ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಯಾವಾಗ ರಿಲೀಸ್? ಅನ್ನೋದು ಎಲ್ಲರ ಕುತೂಹಲ ಮತ್ತು ಪ್ರಶ್ನೆ. ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 2024ರ 27ನೇ ತಾರೀಖು ಮ್ಯಾಕ್ಸ್ ತೆರೆ ಮೇಲೆ ಅಬ್ಬರಿಸೋದು ಬಹುತೇಕ್ ಫಿಕ್ಸ್ ಆಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಹೊರಬರಲು ಉದ್ದೇಶಿಸಿದ್ದ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಅಕ್ಟೋಬರ್ ತಿಂಗಳಿಗೆ ಹೋಗುವ ಸಾಧ್ಯತೆ ಇದೆ. ಇನ್ನು ಧೃವಾ ಸರ್ಜಾ ಅವರ ಮಾರ್ಟಿನ್ ಅಕ್ಟೋಬರ್ 10ಕ್ಕೆ ಅಧಿಕೃತವಾಗಿ ಅನೌನ್ಸ್ ಆಗಿದೆ. ಉಪ್ಪಿಯ ʻಯು ಐʼ ಅಕ್ಟೋಬರ್ ಅಂತಾ ಹಾಕಿದ್ದಾರೆ. ಆದರೆ ಡೇಟು ಮತ್ತು ವರ್ಷ ಯಾವುದು ಅಂತಾ ಗೊತ್ತಾಗಿಲ್ಲ!
ಭೀಮ ಮತ್ತು ಕೃಷ್ಣ ಪ್ರಣಯಸಖಿ ಸದ್ಯಕ್ಕೆ ಥೇಟರಲ್ಲಿ ಕಚ್ಚಿಕೊಂಡಿವೆ. ಈ ನಡುವೆ ಕನ್ನಡದ ಪೌಡರ್, ಲಾಫಿಂಗ್ ಬುದ್ದ, ರಾನಿ ಚಿತ್ರಗಳೂ ತೆರೆಗೆ ಬರುತ್ತಿವೆ. ಸೆಪ್ಟೆಂಬರ್ 27ಕ್ಕೆ ಸುದೀಪ ಅವರು ಮ್ಯಾಕ್ಸ್ ಅನ್ನು ಕಣಕ್ಕಿಳಿಸಿದರೆ ಕರೆಕ್ಟಾಗಿರುತ್ತದೆ. ಅಕ್ಟೋಬರ್ ತಿಂಗಳಲ್ಲಾದರೆ, ತೆಲುಗು ತಮಿಳಿನ ಸಿನಿಮಾಗಳೂ ಬರಲಿವೆ. ಕನ್ನಡದಿಂದ ತಯಾರಾಗಿರುವ ಮ್ಯಾಕ್ಸ್, ಭೈರತಿ ರಣಗಲ್ ಮತ್ತು ಮಾರ್ಟಿನ್ ಎನ್ನುವ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು ಒಂದಕ್ಕೊಂದು ಸ್ಪರ್ಧೆ ಕೊಡಲು ಹೋದರೆ ಥೇಟರ್ ಸಮಸ್ಯೆ ಗ್ಯಾರೆಂಟಿ.
ಈ ನಿಟ್ಟಿನಲ್ಲಿ ಮೊದಲು ಸೆಪ್ಟೆಂಬರ್ 27ಕ್ಕೆ ಮ್ಯಾಕ್ಸ್, ಅಕ್ಟೋಬರ್ 10ಕ್ಕೆ ಮಾರ್ಟಿನ್ ಮತ್ತು ಆ ನಂತರ ಸರತಿಯಲ್ಲಿ ಭೈರತಿ ರಣಗಲ್, ʻಯುಐʼಗಳು ಬಂದರೆ ಪ್ರೇಕ್ಷಕರ ದೃಷ್ಟಿಯಲ್ಲಿ ಮತ್ತು ಚಿತ್ರರಂಗದ ಹಿತಾಸಕ್ತಿಯ ಕಾರಣಕ್ಕೆ ಒಳ್ಳೇದು!
ʻʻಪ್ರೊಡಕ್ಷನ್ ಕಂಪೆನಿ ಮತ್ತು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಎಲ್ಲ ಮೀಟಿಂಗ್‌ಗಳು ನಡೆದು, ಈಗ ಸೆಪ್ಟೆಂಬರ್ 27ಕ್ಕೆ ಮ್ಯಾಕ್ಸ್ ಗೆ ಡೇಟ್ ಫಿಕ್ಸ್ ಮಾಡಲಾಗಿದೆʼʼ ಎನ್ನುವ ಇಂಟರ್ನಲ್ ಮಾಹಿತಿ ಹೊರಬಿದ್ದಿದೆ. ಅಧಿಕೃತವಾಗಿ ಕಿಚ್ಚ ರಣೋತ್ಸಾಹದಿಂದ ಅನೌನ್ಸ್ ಮಾಡೋದೊಂದು ಬಾಕಿ ಇದೆ!
No Comment! Be the first one.