಕಿಚ್ಚ ಸುದೀಪ್ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಚಿತ್ರದ ಟೀಸರ್ ನಲ್ಲಿಯೇ ದುಬಾರಿ ಮೇಕ್ ಓವರ್ ಮೂಲಕ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ, ಕೋಟಿಗೊಬ್ಬ 3 ಸಿನಿಮಾ ಇದೀಗ ತನ್ನ ಮತ್ತೊಂದು ವಿಚಾರದಿಂದ ಅಭಿಮಾನಿಗಳ ಮುಖವರಳಿಸಿದೆ.
ಕೋಟಿಗೊಬ್ಬ 3 ಸಿನಿಮಾದಲ್ಲಿನ ಕಿಚ್ಚ ಸುದೀಪ್ ಅವರ ಹೊಸದೊಂದು ಲುಕ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ಆ ಲುಕ್ ನಲ್ಲಿ ಸೇಮ್ ಕ್ರಿಶ್ ಚಿತ್ರದ ಹೃತಿಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಾಸ್ಟ್ಯೂಮ್, ಲಾಂಗ್ ಹೇರ್, ಕಣ್ಣಿಗೆ ಬಣ್ಣ ಹಚ್ಚಿಕೊಂಡು ಸುದೀಪ್ ದರ್ಶನ ಭಾಗ್ಯ ನೀಡಿದ್ದಾರೆ. ಅಂದಹಾಗೆ ಕೋಟಿಗೊಬ್ಬ 3 ಚಿತ್ರತಂಡ ಫೈಟಿಂಗ್ ಶೂಟಿಂಗ್ ಗೆ ವಿದೇಶಕ್ಕೆ ಹಾರಿದ್ದು, ಚಿತ್ರೀಕರಣವನ್ನು ನಡೆಸುತ್ತಿದೆ. ಇತ್ತೀಚೆಗಷ್ಟೇ ಮಿನರ್ವ ಮಿಲ್ ನಲ್ಲಿ ಮೆಟ್ರೋ ಮಾದರಿಯ ಬೃಹತ್ ಸೆಟ್ ನಿರ್ಮಿಸಿಯೂ ಶೂಟಿಂಗ್ ಮಾಡಲಾಗಿತ್ತು. ಕಿಚ್ಚನ ಈ ಅವತಾರ ಅಭಿಮಾನಿಗಳಲ್ಲಿ ನಾನಾ ಡೌಟುಗಳನ್ನು ಹುಟ್ಟುಹಾಕಿದೆ.
No Comment! Be the first one.