ಅಮೆರಿಕಾದ ಸ್ಟಾರ್ ರೂಪದರ್ಶಿ ಮತ್ತು ರಿಯಾಲಿಟಿ ಶೋಗಳ ಚೆಲುವೆ ಕಿಮ್ ಕರ್ದಷಿಯಾನ್ ಸದ್ಯ ನಾಲ್ಕುನೇ ಮಗುವಿಗೆ ತಾಯಿಯಾಗಿದ್ದಾರೆ. ಪತಿ ಕಾನ್ಯೆವೆಸ್ಟ್ ಮತ್ತು ಕಿಮ್ ಜತೆಗೂಡಿ ಬಾಡಿಗೆ ತಾಯಿಯ ಮೂಲಕ ನಾಲ್ಕನೇ ಮಗುವನ್ನು ಪಡೆದಿರುವುದು ವಿಶೇಷವಾಗಿದೆ. ಈ ಹಿಂದೆಯೂ ಕಿಮ್, ಕಾನ್ಯೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು. ನಾಲ್ಕನೇ ಮಗುವಿನ ಕುರಿತು ಈಚೆಗಷ್ಟೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವನು ಇಲ್ಲಿದ್ದಾನೆ ಮತ್ತು ಅವನು ಪರಿಪೂರ್ಣ ಅವನು ಚಿಕಾಗೋನ ತಮ್ಮ, ಮುಂದಿನ ದಿನಗಳಲ್ಲಿ ಅವನು ಬಹಳಷ್ಟು ಬದಲಾವಣೆ ಹೊಂದುತ್ತಾನೆ. ಸದ್ಯಕ್ಕೆ ಅವನು ಅವಳಂತಿದ್ದಾನೆ ಎಂದು ಕಿಮ್ ಬರೆದುಕೊಂಡಿದ್ದಾರೆ.
38ರ ಹರೆಯದ ಕಿಮ್, ಅಮೆರಿಕದಲ್ಲಷ್ಟೇ ಅಲ್ಲ ಜಾಗತಿಕವಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚಿಗಷ್ಟೇ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ತನ್ನ ಮೈ ಬಣ್ಣದ ಉಡುಪು ತೊಟ್ಟು ನೀರಿನಿಂದ ಈಗಷ್ಟೇ ಎದ್ದು ಬಂದ ಮತ್ಸ್ಯಕನ್ಯೆಯಂತೆ ಗೋಚರಿಸುವಂತಿದ್ದ ಕಿಮ್, ನೆರೆದವರ ಆಕರ್ಷಣೆಯ ಕೇಂದ್ರವಾಗಿದ್ದರು. ಜಲಕನ್ಯೆಯಿಮದ ಗೋಚರಿಸುವಂತಿದ್ದ ಕಿಮ್, ನೆರೆದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ತಮ್ಮ ಆಕರ್ಷಕ ಮೈಮಾಟದ ಕಾರಣಕ್ಕಾಗಿ ಜಗತ್ತಿನಾದ್ಯಂತ ಲಕ್ಷಾಂತರ ಪಡ್ಡೆ ಹೈಕಳ ಕಣ್ಮಣಿಯಾಗಿರುವ ಕಿಮ್, ತಮ್ಮ ಹೆಸರಿನದ್ದೇ ಸೌಂದರ್ಯ ಪ್ರಸಾದನಗಳನ್ನು ತಯಾರಿಸಿ ಆನ್ ಲೈನ್ ಮೂಲಕ ಲಾಭ ಗಳಿಸುತ್ತಿದ್ದಾರೆ.
No Comment! Be the first one.