ಕಿಚ್ಚ ಸುದೀಪ್ ಅನ್ನೋ ಹೆಸರಲ್ಲೇ ಒಂದು ಕಿಚ್ಚಿದೆ, ಕನ್ನಡದ ಶಕ್ತಿ ಅಡಗಿದೆ. ನೆರೆಯ ಯಾವ ರಾಜ್ಯದಲ್ಲೇ ಹೋಗಿ ʻಕನ್ನಡದ ಒಬ್ಬ ನಟನ ಹೆಸರು ಹೇಳಿʼ ಅಂತಾ ಕೇಳಿದರೆ ಮೊದಲಿಗೆ ಕೇಳಿಬರುವ ಹೆಸರು ಸುದೀಪ. ಇಂಥ ಸುದೀಪ್ ಗುಡುಗಿದರೆ ಎಂಥಾ ಕಾರ್ಪೊರೇಟ್ ಸಂಸ್ಥೆ ಕೂಡಾ ಸದ್ದಡಗಲೇಬೇಕು.
ಇತ್ತೀಚೆಗೆ ಖಾಸಗೀ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಮಸೂದೆಯೊಂದನ್ನು ಜಾರಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಫೋನ್ ಪೇ ಸಿ.ಇ.ಓ. ಸಮೀರ್ ನಿಗಮ್ ಕನ್ನಡ ವಿರೋಧಿ ಹೇಳಿಕೆ ನೀಡಿದ್ದರು. ರಾಜ್ಯಾದ್ಯಂತ ಫೋನ್ ಪೇ ವಿರುದ್ಧ ಕೂಗು ಕೇಳಲಾರಂಭಿಸಿತ್ತು. ಕರ್ನಾಟಕದಲ್ಲಿ ಫೋನ್ ಪೇ ಬ್ರಾಂಡ್ ಅಂಬಾಸಡರ್ ಆಗಿರುವವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ. ಬೇರೆ ಯಾರೇ ಸ್ಟಾರ್ಗಳಾಗಿದ್ದರೂ ʻಇದಕ್ಕೂ ನಮಗೂ ಸಂಬಂಧವಿಲ್ಲʼ ಎನ್ನುವಂತೆ ಸುಮ್ಮನಿದ್ದುಬಿಡುತ್ತಿದ್ದರೇನೋ? ಆದರೆ ಕಿಚ್ಚ ಹಾಗೆ ಮಾಡಲಿಲ್ಲ. ಒಂದು ವೇಳೆ ಬೇಷರತ್ ಕ್ಷಮೆ ಕೇಳದಿದ್ದರೆ, ಸಂಸ್ಥೆಯೊಂದಿಗಿನ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿಕೊಂಡು ರಾಯಭಾರತ್ವದಿಂದ ಹೊರಬರುವುದಾಗಿ ಎಚ್ಚರಿಸಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕಾರಣಕ್ಕೆ ಫೋನ್ ಪೇ ಸಂಸ್ಥೆ ತಮ್ಮ ತಪ್ಪನ್ನು ಒಪ್ಪಿಕೊಂಡು ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದೆ.
ಬಂಡವಾಳಶಾಹಿ ಕಾರ್ಪೊರೇಟ್ ಸಂಸ್ಥೆಗಳನ್ನು ಬಗ್ಗಿಸುವುದು ಸುಲಭದ ಮಾತಲ್ಲ. ಆದರೆ, ಕಿಚ್ಚನ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಬಗೆಹರಿದಂತಾಗಿದೆ. ಅದಕ್ಕೇ ಹೇಳೋದು ಕಿಚ್ಚ ಎನ್ನುವ ಪದವೇ ಕನ್ನಡದ ಧ್ವನಿ ಅಂತಾ!
ಸದ್ಯ ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಎದುರಾಗಿದೆ. ಸಿನಿಮಾರಂಗ ಈ ಹಿಂದೆ ಯಾವತ್ತೂ ಅನುಭವಿಸದ ಸಂಕಷ್ಟದಲ್ಲಿ ಸಿಲುಕಿದೆ. ಬಾಕ್ಸ್ ಆಫೀಸು, ಬಾಸು ಅನ್ನಿಸಿಕೊಂಡವರು ಹೀನ ಕೃತ್ಯ ಮಾಡಿ ಜೈಲು ಸೇರಿದ್ದಾರೆ. ಇನ್ನು ಕೆಲವು ದೊಡ್ಡ ಹೀರೋಗಳು ʻಮನೆʼ ಬಿಟ್ಟು ಹೊರಬರುತ್ತಿಲ್ಲ. ಫೋನ್ ಪೇ ವಿಚಾರದಂತೆಯೇ ಸಿನಿಮಾ ಇಂಡಸ್ಟ್ರಿಯ ಸಮಸ್ಯೆಗಳನ್ನೂ ಸುದೀಪ್ ಥರದ ಸೀನಿಯರ್ ಹೀರೋ ನಿಂತು ಬಗೆಹರಿಸಬೇಕು!
No Comment! Be the first one.