ಸಿನಿಮಾ ಸೆಲೆಬ್ರೆಟಿಗಳು ಮಾತನಾಡಿಸಿ ಒಮ್ಮೆ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರೆ ಜೀವನ ಪಾವನ ಎನ್ನುವ ಫೀಲ್ ನಲ್ಲಿ ಅಭಿಮಾನಿಗಳಿರುತ್ತಾರೆ. ಅದರಲ್ಲೂ ಸ್ಟಾರ್ ನಟರಂತೂ ಒಮ್ಮೆ ಕೈ ಕುಲುಕಿದರೆ ಸಾಕು ಎಂಬ ಆಸೆಯನ್ನು ಬಹಳಷ್ಟು ಫ್ಯಾನ್ ಗಳು ಹೊಂದಿರುತ್ತಾರೆ. ಆದರೆ ಅಂತಹ ಸೆಲೆಬ್ರೆಟಿಗಳ ಜತೆಗೆ ನಟಿಸಲು ಚಾನ್ಸ್ ಸಿಕ್ಕರೇ ಹೇಗೆ?

ಹೌದು.. ಸದ್ಯ ಅಂತಹದೊಂದು ಅವಕಾಶವನ್ನು ನಿರ್ದೇಶಕ ಅನೂಪ್ ಭಂಡಾರಿ ಕಲ್ಪಿಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರೊಂದಿಗೆ ಮಾಡಲಿರುವ ಹೊಸ ಚಿತ್ರಕ್ಕೆ 3-7 ವರ್ಷದ ಬಾಲಕಿಯ ಅವಶ್ಯಕತೆ ಇದ್ದು, ಚಿಕ್ಕ ಹುಡುಗಿಯ ಹುಡುಗಾಟದಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಅನೂಪ್​, ‘ನಮ್ಮ ಸಿನಿಮಾದಲ್ಲಿ ಬರುವ ಚಿಕ್ಕ ಬಾಲಕಿ ಪಾತ್ರ ತುಂಬಾನೇ ಮಹತ್ವದ್ದು. ವಯಸ್ಸು ಕಡಿಮೆ ಇದ್ದಷ್ಟು ಉತ್ತಮ. ನೋಡಲು ಕ್ಯೂಟ್​ ಆಗಿರಬೇಕು. ಬಾಲಕಿಗೆ 3-7 ವರ್ಷ ಆಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಡೈಲಾಗ್​ ಡೆಲಿವರಿ ಮಾಡಲು ಬರಬೇಕು. ಮುಖದಲ್ಲಿ ಭಾವನೆ ಹೊರಹಾಕಲು ಬರಬೇಕು,’ ಎನ್ನುತ್ತಾರೆ ಅನೂಪ್.  ಮಳೆಗಾಲ ಪೂರ್ಣಗೊಂಡ ನಂತರ ಶೂಟಿಂಗ್​ ನಡೆಸಲು ಸ್ಥಳಗಳ ಆಯ್ಕೆಯಲ್ಲಿ ಅನೂಪ್​ ತೊಡಗಲಿದ್ದಾರೆ.

CG ARUN

ಶ್ವೇತಾ ಚೆಂಗಪ್ಪ ತಾಯಿಯಾದ್ರು!

Previous article

ಕೊಯ್ನಾ ಮಿತ್ರಾಗೆ ಎದುರಾಯ್ತು ಚೆಕ್ ಬೌನ್ಸ್ ಕಂಟಕ!

Next article

You may also like

Comments

Leave a reply

Your email address will not be published. Required fields are marked *