ರಿಕ್ಕಿ, ಕಿರಿಕ್ ಪಾರ್ಟಿ, ಸ.ಹಿ.ಪ್ರಾ.ಶಾಲೆ ಗಳಂತಹ ಸದಭಿರುಚಿಯ ಸಿನಿಮಾಗಳನ್ನು ನೀಡಿ ನಿರ್ಮಾಪಕರಲ್ಲಿ ಭರವಸೆ ಮೂಡಿಸಿರುವ ಯುವ ನಿರ್ದೇಶಕ ರಿಷಬ್ ಶೆಟ್ಟಿ, ಬೆಲ್ ಬಾಟಂ ಸಿನಿಮಾ ಮೂಲಕ ನಾಯಕನಾಗಿಯೂ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಈ ಮಧ್ಯೆ ರಿಷಬ್ ಶೆಟ್ಟಿ ಕಿಚ್ಚ ಸುದೀಪ್ ಅವರ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಗುಲ್ಲು ಗಾಂಧೀನಗರದಲ್ಲಿ ಎದ್ದಿದೆ. ಆದರೆ ಈ ಬಗ್ಗೆ ಕಿಚ್ಚನಾಗಲಿ, ರಿಷಬ್ ಆಗಲಿ ತುಟಿ ಬಿಚ್ಚಿರಲಿಲ್ಲ. ಆದರೆ ರಿಷಬ್ ಸಿನಿಮಾ ಕುರಿತು ಮಾತನಾಡಿದ್ದು, ಸುದೀಪ್ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್ನಿನಲ್ಲಿ ಸಿನಿಮಾ ಬರುತ್ತಿರುವುದಂತೂ ಸತ್ಯ. ಆದರೆ ಸದ್ಯಕ್ಕೆ ಇನ್ನು ಸ್ಕ್ರಿಪ್ಟ್ ರೆಡಿಯಾಗಿಲ್ಲ. ಉತ್ತಮವಾದ ಕಥೆಯನ್ನು ಬರೆದು, ಸುದೀಪ್ ಅವರನ್ನು ಒಪ್ಪಿಸಿ ಸಿನಿಮಾ ಮಾಡೇ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
No Comment! Be the first one.